ಕೋಲ್ಕತ್ತ: ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ವಿಧಾನಸಭೆ ಒಪ್ಪಿಗೆ ನೀಡಿದ ಅತ್ಯಾಚಾರ ತಡೆ ಮಸೂದೆ ‘ಅಪರಾಜಿತ’ ಜೊತೆಗೆ ತಾಂತ್ರಿಕ ವರದಿಯನ್ನು ಕಳುಹಿಸಿಕೊಡದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ರಾಜ್ಯಪಾಲ ಸಿ.ವಿ ಆನಂದ್ ಬೋಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ಪಶ್ಚಿಮ ಬಂಗಾಳ ರಾಜ್ಯಪಾಲ ಬೋಸ್ ಭೇಟಿ ಮಾಡಿದ ಬಿಜೆಪಿ ನಿಯೋಗ.
ಯಾವುದೇ ಮಸೂದೆ ಜೊತೆ ತಾಂತ್ರಿಕ ವರದಿಯನ್ನು ಕಳುಹಿಸದೇ ಇರುವುದು ಸರ್ಕಾರದ ನಿತ್ಯ ಅಭ್ಯಾಸವಾಗಿದೆ. ಬಳಿಕ ಮಸೂದೆಗೆ ಸಹಿ ಹಾಕುತ್ತಿಲ್ಲ ಎಂದು ರಾಜ್ಯಪಾಲರನ್ನು ದೂರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

‘ಅಪರಾಜಿತ ಮಸೂದೆ ಜೊತೆಗೆ ತಾಂತ್ರಿಕ ವರದಿಯನ್ನು ಲಗತ್ತಿಸದ ಸರ್ಕಾರದ ನಡೆಯನ್ನು ರಾಜ್ಯಪಾಲರು ಟೀಕಿಸಿದ್ದಾರೆ. ನಿಯಮಗಳ ಪ್ರಕಾರ ಮಸೂದೆಯನ್ನು ರಾಜ್ಯಪಾಲರ ಸಹಿಗೆ ಕಳುಹಿಸುವಾಗ ಅದರ ಜೊತೆ ತಾಂತ್ರಿಕ ವರದಿಯನ್ನೂ ಇರಿಸಬೇಕು’ ಎಂದು ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ಕೋಲ್ಕತ್ತ: ಆರ್.ಜಿ ಕರ್ ಆಸ್ಪತ್ರೆಯಲ್ಲಿ ದಾಂಧಲೆ; ರಾಜ್ಯಪಾಲ ಆನಂದ್ ಬೋಸ್ ಭೇಟಿ.
‘ಸರ್ಕಾರ ಹೀಗೆ ಮಾಡುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಆದರೆ ಮಸೂದೆಗೆ ಸಹಿ ಹಾಕದಿರುವುದಕ್ಕೆ ರಾಜ್ಯಪಾಲರನ್ನು ದೂರುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಇಂತಹ ಪ್ರಮುಖ ವಿಷಯಗಳಲ್ಲಿ ಸರಿಯಾಗಿ ಕರ್ತವ್ಯ ನಿಭಾಯಿಸಲು ವಿಫಲವಾಗಿರುವ ರಾಜ್ಯ ಸರ್ಕಾರವನ್ನು ರಾಜ್ಯಪಾಲರು ತರಾಟೆಗೆ ತೆಗೆದುಕೊಂಡರು. ಅಪರಾಜಿತ ಮಸೂದೆಯು ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಅರುಣಾಚಲ ಪ್ರದೇಶದದಲ್ಲಿ ಇರುವುದನ್ನೇ ಕಾಪಿ ಪೇಸ್ಟ್ ಮಾಡಲಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.
.ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ರಾಜ್ಯಪಾಲ ಬೋಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.