ಕೊಯಮತ್ತೂರು (ತಮಿಳುನಾಡು): ಡಿಎಂಕೆ ಸಂಸದೆ ಕನಿಮೋಳಿ ಅವರ ಪ್ರಯಾಣದ ವೇಳೆ ಟಿಕೆಟ್ ವಿಚಾರವಾಗಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ ನಗರದ ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ಅವರು ಶುಕ್ರವಾರ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ಕನಿಮೋಳಿ ಅವರು ಟಿಕೆಟ್ ಖರೀದಿಸಿದ್ದರೂ ಮಹಿಳಾ ಕಂಡಕ್ಟರ್‌ನಿಂದ 'ಅಗೌರವ' ಉಂಟಾಗಿದೆ ಎಂದು ಶರ್ಮಿಳಾ ಆರೋಪಿಸಿದ್ದಾರೆ.

‘ತಮ್ಮೊಂದಿಗಿದ್ದ ಮಹಿಳಾ ಕಂಡಕ್ಟರ್, ಕನಿಮೋಳಿ ಅವರನ್ನು ಅವಮಾನಿಸಿದ್ದಾರೆ. ಅಲ್ಲದೆ, ಪ್ರಚಾರ ಗಳಿಸಲು ಪ್ರಮುಖ ವ್ಯಕ್ತಿಗಳನ್ನು ಬಸ್‌ನಲ್ಲಿ ಪ್ರಯಾಣಿಸುವಂತೆ ಆಹ್ವಾನಿಸುತ್ತಾರೆ ಎಂದು ಆಡಳಿತ ಮಂಡಳಿಯು ಆರೋಪಿಸುತ್ತಿದೆ. ಈ ಎಲ್ಲಾ ಕಾರಣದಿಂದ ‘ಕನಸಿನ ಉದ್ಯೋಗ’ವನ್ನು ತೊರೆಯುತ್ತಿದ್ದೇನೆ‘ ಎಂದು ಶರ್ಮಿಳಾ ಹೇಳಿದ್ದಾರೆ.

‘ನಾನು ಚಲಾಯಿಸುತ್ತಿದ್ದ ಬಸ್ ಹತ್ತಿದ್ದ ಕನಿಮೋಳಿ ಅವರು ನಗರದ ಗಾಂಧಿಪುರಂನಿಂದ ಪೀಲಮೆಡುವರೆಗೆ ಪ್ರಯಾಣಿಸಿದ್ದರು. ಈ ವೇಳೆ ಅವರ ಬಳಿ ಟಿಕೆಟ್ ಇದ್ದರೂ ಕಂಡಕ್ಟರ್ ಅವರನ್ನು ಅವಮಾನಿಸುವಂತೆ ವರ್ತಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಮತ್ತು ನನ್ನ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಅದೂ ಅಲ್ಲದೆ ಆಡಳಿತಕ್ಕೆ ಕನಿಮೋಳಿ ಅವರ ಪ್ರಯಾಣದ ಬಗ್ಗೆ ತಿಳಿಸಿದ್ದೆ‘ ಎಂದು ಶರ್ಮಿಳಾ ಹೇಳುತ್ತಾರೆ.

ವಾದ ಆರಂಭವಾಗಿದ್ದು, ಕನ್ನಿಮೋಳಿ ಟಿಕೆಟ್‌ಗೆ ಸಂಬಂಧಿಸಿದಂತೆ ಅಲ್ಲ, ಅವರ ಬೆಂಬಲಿಗರ ಟಿಕೆಟ್ ವಿಚಾರದಲ್ಲಿ ಎಂಬುದಾಗಿ ಪ್ರಯಾಣಿಕರು ತಿಳಿಸಿದ್ದಾರೆ.

ಆದರೆ ಸಾರಿಗೆ ಮಾಲೀಕ ದುರೈ ಕಣ್ಣನ್ ಕನಿಮೋಳಿ ಭೇಟಿಯ ಬಗ್ಗೆ ಮಾಹಿತಿ ಇತ್ತು ಎನ್ನುವುದನ್ನು ಒಪ್ಪಿಕೊಂಡಿಲ್ಲ. ಒಂದು ವೇಳೆ ನಮಗೆ ನಿಖರವಾಗಿ ಅವರ ಪ್ರಯಾಣದ ಬಗ್ಗೆ ತಿಳಿಸಿದ್ದರೆ, ಸೂಕ್ತ ವ್ಯವಸ್ಥೆ ಮಾಡುತ್ತಿದ್ದೆವು’ ಎಂದೂ ಅವರು ಹೇಳಿದ್ದಾರೆ.

ಶರ್ಮಿಳಾ ಅವರನ್ನು ಕೆಲಸ ಬಿಡುವಂತೆ ಆಡಳಿತ ಮಂಡಳಿ ಬಲವಂತಪಡಿಸಿದೆ ಎಂಬ ಆರೋಪವನ್ನೂ ಸಾರಿಗೆ ಮಾಲೀಕರು ತಳ್ಳಿಹಾಕಿದ್ದು, ತಮ್ಮ ಇಚ್ಛೆಯ ಮೇರೆಗೆ ಅವರು ಕೆಲಸ ತೊರೆದರು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.