ಹೂಗ್ಲಿ( ಪಶ್ಚಿಮ ಬಂಗಾಳ) : ಸಂದೇಶ್ಖಾಲಿ ಪ್ರಕರಣದ ಸಂತ್ರಸ್ತೆಯರಿಗೆ ಟಿಎಂಸಿ ನಾಯಕರು ಬೆದರಿಕೆಯೊಡ್ಡುತ್ತಿದ್ದಾರೆ. ಟಿಎಂಸಿಯು ಅಪರಾಧಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಆರೋಪಿಸಿದ್ದಾರೆ.
.ನಟ ಅಲ್ಲು ಅರ್ಜುನ್ ವಿರುದ್ಧ ಆಂಧ್ರಪ್ರದೇಶದಲ್ಲಿ ಪ್ರಕರಣ ದಾಖಲು.LS Polls |ಪ್ರಧಾನಿ ಮೋದಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆ: ಅನುರಾಗ್ ಠಾಕೂರ್.
ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಭಗವಾನ್ ರಾಮನ ಹೆಸರು ಹೇಳಲು ಆಗದ ಹಾಗೂ ಶ್ರೀ ರಾಮನವಮಿಯನ್ನು ಆಚರಿಸಲಾದ ಪರಿಸ್ಥಿತಿಯಲ್ಲಿ ಹಿಂದೂಗಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹಿಂದೂಗಳು ದ್ವಿತೀಯ ದರ್ಜೆಯ ಪ್ರಜೆಗಳಾಗಿ ಬದಲಾಗಿದ್ದಾರೆ ಎಂದು ಹೇಳಿದ್ದಾರೆ.

ಸಂದೇಶ್ಖಾಲಿಯ ಸಹೋದರಿಯರಿಗೆ ಹಾಗೂ ತಾಯಂದಿರಿಗೆ ಟಿಎಂಸಿ ಏನು ಮಾಡಿದೆ. ಟಿಎಂಸಿ ಅಪರಾಧಿಗಳನ್ನು ರಕ್ಷಿಸುತ್ತಿದೆ. ಸಂದೇಶ್ಖಾಲಿ ಪ್ರಕರಣದ ಮುಖ್ಯ ಆರೋಪಿ ಶಾಜಹಾನ್ ಶೇಖ್ ಅವರ ಸಹಚರರು ಸಂತ್ರಸ್ತೆರನ್ನು ಬೆದರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
.‘ಕೇಜ್ರಿವಾಲ್ ಕಿ ಗ್ಯಾರಂಟಿ’ ಘೋಷಿಸಿದ ದೆಹಲಿ ಸಿಎಂ ಕೇಜ್ರಿವಾಲ್.ಹೊರಹೋಗುವ ಉದ್ಯೋಗಿಗಳ ನೋಟಿಸ್ ಅವಧಿ ತಗ್ಗಿಸಿದ HDFC ಬ್ಯಾಂಕ್.
ಇಂಡಿಯಾ ಮೈತ್ರಿಕೂಟವು ಈ ಬಾರಿ ಕನಿಷ್ಠ 50 ಸ್ಥಾನಗಳನ್ನು ಗೆಲುವುದಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ಗಳಿಸುವ ಮೂಲಕ ಸಾರ್ವತ್ರಿಕ ದಾಖಲೆ ಸೃಷ್ಟಿಸಲಿದೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.

ಟಿಎಂಸಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯವನ್ನು ಬಾಂಬ್ ತಯಾರಿಸುವ ಕೈಗಾರಿಕಾ ಕೇಂದ್ರವನ್ನಾಗಿ ಮಾಡಿದೆ. ಟಿಎಂಸಿ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
.ಆಂಧ್ರದಲ್ಲಿ ಅಪಘಾತ: ಕಿರುತೆರೆ ನಟಿ ಪವಿತ್ರಾ ಜಯರಾಂ ಸಾವು.24 ವರ್ಷ CM ಆದರೂ ನವೀನ್ ಬಾಬುಗೆ ಒಡಿಶಾದ ಜಿಲ್ಲೆಗಳ ಹೆಸರು ಗೊತ್ತಿಲ್ಲ: PM ಮೋದಿ.
ಮೋದಿ ಅಧಿಕಾರದಲ್ಲಿರುವವರೆಗೂ ಸಿಎಎ ಕಾನೂನು ಜಾರಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಎನ್ಡಿಎ ಮೈತ್ರಿಕೂಟ ಮಾತ್ರವೇ ದೇಶದಲ್ಲಿ ಸ್ಥಿರ ಸರ್ಕಾರ ಸ್ಥಾಪಿಸಲು ಸಾಧ್ಯ ಎಂದು ಹೇಳಿದ್ದಾರೆ.

ರಾಮಮಂದಿರ ನಿರ್ಮಾಣವನ್ನು ಕಾಂಗ್ರೆಸ್ ಹಾಗೂ ಟಿಎಂಸಿ ಪಕ್ಷದವರು ವಿರೋಧಿಸುತ್ತಾರೆ. ಆದರೆ ರಾಮಮಂದಿರ 500 ವರ್ಷಗಳ ನಿರಂತರ ಹೋರಾಟದ ಪ್ರತೀಕವಾಗಿದೆ. ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವುದು ಬಂಗಾಳದ ಸಂಸ್ಕೃತಿಯಲ್ಲ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.