ಬೆಂಗಳೂರು: ‘ವಕೀಲರ ಅಭಿವ್ಯಕ್ತಿ ಸ್ವಾತಂತ್ರ್ಯದ ಕುತ್ತಿಗೆ ಹಿಸುಕುವಂತಹ ಆದೇಶಗಳನ್ನು ಹೊರಡಿಸುವ ಅಧಿಕಾರ ಭಾರತೀಯ ವಕೀಲರ ಪರಿಷತ್ಗೆ (ಬಿಸಿಐ) ಇಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಭಾರತೀಯ ವಕೀಲರ ಪರಿಷತ್ 2024ರ ಏಪ್ರಿಲ್ 12ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಹಿರಿಯ ವಕೀಲ ಎಸ್.ಬಸವರಾಜ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ವಕೀಲರ ಕಾಯ್ದೆ–1961ರ ಕಲಂ 7(1)(ಜಿ) ಪ್ರಕಾರ, ರಾಜ್ಯಗಳ ವಕೀಲರ ಷರಿಷತ್ತಿನ ಚಟುವಟಿಕೆಗಳ ಮೇಲೆ ಬಿಸಿಐ ನಿಗಾ ವಹಿಸಬಹುದಾಗಿದೆ. ಆದರೆ, ವಕೀಲರು ಮಾತನಾಡದಂತೆ ನಿರ್ಬಂಧಿಸುವ ಆದೇಶವನ್ನು ಹೊರಡಿಸುವ ಅಧಿಕಾರ ಬಿಸಿಐ ಅಧ್ಯಕ್ಷರಿಗಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ‘ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಹಣ ದುರ್ಬಳಕೆಯಾಗಿದೆ’ ಎಂದು ಆರೋಪಿಸಿ ಎಸ್.ಬಸವರಾಜ್ ಪ್ರಕರಣ ದಾಖಲಿಸಿದ್ದರು. ಈ ವಿಚಾರವನ್ನು ಪದಾಧಿಕಾರಿಗಳು ಬಿಸಿಐ ಗಮನಕ್ಕೆ ತಂದಿದ್ದರು. ಆಗ ಬಿಸಿಐ, ‘ಹಣಕಾಸು ವಹಿವಾಟಿನ ಬಗ್ಗೆ ಸ್ವೀಕೃತಿಗಳೂ ಸೇರಿದಂತೆ ಎಲ್ಲಾ ದಾಖಲೆಗಳನ್ನು 15 ದಿನಗಳಲ್ಲಿ ಒದಗಿಸಬೇಕು’ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ಬಿಸಿ) ಕಾರ್ಯದರ್ಶಿಗೆ ಸೂಚಿಸಿದ್ದರು.

ಈ ಕುರಿತ ವಿಚಾರಣಾ ಪ್ರಕ್ರಿಯೆ ಬಾಕಿ ಇರುವಾಗ ಬಿಸಿಐ ಅಧ್ಯಕ್ಷರು, ‘ಹಣ ದುರ್ಬಳಕೆ ಪ್ರಕರಣದ ಬಗ್ಗೆ ಪರಿಷತ್ತಿನ ಸದಸ್ಯರೂ ಸೇರಿದಂತೆ ಯಾವುದೇ ವಕೀಲರು ಸಾರ್ವಜನಿಕ ಹೇಳಿಕೆ ನೀಡಬಾರದು ಮತ್ತು ಎಲ್ಲೂ ಮಾತನಾಡಬಾರದು’ ಎಂಬ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.