ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನಾದೇಶದೊಂದಿಗೆ ಚೆಲ್ಲಾಟ ಬೇಡ: ಕೇಂದ್ರ ಸರ್ಕಾರ, ಲೆಫ್ಟಿನೆಂಟ್ ಗವರ್ನರ್‌ಗೆ ಒಮರ್

Published : 8 ಅಕ್ಟೋಬರ್ 2024, 4:45 IST
Last Updated : 8 ಅಕ್ಟೋಬರ್ 2024, 4:45 IST
ಫಾಲೋ ಮಾಡಿ
Comments

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜನರ ಆದೇಶದೊಂದಿಗೆ ಯಾವುದೇ ಚೆಲ್ಲಾಟ ಆಡಬಾರದು. ಕೇಂದ್ರ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಯಾವುದೇ ಕುತಂತ್ರಗಳಲ್ಲಿ ತೊಡಗಬಾರದು ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ. .

‘ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಎಲ್ಲ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಇರಬೇಕು. ಏನೇ ನಡೆದರೂ ಪಾರದರ್ಶಕವಾಗಿ ನಡೆಯಬೇಕು. ಜನಾದೇಶಕ್ಕೆ ಯಾವುದೇ ತಡೆ ಇರಬಾರದು. ಜನಾದೇಶ ಬಿಜೆಪಿ ವಿರುದ್ಧವಾಗಿದ್ದರೆ ಬಿಜೆಪಿ ಯಾವುದೇ ಕುತಂತ್ರಕ್ಕೆ ಕೈ ಹಾಕಬಾರದು’ಎಂದು ಅಬ್ದುಲ್ಲಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏಕೆಂದರೆ, ಮತಗಳ ಎಣಿಕೆಯ ಆರಂಭಿಕ ಟ್ರೆಂಡ್ ಬಿಜೆಪಿ ಮತ್ತು ಇತರ ಪ್ರತಿಸ್ಪರ್ಧಿಗಳಿಗಿಂತ ನಮ್ಮ ಮೈತ್ರಿಕೂಟದ ಪರವಾಗಿದೆ ಎಂದಿದ್ದಾರೆ.

‘ಗೆಲುವಿನ ಬಗ್ಗೆ ನಮಗೆ ವಿಶ್ವಾಸವಿದೆ. ಉಳಿದಿದ್ದು ದೇವರಿಗೆ ಬಿಟ್ಟದ್ದು. ಮಧ್ಯಾಹ್ನದ ಹೊತ್ತಿಗೆ ಜಮ್ಮು ಮತ್ತು ಕಾಶ್ಮೀರದ ಜನರ ತೀರ್ಪು ಸ್ಪಷ್ಟವಾಗಲಿದೆ’ಎಂದಿದ್ದಾರೆ.

ಐವರು ಶಾಸಕರನ್ನು ನಾಮ ನಿರ್ದೇಶನ ಮಾಡುವ ಅಧಿಕಾರದ ಬಗ್ಗೆ ಕೇಳಿದಾಗ, ಅದು ಚುನಾಯಿತ ಸರ್ಕಾರದ ಅಧಿಕಾರವಾಗಿದೆ. ನಮ್ಮ ವಕೀಲರ ಪ್ರಕಾರ ಶಾಸಕರ ನಾಮ ನಿರ್ದೇಶನಕ್ಕೆ ಲೆಫ್ಟಿನೆಂಟ್ ಗವರ್ನರ್‌ಗೆ ಅಧಿಕಾರವಿಲ್ಲ. ವಿಧಾನಸಭೆ ರಚನೆಯಾದ ಬಳಿಕ ಅವರ ನಾಮನಿರ್ದೆಶನ ಮಾಡುವುದು ಚುನಾಯಿತ ಸರ್ಕಾರದ ಹಕ್ಕಾಗಿದೆ ಎಂದಿದ್ದಾರೆ.

ಹಾಗಾಗಿ, ಲೆಫ್ಟಿನೆಂಟ್ ಗವರ್ನರ್ ಅವರು, ಸಂವಿಧಾನವನ್ನು ಮನಸಿನಲ್ಲಿಟ್ಟುಕೊಳ್ಳಬೇಕು. ಈ ಐದು ಸ್ಥಾನಗಳನ್ನು ಚುನಾಯಿತ ಸರ್ಕಾರದ ಸಲಹೆ ಮೇಲೆ ತುಂಬಬೇಕು ಎಂದು ಅವರು ಹೇಳಿದ್ದಾರೆ.

ಫಲಿತಾಂಶದ ನಂತರ ಸರ್ಕಾರ ರಚನೆಗಾಗಿ ಪಿಡಿಪಿ, ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸೇರುವ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿಕೂಟವು ಯಾವುದೇ ಬೆಂಬಲ ಕೇಳಿಲ್ಲ ಅಥವಾ ಪಿಡಿಪಿಯಿಂದ ಮೈತ್ರಿಕೂಟ ಸೇರುವ ಪ್ರಸ್ತಾವನೆ ಬಂದಿಲ್ಲ ಎಂದಿದ್ದಾರೆ. ಮೊದಲು ಫಲಿತಾಂಶಗಳು ಬರಲಿ, ಇನ್ನೂ ಯಾರ ಬಳಿಯೂ ಅಂಕಿಅಂಶಗಳಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT