ನವದೆಹಲಿ: ದೇಶದ ಸಂವಿಧಾನವು ಅತ್ಯಂತ ಶಕ್ತಿಶಾಲಿಯಾಗಿದೆ. ಸಂವಿಧಾನವು ದೇಶಕ್ಕೆ ನಿರಂತರ ಮಾರ್ಗದರ್ಶನ ನೀಡುವ ವರ್ತಮಾನ ಮತ್ತು ಭವಿಷ್ಯದ ಚಿಲುಮೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ನಲ್ಲಿ ಸಂವಿಧಾನ ದಿನದ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದ ಪ್ರೇರಣೆ ಪಡೆದು ಜನರ ಕಲ್ಯಾಣಕ್ಕಾಗಿ ಹೆಜ್ಜೆ ಇಟ್ಟಿದ್ದೇವೆ. ನಾಗರಿಕರ ಜೀವನ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲೂ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

2008ರ ಮುಂಬೈ ದಾಳಿಯ ಬಗ್ಗೆಯೂ ಪ್ರಸ್ತಾಪಿಸಿದ ಅವರು, ದೇಶದ ಭದ್ರತೆಗೆ ಸವಾಲೊಡ್ಡುವ ಭಯೋತ್ಪಾದಕ ಸಂಘಟನೆಗಳಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.

‘ಭಾರತೀಯ ಸಂವಿಧಾನಕ್ಕೆ ಈಗ 75ನೇ ವರ್ಷ. ಇದು ದೇಶಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಸಂವಿಧಾನ ಮತ್ತು ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ಎಲ್ಲರಿಗೂ ನಾನು ತಲೆಬಾಗುತ್ತೇನೆ. ಇಂದು 2008ರ ಮುಂಬೈ ದಾಳಿಯ ದಿನ ಎಂಬುದನ್ನೂ ನಾನು ಮರೆತಿಲ್ಲ. ಮೃತಪಟ್ಟ ಎಲ್ಲರಿಗೂ ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ. ದೇಶದ ಭದ್ರತೆಗೆ ಸವಾಲೊಡ್ಡುವ ಪ್ರತಿಯೊಂದು ಭಯೋತ್ಪಾದಕ ಸಂಘಟನೆಗೆ ತಕ್ಕ ಉತ್ತರ ನೀಡುವುದಾಗಿ ದೇಶದ ನಿರ್ಣಯವನ್ನು ಪುನರುಚ್ಛರಿಸುತ್ತೇನೆ’ಎಂದು ಅವರು ಹೇಳಿದ್ದಾರೆ.

'ದೇಶದ ನಾಗರಿಕರು ತೊಂದರೆರಹಿತವಾಗಿ ಬದುಕಲು ನಾವು ಒತ್ತು ನೀಡುತ್ತಿದ್ದೇವೆ. ಒಂದು ಕಾಲದಲ್ಲಿ ಪಿಂಚಣಿ ಪಡೆಯುತ್ತಿದ್ದ ಹಿರಿಯ ನಾಗರಿಕರು ತಾವು ಬದುಕಿದ್ದೇವೆ ಎಂದು ಬ್ಯಾಂಕ್ಗೆ ಹೋಗಿ ಸಾಬೀತುಪಡಿಸಬೇಕಾಗಿತ್ತು. ಆದರೆ, ಇಂದು, ಹಿರಿಯ ನಾಗರಿಕರಿಗೆ ಡಿಜಿಟಲ್ ಲೈಫ್ ಸೌಲಭ್ಯವಿದೆ. ಈ ಸೌಲಭ್ಯದಿಂದ ಸುಮಾರು 1.5 ಕೋಟಿ ಹಿರಿಯ ನಾಗರಿಕರು ತಮ್ಮ ಮನೆಯಿಂದ ಪ್ರಮಾಣಪತ್ರ ಪಡೆದಿದ್ದಾರೆ’ಎಂದು ಹೇಳಿದರು.

'ದೇಶ ಮೊದಲು' ಎಂಬ ಮನೋಭಾವದಿಂದ ಬದುಕಬೇಕು ಎಂದು ಪ್ರಧಾನಿ ಮೋದಿ ಜನರನ್ನು ಒತ್ತಾಯಿಸಿದ್ದಾರೆ.

ತಮಗಿಂತ ದೇಶದ ಹಿತಾಸಕ್ತಿಗಾಗಿ ದುಡಿಯುವ 50 ಪ್ರಾಮಾಣಿಕ ಜನರ ಗುಂಪು ಭಾರತಕ್ಕೆ ಬೇಕೆ ಹೊರತು ಬೇರೇನೂ ಬೇಕಾಗಿಲ್ಲ ಎಂದು ಡಾ. ರಾಜೇಂದ್ರ ಪ್ರಸಾದ್ ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ಹೇಳಿದ್ದರು. ಸಂವಿಧಾನಕ್ಕೆ ತಕ್ಕ ಘನತೆಯನ್ನು ಅನುಸರಿಸಿದ್ದೇನೆ. ಯಾವುದೇ ಅತಿಕ್ರಮಣಕ್ಕೆ ಪ್ರಯತ್ನಿಸಿಲ್ಲ, ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.