ಪ್ಯಾರಿಸ್ (ಎಎಫ್‌ಪಿ): ವಿಶ್ವದಾದ್ಯಂತಕಳೆದವರ್ಷ 113 ಮಿಲಿಯನ್ (11.3 ಕೋಟಿ) ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.

ಯುದ್ಧಗಳು ಹಾಗೂ ಪ್ರಕೃತಿ ವಿಕೋಪಗಳು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದ್ದು, ಆಫ್ರಿಕಾದಲ್ಲಿ ಹೆಚ್ಚು ಜನ ಹಸಿವಿಗೆ ತುತ್ತಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ವರದಿ ಹೇಳಿದೆ.ಯೆಮನ್, ಕಾಂಗೊ ಗಣರಾಜ್ಯ, ಅಫ್ಗಾನಿಸ್ತಾನ ಮತ್ತು ಸಿರಿಯಾ ಸೇರಿದಂತೆ ಎಂಟು ದೇಶಗಳಲ್ಲಿ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಮಂದಿ ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ.

ಎಫ್‌ಎಒ ಮೂರುವರ್ಷ ಈ ಕುರಿತು ಅಧ್ಯಯನ ನಡೆಸಿ,ತೀವ್ರಆಹಾರಕೊರತೆಎದುರಿಸುತ್ತಿರುವದೇಶಗಳಕುರಿತು ವರದಿ ಸಿದ್ಧಪಡಿಸಿದೆ.ಯುದ್ಧಪೀಡಿತ ಸಿರಿಯಾ, ರೊಹಿಂಗ್ಯಾ ಮುಸ್ಲಿಮರ ಕಾರಣದಿಂದ ಬಾಂಗ್ಲಾದೇಶ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದಲೂ ಈ ರಾಷ್ಟ್ರಗಳನ್ನು ಹಸಿವು ಬಾಧಿಸುತ್ತಿದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.