ನವದೆಹಲಿ: ಕ್ಷಯದಿಂದಾಗಿ ಭಾರತದಲ್ಲಿ ಪ್ರತಿ ವರ್ಷ ಸಂಭವಿಸುವ ಮರಣ ಪ್ರಮಾಣದಲ್ಲಿ ಶೇ 20–40ರಷ್ಟು ಇಳಿಕೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ ) ಅಂದಾಜಿಸಿದೆ.

ದೇಶದಲ್ಲಿ ಸಂಭವಿಸುತ್ತಿರುವ ಸಾವು ಹಾಗೂ ಅದಕ್ಕೆ ಕಾರಣಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ತನ್ನೊಂದಿಗೆ ಹಂಚಿಕೊಂಡಿರುವ ಹೊಸ ವರದಿಗಳು ಈ ಅಂದಾಜಿಗೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸಂಸ್ಥೆಯು ಬಿಡುಗಡೆ ಮಾಡಿರುವ ‘ಜಾಗತಿಕ ಕ್ಷಯ ವರದಿ, 2023’ರಲ್ಲಿರುವ ಹೊಸ ದತ್ತಾಂಶಗಳ ಪ್ರಕಾರ. ಭಾರತದಲ್ಲಿ ಕ್ಷಯದಿಂದಾಗಿ ಸಂಭವಿಸುವ ಸಾವಿನಲ್ಲಿ ಇಳಿಕೆಯಾಗಿರುವ ಕುರಿತ ಮಾಹಿತಿ ಇದೆ.

‘ಜಾಗತಿಕ ಕ್ಷಯ ವರದಿ’ಯ 2021 ಹಾಗೂ 2022ರ ಆವೃತ್ತಿಗಳಲ್ಲಿ, ಭಾರತದಲ್ಲಿ ಕ್ಷಯ ಸಂಬಂಧಿತ ವಾರ್ಷಿಕ ಸಾವಿನ ಸಂಖ್ಯೆ 5 ಲಕ್ಷ ದಾಟಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಹೊಸ ದತ್ತಾಂಶಗಳನ್ನು ಆಧರಿಸಿದ ಸಿದ್ಧಪಡಿಸಿರುವ ಪ್ರಸಕ್ತ ವರ್ಷದ ವರದಿಯಲ್ಲಿ 2020 ಹಾಗೂ 2021ರಲ್ಲಿ ಸಾವಿನ ಪ್ರಮಾಣ 2.5 ಲಕ್ಷದಿಂದ 4 ಲಕ್ಷ ಇತ್ತು ಎಂದು ವಿವರಿಸಲಾಗಿದೆ.

‘2013ರ ವರೆಗೆ ಮಾದರಿ ನೋಂದಣಿ ವ್ಯವಸ್ಥೆ (ಎಸ್‌ಆರ್‌ಎಸ್)ಯಡಿ ಲಭ್ಯವಿದ್ದ ದತ್ತಾಂಶವನ್ನು ಭಾರತ ಒದಗಿಸಿತ್ತು. ಈ ದತ್ತಾಂಶವನ್ನು ಆಧರಿಸಿ ಈ ಹಿಂದಿನ ವರದಿಗಳನ್ನು ಪ್ರಕಟಿಸಲಾಗಿತ್ತು’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯ ನಿರ್ಮೂಲನಾ ಕಾರ್ಯಕ್ರಮದ ನಿರ್ದೇಶಕಿ ತೆರೆಜಾ ಕಸೇವಾ ಹೇಳಿದ್ದಾರೆ.

‘ಕ್ಷಯ ಪ್ರಕರಣಗಳು ಹಾಗೂ ಕಾಯಿಲೆಯಿಂದ ಸಂಭವಿಸುವ ಸಾವಿನ ಪ್ರಮಾಣ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಕೈಗೊಂಡ ಪ್ರಯತ್ನಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರತಿಕ್ರಿಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.