ಮುಂಬೈ: ಮಹಾರಾಷ್ಟ್ರದಲ್ಲಿ ಮಂಗಳವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡಣವಿಸ್ ರಾಜೀನಾಮೆ ಸಲ್ಲಿಸಿದ್ದು, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನೂತನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.

ಶಿವಸೇನಾಗೆ ಎನ್ಸಿಪಿ ಮತ್ತು ಕಾಂಗ್ರೆಸ್ ಪೂರ್ಣ ಬೆಂಬಲ ನೀಡಿದ್ದು, ಮುಂದಿನ 5 ವರ್ಷಗಳಿಗೆ ಉದ್ಧವ್ ಠಾಕ್ರೆ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಶಿವಸೇನಾ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.

ಇದನ್ನೂ ಓದಿ:‘ಮಹಾ’ ತಿರುವು: ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡಣವೀಸ್ ರಾಜೀನಾಮೆ

ಐದು ವರ್ಷಗಳ ಮೈತ್ರಿ ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿ ಸ್ಥಾನದ ಹಂಚಿಕೆ ಇಲ್ಲ, ಉದ್ಧವ್ ಠಾಕ್ರೆ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದಿದ್ದಾರೆ. ಎನ್ಸಿಪಿಯ ಜಯಂತ್ ಪಾಟೀಲ್ ಮತ್ತು ಕಾಂಗ್ರೆಸ್ನಬಾಳಸಾಹೇಬ್ ಥೋರಟ್ ಅವರಿಗೆಉಪಮುಖ್ಯಮಂತ್ರಿ ಸ್ಥಾನ ದೊರೆಯುವ ಸಾಧ್ಯತೆಯಿದೆ.

ಅಜಿತ್ ಪವಾರ್ ರಾಜೀನಾಮೆ ನೀಡಿರುವುದು ಸರಿಯಾಗಿದೆ, ಅವರು ಪಕ್ಷಕ್ಕೆ ಮರಳಲಿ ಎಂದು ಎನ್ಸಿಪಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರ LIVE | ಶಿವಸೇನಾದ ಉದ್ಧವ್ ಮುಖ್ಯಮಂತ್ರಿ: ಕಾಂಗ್ರೆಸ್, ಎನ್ಸಿಪಿಗೆ ಡಿಸಿಎಂ ಪಟ್ಟ Live

ಶಿವಸೇನಾ, ಎನ್ಸಿಪಿ, ಕಾಂಗ್ರೆಸ್ ಮುಖಂಡರು ಹಾಗೂ ಮೈತ್ರಿಗೆ ಬೆಂಬಲಿಸುತ್ತಿರುವ ಸ್ವತಂತ್ರ ಶಾಸಕರು ಸಂಜೆ 6ಕ್ಕೆ ಭೇಟಿಯಾಗಲಿದ್ದಾರೆ ಎಂದು ಎನ್ಸಿಪಿ ಮುಖಂಡ ನವಾಬ್ ಮಲಿಕ್ ಹೇಳಿದ್ದಾರೆ. ಅಧಿಕೃತವಾಗಿ ಮೈತ್ರಿ ನಾಯಕನ ಆಯ್ಕೆ ನಡೆಯಲಿದೆ.

ರಾಜ ಭವನಮ ವಿಧಾನ ಭವನ ಹಾಗೂ ಸಚಿವಾಲಯಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ಸೋನಿಯಾ ಗಾಂಧಿಗೆ ತಲೆಬಾಗಿದ ಶಿವಸೇನಾ ಹಿಂದುತ್ವ: ಫಡಣವೀಸ್ ವಾಗ್ದಾಳಿ

ಅಜಿತ್ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಶರದ್ ಪವಾರ್ ಅವರನ್ನು ಪಕ್ಷದಿಂದ ಹೊರಗುಳಿಸುವ ಕ್ರಮಕ್ಕೆ ಮುಂದಾದರು ಹಾಗೂ ಸುಪ್ರೀಂ ಕೋರ್ಟ್ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಬುಧವಾರದ ಗಡುವು ನೀಡಿದೆ. ಬಿಜೆಪಿ ಸಂಖ್ಯಾಬಲ ತೋರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ. ಇದರಿಂದಾಗಿ ಅಜಿತ್ ಪವಾರ್ ಹಾಗೂ ಫಡಣವಿಸ್ ರಾಜೀನಾಮೆ ಹಾದಿ ಹಿಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.