ಕೋಲ್ಕತ್ತ: ನೀಟ್ ಪರೀಕ್ಷೆಯಲ್ಲಿ ಅಕ್ರಮ ಹಾಗೂ ಹೊಸ ಕ್ರಿಮಿನಲ್ ಕಾನೂನುಗಳ ಜಾರಿಯಲ್ಲಿ ತೋರಿದ ಅವಸರವನ್ನು ಖಂಡಿಸಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಿಲುವಳಿ ಮಂಡಿಸಲು ಆಡಳಿತರೂಢ ಟಿಎಂಸಿ ತೀರ್ಮಾನಿಸಿದೆ. ಜುಲೈ 22ರಿಂದ ವಿಧಾನಸಭೆಯ ಅಧಿವೇಶನ ನಡೆಯಲಿದೆ.
.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಆರೋಪಿ ಸಿಬಿಐ ವಶಕ್ಕೆ.
'ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ವಿವಾದ ಮತ್ತು ಮೂರು ಕ್ರಿಮಿನಲ್ ಕಾನೂನು ಜಾರಿಗೆ ತೋರಿದ ಅವಸರವನ್ನು ಖಂಡಿಸಿ ಎರಡು ನಿಲುವಳಿಗಳನ್ನು ಮಂಡಿಸಲಾಗುವುದು’ ಎಂದು ಟಿಎಂಸಿಯ ಹಿರಿಯ ಶಾಸಕರೊಬ್ಬರು ತಿಳಿಸಿದ್ದಾರೆ.
.ನೀಟ್, ನೆಟ್ ಪರೀಕ್ಷೆಗಳಲ್ಲಿ ಹಗರಣ: ತನಿಖೆಗೆ ಎಐಡಿಎಸ್ಒ ಆಗ್ರಹ.
‘ಸ್ಪೀಕರ್ ಅಧಿವೇಶನವನ್ನು ಕರೆದಿದ್ದಾರೆ. ಜುಲೈ 22ರಿಂದ ಆರಂಭವಾಗಿ 10 ದಿನಗಳು ನಡೆಯಲಿದೆ. ಸದನ ಕಾರ್ಯಕಲಾಪಗಳ ಸಲಹಾ ಸಮಿತಿ ಹಾಗೂ ಸರ್ವಪಕ್ಷಗಳ ಸಭೆಯಲ್ಲಿ ಕಲಾಪದ ದಿನಗಳನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದು ಸಂಸದೀಯ ವ್ಯವಹಾರಗಳ ಸಚಿವ ಶೊಭನ್ದೇವ್ ಚಟ್ಟೋಪಾಧ್ಯಾಯ ತಿಳಿಸಿದ್ದಾರೆ.

ಆದರೆ ಯಾವ ಮಸೂದೆಗಳನ್ನು ಮಂಡಿಸಲಾಗುವುದು ಎನ್ನುವುದ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದರು.
.ನೀಟ್ ಪರೀಕ್ಷೆ: ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸಚಿವ ಡಾ.ಶರಣಪ್ರಕಾಶ್ ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.