ತುಮಕೂರು: ಸಿದ್ಧಗಂಗಾಮಠದೊಂದಿಗೆ 60 ವರ್ಷದ ಹಳೆಯ ಸಂಬಂಧ. ಸ್ವಾಮೀಜಿ ಅವರ ದರ್ಶನ ಮಾಡಬೇಕು ಎಂಬ ಬಯಕೆ ಆಸೆ ಇತ್ತು. ಈಗ ದರ್ಶನ ಪಡೆದಿದ್ದೇನೆ. ಮಹಾನ್ ಸೇವೆ ಮಾಡಿರುವ ಅವರಿಗೆ ಭಾರತ ರತ್ನ ಗೌರವ ಪ್ರದಾನ ಮಾಡಬೇಕು ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು.

ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ವಾಮೀಜಿ ಜೀವಿತ ಅವಧಿಯಲ್ಲೇ ಭಾರತ ರತ್ನ ಕೊಡಬೇಕು. ಸ್ವಾಮೀಜಿ ಅವರು ಚೇತರಿಕೆ ವೈದ್ಯರಿಗೆ ಆಶ್ಚರ್ಯ ತಂದಿದೆ. ಸ್ವಾಮೀಜಿ ಅವರ ಆತ್ಮಸ್ಥೈರ್ಯವೇ ಅವರು ಚೇತರಿಸಿಕೊಳ್ಳುವಂತೆ ಮಾಡಿದೆ. ಅವರು ಇನ್ನಷ್ಟೂ ಕಾಲ ಇರಬೇಕು. ಭಕ್ತರಿಗೆ ಆಶೀರ್ವಾದ ಮಾಡಬೇಕು ಎಂದು ಪ್ರಾರ್ಥಿಸುತ್ತೇನೆ ಎಂದರು.

ನಾನು ಚಿಕ್ಕವಳಿದ್ದಾಗ ನಮ್ಮ ತಂದೆಯವರು ಈ ಮಠಕ್ಕೆ ಕರೆದುಕೊಂಡು ಬರುತ್ತಿದ್ದರು. ನಾನು ಮತ್ತು ನಮ್ಮ ಮನೆಯವರು ಸ್ವಾಮೀಜಿ ಅವರ ಪಾದಪೂಜೆ ಮಾಡಿದ್ದೆವು ಎಂದು ಹೇಳಿದರು.
ಭಾರತಿ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.