ಕಟಕ್: ಕ್ರಿಕೆಟ್ ಪಂದ್ಯವೊಂದರ ವೇಳೆಯಲ್ಲಿ ನೋಬಾಲ್ ನೀಡಿದ ಅಂಪೈರ್ರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ವಿಕ್ಷಿಪ್ತ ಘಟನೆ ಒಡಿಶಾದ ಕಟಕ್ನಿಂದ ವರದಿಯಾಗಿದೆ.

22 ವರ್ಷದ ಲಕಿ ರಾವತ್ ಎಂಬವರೇ ಕೊಲೆಗೀಡಾದ ದುರ್ದೈವಿ.

ಬ್ರಹ್ಮಪುರ ಹಾಗೂ ಶಂಕರಪುರ ಎನ್ನುವ ಎರಡು ತಂಡಗಳ ನಡುವೆ ನಡೆಯುತ್ತಿದ್ದ ಪಂದ್ಯದ ವೇಳೆ ನೋಬಾಲ್ ಸಂಬಂಧ ಮೃತ ರಾವತ್ ಹಾಗೂ ಸ್ಮೃತಿ ರಂಜನ್ ರಾವುತ್ ನಡುವೆ ವಾಗ್ವಾದ ಉಂಟಾಗಿದೆ. ಈ ವೇಳೆ ಸ್ಮೃತಿ ರಂಜನ್ ಅವರು ರಾವತ್ರನ್ನು ಇರಿದು ಕೊಲೆ ಮಾಡಿದ್ದಾರೆ.

ಹರಿತವಾದ ಚೂರಿಯಿಂದ ರಾವತ್ರನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಅಲ್ಲಿದ್ದವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ನಡೆದ ಕೂಡಲೇ ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಘಟನೆ ಬಳಿಕ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.