ನವದೆಹಲಿ: ‘ಸ್ವೀಕಾರಾರ್ಹ ಅಂಶ’ಗಳ ಆಧಾರದಲ್ಲಿ ಉಕ್ರೇನ್ನ ಜೊತೆಗೆ ಚರ್ಚೆಗೆ ರಷ್ಯಾ ಸಿದ್ಧವಿದೆ. ಆದರೆ ಪ್ರಸ್ತುತ, ಸಂಧಾನ ಮಾತುಕತೆಗೆ ಪೂರಕವಾದ ವಾತಾವರಣ ಇಲ್ಲ’ ಎಂದು ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೊವ್ ಹೇಳಿದ್ದಾರೆ.

‘ಬ್ರಿಕ್ಸ್ ಮತ್ತು ಅದರ ಸಾಧ್ಯತೆಗಳು’ ವಿಷಯ ಕುರಿತ ಸಂವಾದದ ವೇಳೆ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು. ಬ್ರಿಕ್ಸ್ ಶೃಂಗವನ್ನು ಶ್ಲಾಘಿಸಿದ ಅವರು, ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಯ ಈ ಸಮೂಹವು ‘ಹೊಸ ವಾಸ್ತವಗಳ ಪ್ರತಿಬಿಂಬ’ವಾಗಿದೆ ಎಂದು ಹೇಳಿದರು.

ರಷ್ಯಾದ ‘ಸ್ಪುಟ್ನಿಕ್’ ಸುದ್ದಿಸಂಸ್ಥೆ ಈ ಸಂವಾದವನ್ನು ಆಯೋಜಿಸಿತ್ತು.

2022ರ ಫೆಬ್ರುವರಿಯಲ್ಲಿ ಆರಂಭವಾದ ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟು ಮತ್ತು ಸಂಘರ್ಷ ಒಂದು ಸಾವಿರ ದಿನಗಳವರೆಗೆ ಮುಂದುವರಿದಿದೆ.

ಉಕ್ರೇನ್ ಜೊತೆಗೆ ಮುಖಾಮುಖಿ ಚರ್ಚೆಗೆ ರಷ್ಯಾ ಸಿದ್ಧವಿದೆಯೇ ಎಂಬ ಪ್ರಶ್ನೆಗೆ, ‘ನೇರವಾಗಿ ಹೇಳುವುದಾದರೆ ಸದ್ಯ ಅಂತಹ ಪರಿಸ್ಥಿತಿ ಇಲ್ಲ. ಸ್ಪಷ್ಟ ಆಧಾರ ಇದ್ದಲ್ಲಿ ಚರ್ಚೆಗೆ ರಷ್ಯಾ ಸಿದ್ಧವಿದೆ’ ಎಂದು ತಿಳಿಸಿದರು.

ಚರ್ಚೆಯಲ್ಲಿ ಕೊಡುವ ಆಧಾರಗಳು ವಾಸ್ತವ ನೆಲೆಗಟ್ಟಿನದ್ದಾಗಿರಬೇಕು. ಉಕ್ರೇನ್ನಲ್ಲಿರುವ ರಷ್ಯನ್ನರ ಭದ್ರತೆ–ಸುರಕ್ಷತೆ ಹಾಗೂ ರಷ್ಯಾ ವಲಯದಲ್ಲಿರುವ ಉಕ್ರೇನಿಯನ್ನರ ಸುರಕ್ಷತೆಗೆ ತಮ್ಮ ದೇಶದ ದೃಷ್ಟಿಕೋನದಿಂದ ಪೂರಕ ವಾತಾವರಣ ಇರಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ನಡೆಯುತ್ತಿರುವ ಎರಡು ಯುದ್ಧಗಳಿಂದಾಗಿ ಭವಿಷ್ಯದಲ್ಲಿ ಜಾಗತಿಕ ಸ್ವರೂಪ ಬದಲಾಗಲಿದೆಯೇ ಎಂಬ ಪ್ರಶ್ನೆಗೆ, ‘ಬಿಕ್ಕಟ್ಟು ನಿವಾರಣೆಗೆ ಬ್ರಿಕ್ಸ್ ಶೃಂಗವು ಪ್ರಮುಖ ವೇದಿಕೆಯಾಗಬಹುದು’ ಎಂದು ಅಭಿಪ್ರಾಯಪಟ್ಟರು.

‘ಬ್ರಿಕ್ಸ್’ಗೆ ಅಂತಹ ಸಾಮರ್ಥ್ಯವಿದೆ. ಆದರೆ, ಅದು ಸದ್ಯದ ಬಿಕ್ಟಟ್ಟನ್ನು ಅದು ನಿವಾರಿಸ ಬಲ್ಲುದೇ, ಇಲ್ಲವೇ ಎಂಬುದನ್ನು ಕಾದುನೋಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.