ಚಂಡೀಗಢ: ಜೆಸಿಬಿ, ಹಿಟಾಚಿ ಸೇರಿದಂತೆ ಇತರ ಅಗೆಯುವ ಯಂತ್ರಗಳನ್ನು ಪ್ರತಿಭಟನಾ ಸ್ಥಳದಿಂದ ಹಿಂತೆಗೆದುಕೊಳ್ಳುವಂತೆ ಹರಿಯಾಣ ಪೊಲೀಸರು ಮಾಲೀಕರಿಗೆ ಸೂಚಿಸಿದ್ದಾರೆ.

ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲಿ ಬಿಗಿ ಭದ್ರತೆ ನಿಯೋಜಿಸಿದ್ದು, ಬ್ಯಾರಿಕೇಡ್‌ಗಳನ್ನು ತೆರವು ಮಾಡಲು ಪ್ರತಿಭಟನಾನಿರತ ರೈತರು ಈ ಯಂತ್ರಗಳನ್ನು ಬಳಸುತ್ತಾರೆ. ಇದರಿಂದಾಗಿ ಕರ್ತವ್ಯದಲ್ಲಿರುವ ಪೊಲೀಸರು ಮತ್ತು ಅರೆಸೇನಾ ಪಡೆಗಳಿಗೆ ಗಂಭೀರ ಹಾನಿಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಹರಿಯಾಣ ಪೊಲೀಸರು, ‘ಹಿಟಾಚಿ, ಜೆಸಿಬಿಗಳ ಮಾಲೀಕರೇ ದಯವಿಟ್ಟು ಇಲ್ಲಿ ಕೇಳಿ. ಪ್ರತಿಭಟನಾನಿರತ ರೈತರಿಗೆ ಅಗೆಯುವ ಯಂತ್ರಗಳನ್ನು ಒದಗಿಸಬೇಡಿ. ಈಗಾಗಲೇ ನೀಡಿದ್ದರೆ ಪ್ರತಿಭಟನಾ ಸ್ಥಳದಿಂದ ಅವುಗಳನ್ನು ಹಿಂತೆಗೆದುಕೊಂಡು ಬಿಡಿ. ಈ ಯಂತ್ರಗಳು ಭದ್ರತಾ ಪಡೆಗಳಿಗೆ ಹಾನಿ ಉಂಟು ಮಾಡಬಹುದು. ನಿಮ್ಮ ಯಂತ್ರಗಳನ್ನು ರೈತರಿಗೆ ಒದಿಗಸಿದರೆ ಅದು ಜಾಮೀನು ರಹಿತ ಅಪರಾಧವಾಗಿದೆ. ನಿಮ್ಮನ್ನು ಕ್ರಿಮಿನಲ್ ಹೊಣೆಗಾರರನ್ನಾಗಿಯೂ ಮಾಡಬಹುದು’ ಎಂದು ತಿಳಿಸಿದೆ.

ಜೆಸಿಬಿ ಸೇರಿದಂತೆ ಇತರ ಯಂತ್ರಗಳನ್ನು ವಶಪಡಿಸಿಕೊಳ್ಳುವಂತೆ ಹರಿಯಾಣ ಪೊಲೀಸರು ಪಂಜಾಬ್ ಪೊಲೀಸರಿಗೆ ಮಂಗಳವಾರ ಪತ್ರ ಬರೆದಿದ್ದರು.

ಕೇಂದ್ರ ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಿದ ರೈತ ಮುಖಂಡರು, ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಬುಧವಾರ ಮುಂದಾಗಿದ್ದಾರೆ. ಪ್ರತಿಭಟನೆ ಆರಂಭವಾಗುತ್ತಿದ್ದಂತೆ ರೈತರ ಮೇಲೆ ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.