ತಿರುವನಂತಪುರ: ವಯನಾಡ್ ಭೂಕುಸಿತ ದುರಂತ ಸಂತ್ರಸ್ತರಿಗೆ ‘ಸಮುದಾಯ ಜೀವನ’ (community living) ಮಾದರಿಯ ಟೌನ್ಶಿಪ್ ನಿರ್ಮಾಣ ಮಾಡಲು ಎರಡು ಸ್ಥಳಗಳನ್ನು ಸರ್ಕಾರ ಅಂತಿಮಗೊಳಿಸಿದೆ ಎಂದು ಸಚಿವ ಕೆ. ರಾಜನ್ ಶುಕ್ರವಾರ ಹೇಳಿದ್ದಾರೆ.
.ಪ್ರಧಾನಿ ಭೇಟಿ ಮಾಡಿದ ಕೇರಳ CM: ವಯನಾಡ್ ಸಂತ್ರಸ್ತರಿಗೆ ಪುನರ್ವಸತಿ ಕುರಿತು ಚರ್ಚೆ.
‘ಭೂಕುಸಿತ ಸಂತ್ರಸ್ತರ ಸಂಪೂರ್ಣ ಪುನರ್ವಸತಿಗಾಗಿ ನಾವು ಕಲ್ಪೆಟ್ಟಾ ಹಾಗೂ ಕೊಟ್ಟಪಾಡಿಯಲ್ಲಿ ಎರಡು ಸ್ಥಳಗಳನ್ನು ಸಮುದಾಯ ಜೀವನ ಮಾದರಿಯ ಟೌನ್ಶಿಪ್ ನಿರ್ಮಾಣ ಮಾಡಲು ಗುರುತಿಸಿದ್ದೇವೆ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಮನೆಗಳನ್ನು ಮಾತ್ರ ನೀಡಿ ನಾವು ಅವರಿಗೆ ಪುನರ್ವಸತಿ ಕಲ್ಪಿಸುವುದಿಲ್ಲ. ಬದಲಾಗಿ ಅವರಿಗೆ ಉದ್ಯೋಗ ಹಾಗೂ ಶಿಕ್ಷಣ ನೀಡಿ ಅವರಿಗೆ ಸಮಗ್ರ ಜೀವನ ನೀಡಲು ಉದ್ದೇಶಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
.ವಯನಾಡ್ ಸಂತ್ರಸ್ತರ ಪರಿಹಾರ ಹಣವನ್ನು ಸಾಲಕ್ಕೆ ಕಡಿತಗೊಳಿಸುತ್ತಿರುವ ಬ್ಯಾಂಕ್ಗಳು.
‘ಆಸ್ಪತ್ರೆ, ಸಾರ್ವಜನಿಕ ವ್ಯವಸ್ಥೆ, ಸಮುದಾಯ ಕೇಂದ್ರ, ಪ್ರಾಥಮಿಕ ಶಾಲೆ ಸೇರಿ ಸಂಪೂರ್ಣ ಸೌಲಭ್ಯಗಳು ಇರಲಿವೆ’ ಎಂದು ಹೇಳಿದ್ದಾರೆ.

ದುರಂತ ಸಂಭವಿಸಿದ ಸ್ಥಳದಿಂದ ಕೊಟ್ಟಪಾಡಿ 11 ಕಿ.ಮೀ ಹಾಗೂ ಕಲ್ಪೆಟ್ಟಾ 35 ಕಿ.ಮೀ ದೂರದಲ್ಲಿದೆ. ಕಲ್ಪೆಟ್ಟಾ ವಯನಾಡ್ ಜಿಲ್ಲೆಯ ಕೇಂದ್ರ ಸ್ಥಾನವೂ ಹೌದು.
.ವಯನಾಡ್ ಭೂಕುಸಿತ: ಸಂತ್ರಸ್ತರ ನೋವಿನ ಕಥೆ ಕೇಳಿ ಭಾವುಕರಾದ ಸಚಿವ.
ಜುಲೈ 30ರಂದು ನಡೆದ ಈ ದುರಂತದಲ್ಲಿ ಪುಂಜಿರಿಮ್ಟಂ, ಚೂರಲ್ಮಲ ಹಾಗೂ ಮುಂಡಕ್ಕೈ ಎನ್ನುವ ಮೂರು ಗ್ರಾಮಗಳು ನಾಮಾವಾಶೇಷವಾಗಿದ್ದವು. 200ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು.
.Wayanad landslide: 728 ಕುಟುಂಬಗಳಿಗೆ ತಾತ್ಕಾಲಿಕ ಪುನರ್ವಸತಿ ಪ್ರಕ್ರಿಯೆ ಪೂರ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.