ತಿರುವನಂತಪುರ: ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸದಿದ್ದರೆ ಗರಿಷ್ಠ ₹ 50,000 ದಂಡ ಮತ್ತು ಒಂದು ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 'ತ್ಯಾಜ್ಯ ಮುಕ್ತ ಕೇರಳ' ಅಭಿಯಾನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಸಚಿವ ಎಂ.ಬಿ. ರಾಜೇಶ್ ತಿಳಿಸಿದ್ದಾರೆ.

ಕಳೆದ ವಾರ ಜಾರಿಗೊಳಿಸಿರುವ ಕೇರಳ ಪಂಚಾಯತ್ ರಾಜ್ (ತಿದ್ದುಪಡಿ) ಸುಗ್ರೀವಾಜ್ಞೆ–2023, ಕೇರಳ ಮುನಿಸಿಪಾಲಿಟಿ (ತಿದ್ದುಪಡಿ) ಸುಗ್ರೀವಾಜ್ಞೆ–2023 ಪ್ರಕಾರ, ನಿಯಮ ಉಲ್ಲಂಘಿಸಿ ಶಿಕ್ಷೆಗೆ ಗುರಿಯಾದವರು ದಂಡ ಪಾವತಿಸಲು ವಿಫಲವಾದರೆ ಅದನ್ನು ಸಾರ್ವಜನಿಕ ತೆರಿಗೆ ಬಾಕಿಗೆ ಸೇರಿಸಲಾಗುತ್ತದೆ ಎಂದು ಸ್ಥಳೀಯ ಸ್ವಯಂ ಆಡಳಿತ ಇಲಾಖೆ ಸಚಿವ ರಾಜೇಶ್ ಹೇಳಿದ್ದಾರೆ.

ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, 'ಸಂಬಂಧಪಟ್ಟ ಆಡಳಿತಗಳ ಕಾರ್ಯದರ್ಶಿಗಳು ಸಾರ್ವಜನಿಕ ಮತ್ತು ಖಾಸಗಿ ಜಾಗಗಳಲ್ಲಿ ಕಸ ಎಸೆಯುವವರಿಗೆ ವಿಧಿಸುವ ದಂಡ ಮೊತ್ತವನ್ನು ₹ 5,000 ಕ್ಕೆ ಹೆಚ್ಚಿಸಲಾಗಿದೆ' ಎಂದು ಸಚಿವರು ಹೇಳಿರುವುದಾಗಿ ತಿಳಿಸಲಾಗಿದೆ.

ಸುಗ್ರೀವಾಜ್ಞೆ ಸ್ಥಳೀಯ ಸಂಸ್ಥೆಗಳಿಗೂ ಅನ್ವಯವಾಗಲಿದೆ. ನಿರ್ದೇಶನಗಳನ್ನು ಪಾಲಿಸದಿದ್ದರೆ ಸಂಸ್ಥೆಗಳಿಗೂ ದಂಡ ವಿಧಿಸಲಾಗುತ್ತದೆ. ದಂಡಗಳು, ಪ್ರಾಯೋಜಕತ್ವ ಅಥವಾ ಕೊಡುಗೆ ರೂಪದಲ್ಲಿ ಸಂಗ್ರಹವಾಗುವ ಹಣವನ್ನು ತ್ಯಾಜ್ಯ ನಿರ್ವಹಣಾ ನಿಧಿಗೆ ಠೇವಣಿ ಮಾಡಬೇಕು ಎಂದು ಪ್ರಕಟಣೆ ತಿಳಿಸಿದೆ.

ದಂಡದ ಮೂಲಕ ಬಂದ ಹಣವನ್ನು ಸ್ಥಳೀಯ ಸಂಸ್ಥೆಗಳು, ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಸಿಕೊಳ್ಳಲಿವೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.