ಜೈಪುರ: ರಾಜಸ್ಥಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ್ದು ಜಾತಿವಾದಿ ಮನಸ್ಥಿತಿ ಎಂದಿದ್ದಾರೆ.
ರಾಜಸ್ಥಾನದ ಅಲ್ವಾರ್ನ ವಿಜಯ್ ನಗರ್ ಮೈದಾನದಲ್ಲಿ ಭಾನುವಾರ ನಡೆದ ಚುನಾವಣಾ ರ್ಯಾಲಿಯಲ್ಲಿ 48 ನಿಮಿಷ ಭಾಷಣ ಮಾಡಿದ ಮೋದಿ, ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ನೇತಾರ ಸಿ.ಪಿ ಜೋಷಿ ಅವರು ಮೋದಿಯವರ ಜಾತಿ ಯಾವುದು ಎಂದು ಕೇಳಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಜೋಷಿಯವರ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ಕೆಲವರು ನನ್ನ ಅಮ್ಮನನ್ನು ನಿಂದಿಸುತ್ತಾರೆ. ಇನ್ನು ಕೆಲವರು ನನ್ನ ಜಾತಿ ಯಾವುದು ಎಂದು ಕೇಳುತ್ತಿದ್ದಾರೆ.ಹೇಳುವವರು ಯಾರೇ ಆಗಿರಲಿ, ಹೇಳಿಸುತ್ತಿರುವವರು ಖ್ಯಾತರು ಆಗಿರುತ್ತಾರೆ ಎಂದುತಿರುಗೇಟು ನೀಡಿದ್ದಾರೆ.

ಬಿಜೆಪಿ ಸರ್ಕಾರದ ಸಾಧನೆಯೊಂದಿಗೆ ಏನನ್ನೂ ಹೋಲಿಸಲು ಸಾಧ್ಯವಾಗದೇ ಇದ್ದಾಗ ಕಾಂಗ್ರೆಸ್ ಜಾತಿವಾದದ ವಿಷವನ್ನು ಕಕ್ಕುತ್ತಿದೆ ಎಂದಿದ್ದಾರೆ ಮೋದಿ.
ಸಿ.ಪಿ.ಜೋಷಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಮೋದಿ, ಕಬೀರ್ ದಾಸ್ ಮತ್ತು ರವಿದಾಸ್ ಅವರ ಅವರ ದೋಹೆಯನ್ನು ಉಲ್ಲೇಖಿಸಿದ್ದಾರೆ.ಕಬೀರ್ ಕೌನ್ ಏಕ್ ಹೈ, ಪಾನಿ ಬರೇ ಅನೇಕ್/ ಭಾಂಡ ಹೀ ಮೇ ಭೇದ್ ಹೇ, ಪಾನಿ ಸಬ್ ಮೇ ಏಕ್ ( ನಾವೆಲ್ಲರೂ ಒಂದೇ ಪಾತ್ರೆಯಲ್ಲಿ ನೀರು ತುಂಬುತ್ತೇವೆ, ನೀರು ತುಂಬಿದ ಪಾತ್ರೆಗಳು ಬೇರೆ ಬೇರೆ ಆಗಿದ್ದರೂ, ನೀರಿನ ಮೂಲ ಒಂದೇ).
ರವಿದಾಸ್ ಅವರ ದೋಹೆ ಹೀಗಿದೆ: ಜಾತ್ ಪಾತ್ ಮತ್ ಪೂಚಿಯೇ, ಕಾ ಜಾಕ್ ಔರ್ ಪಾತ್/ ರವಿದಾಸ್ ಪೂತ್ ಸಬ್ ಪ್ರಭ್ ಕೇ, ಕೌ ನಹೀ ಜಾತ್ ಕುಜಾತ್ ( ಯಾರೊಬ್ಬರ ಜಾತಿಯನ್ನು ಕೇಳಬಾರದು ಯಾಕೆಂದರೆ ಎಲ್ಲರೂ ದೇವರ ಮಕ್ಕಳು ಮತ್ತು ಯಾವುದೇ ಜಾತಿ ಕೀಳು ಅಲ್ಲ )
ದೇಶದ ಪ್ರಧಾನಿಯೊಬ್ಬರು ವಿದೇಶಕ್ಕೆ ಹೋಗುವಾಗ ಅಲ್ಲಿ ಯಾರೂ ಜಾತಿ ಹೇಳುವುದಿಲ್ಲ. ಅಲ್ಲಿ ಜಗತ್ತಿಗೆ ಕಾಣುವುದು 1.15 ಕೋಟಿ ಭಾರತೀಯರು ಮಾತ್ರ.

ಮಂಡಲ್ ಕಮಿಷನ್ ವರದಿ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಖ್ಯಾತನಾಮರಾದ ರಾಜೀವಗಾಂಧಿ ಅದರ ವಿರುದ್ಧ ಕಿಡಿ ಕಾರಿದ್ದರು. ಆ ಚರ್ಚೆ ಈಗಲೂ ಸಂಸತ್ತಿನ ಗೋಡೆಗಳಲ್ಲಿ ಪ್ರತಿಧ್ವನಿಸುತ್ತಿದೆ. ಒಂದೇ ಕುಟುಂಬದ ನಾಲ್ವರು ಸದಸ್ಯರಿಗೆ ಭಾರತ ರತ್ನ ಸಿಕ್ಕಿತು ಆದರೆ ಅಂಬೇಡ್ಕರ್ ಅವರಿಗೆ ಈ ಪ್ರಶಸ್ತಿ ಸಿಕ್ಕಿಲ್ಲ.
ದಲಿತ, ಶೋಷಿತ, ಬಡವ, ಪೀಡಿತ ಮತ್ತು ದುರ್ಬಲರ ವಿರುದ್ದ ದ್ವೇಷ ಕಾರುವುದು ಕಾಂಗ್ರೆಸ್ಗೆ ರಕ್ತಗತವಾಗಿದೆ. ಖ್ಯಾತನಾಮರ ವಿರುದ್ಧ ಯಾವುದೇ ಗುಂಪು ಸವಾಲು ಎಸೆದರೆಅವರನ್ನು ಕಾಂಗ್ರೆಸ್ ಕಡೆಗಣಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.