* ರಾಜ್ಯಸಭೆಗೆ ಲತಾ, ನಾರಿಮನ್, ನಾನಾಜಿ, ಚೊ ನಾಮಕರಣ

ನವದೆಹಲಿ, ನ. 20 (ಪಿಟಿಐ)– ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್, ಆರ್ಎಸ್ಎಸ್ನ ಹಿರಿಯ ಮುಖಂಡ ನಾನಾಜಿ ದೇಶ್ಮುಖ್, ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ಮತ್ತು ತಮಿಳು ಪತ್ರಕರ್ತ ಚೊ ರಾಮಸ್ವಾಮಿ ಅವರನ್ನು ಇಂದು ರಾಜ್ಯಸಭೆಗೆ ನಾಮಕರಣ ಮಾಡಲಾಗಿದೆ.

60ರ ದಶಕದ ಆದಿಯಲ್ಲಿ ‘ಆಯೆ ಮೇರೆ ವತನ್ ಕೆ ಲೋಗೋ’ ಎಂದು ಹಾಡಿ ಜವಾಹರ್ಲಾಲ್ ನೆಹರೂ ಅವರ ಕಣ್ಣಲ್ಲಿ ನೀರು ತಂದಿದ್ದ 70 ವರ್ಷ ವಯಸ್ಸಿನ ಲತಾ ಮಂಗೇಶ್ಕರ್ ಅವರು ಸಂಸತ್ತನ್ನು ಪ್ರವೇಶಿಸುತ್ತಿರುವುದು ಇದೇ ಮೊದಲ ಬಾರಿ.

ಪ್ರಧಾನಿ ಕಚೇರಿಯೊಂದಿಗೆ ಚರ್ಚಿಸಿದ ಗೃಹ ಸಚಿವಾಲಯ ಈ ನಾಲ್ವರನ್ನು ಆಯ್ಕೆ ಮಾಡಿದ್ದು, ಅನುಮೋದನೆಗಾಗಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರಿಗೆ ಕಳಿಸಿಕೊಟ್ಟಿದೆ. ಈ ನಾಲ್ಕು ಮಂದಿ, ಖ್ಯಾಟ ನಟಿ ವೈಜಯಂತಿಮಾಲಾ ಬಾಲಿ ಸೇರಿದಂತೆ ನಾಲ್ಕು ಮಂದಿ ಸದಸ್ಯರಿಂದ ತೆರವಾಗಿರುವ ಸ್ಥಾನವನ್ನು ತುಂಬಲಿದ್ದಾರೆ.

‘ದಿ ಕಾರ್ಟ್’ ಅತ್ಯುತ್ತಮ: ಭಾರತದ ‘ಮಲ್ಲಿ’ಗೆ ಬಾಲನಟಿ ಪ್ರಶಸ್ತಿ

ಹೈದರಾಬಾದ್, ನ. 20 (ಪಿಟಿಐ)– ಇರಾನ್ನ ಖ್ಯಾತ ನಿರ್ದೇಶಕ ಗುಲಾಂ ರಜಿ ರಮೆಜಾನಿ ಅವರ ನಿರ್ದೇಶನದ ‘ದಿ ಕಾರ್ಟ್’ ಮಕ್ಕಳ ಚಿತ್ರವು ‘ಅತ್ಯುತ್ತಮ ಕಥಾಚಿತ್ರ’ ಪ್ರಶಸ್ತಿ ಸಹಿತ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಇಂದು ಇಲ್ಲಿ ಅಂತ್ಯವಾದ 11ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ‘ಗೋಲ್ಡನ್ ಎಲಿಫೆಂಟ್’, ‘ಇಂಟರ್ ನ್ಯಾಷನಲ್ ಕ್ರಿಟಿಕ್ಸ್ ಜ್ಯೋರಿ’ ಮತ್ತು ‘ಚಿಲ್ದ್ರನ್ಸ್ ಜ್ಯೂರಿ’ ಪ್ರಶಸ್ತಿ ‘ದಿ ಕಾರ್ಟ್’ಗೆ ಲಭಿಸಿದೆ.

ಸಂತೋಷ್ ಶಿವನ್ ನಿರ್ದೇಶನದ ‘ಮಲ್ಲಿ’ ಆ್ಯಕ್ಷನ್ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಪುಟ್ಟ ಹುಡುಗಿ ಶ್ವೇತಾ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಗೆದ್ದಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.