ಬೆಂಗಳೂರು: ಸಿಬಿಎಸ್ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) 10 ಮತ್ತು 12ನೇ ತರಗತಿಗಳ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ.

10ನೇ ತರಗತಿಯಲ್ಲಿ ಶೇ 99.26 ಹಾಗೂ 12ನೇ ತರಗತಿಯಲ್ಲಿ ಶೇ 96.95 ಫಲಿತಾಂಶ ದೊರೆತಿದೆ. 2023ರಲ್ಲಿ 10ನೇ ತರಗತಿಯಲ್ಲಿ ಶೇ 99.18 ಹಾಗೂ 12 ನೇ ತರಗತಿಯಲ್ಲಿ ಶೇ 98.64 ಫಲಿತಾಂಶ ಬಂದಿತ್ತು. ಬೆಂಗಳೂರು ಹಾಗೂ ರಾಜ್ಯದ ಇತರ ಜಿಲ್ಲೆಗಳ ಹೆಚ್ಚಿನ ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ.

12ನೇ ತರಗತಿ ಪರೀಕ್ಷೆಯಲ್ಲಿ ಎಚ್ಎಸ್ಆರ್ ಲೇಔಟ್ನ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಸ್ತುತಿ ಅಲ್ಮಾಲ್ ವಾಣಿಜ್ಯ ವಿಭಾಗದಲ್ಲಿ 500ಕ್ಕೆ 496 ಅಂಕ (ಶೇ 99.2) ಗಳಿಸಿದ್ದಾರೆ.

‘ಸ್ಪಷ್ಟ ಪರಿಕಲ್ಪನೆ, ಗುರಿ ಇಟ್ಟುಕೊಂಡು ಓದಿದ ಫಲವಾಗಿ ಉತ್ತಮ ಫಲಿತಾಂಶ ದೊರೆತಿದೆ. ಓದಿನ ಜತೆಗೆ ಸ್ವಲ್ಪ ವಿರಾಮ ತೆಗೆದುಕೊಂಡು ಪಠ್ಯೇತರ ವಿಷಯಗಳಿಗೆ ಗಮನ ನೀಡಿದ್ದು ಪರೀಕ್ಷೆ ಮುಗಿಯುವವರೆಗೂ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಯಿತು’ ಎಂದು ಸ್ತುತಿ ವಿವರಿಸಿದರು.

ಜೆಇಇನಲ್ಲಿ 100 ಪರ್ಸೆಂಟೈಲ್ ಗಳಿಸಿದ್ದ ಬೆಂಗಳೂರಿನ ವೈಟ್ಫೀಲ್ಡ್ನ ದಿ ಡೀನ್ಸ್ ಅಕಾಡೆಮಿಯ ವಿದ್ಯಾರ್ಥಿನಿ ಸಾನ್ವಿ ಜೈನ್ ಹಾಗೂ ರಾಮಮೂರ್ತಿ ನಗರದ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ನ ವಿದ್ಯಾರ್ಥಿನಿ ಎಂ.ಮೋನಿಕಾ 12ನೇ ತರಗತಿ ವಿಜ್ಞಾನ ವಿಭಾಗದಲ್ಲಿ 500ಕ್ಕೆ 494 ಅಂಕಗಳನ್ನು (ಶೇ 98.8) ಪಡೆದಿದ್ದಾರೆ.

10ನೇ ತರಗತಿ ಫಲಿತಾಂಶದಲ್ಲಿ ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಮಾಯಾ ರಾಜೇಶ್ ಶೇ 99.2 ಅಂಕಗಳನ್ನು ಪಡೆದಿದ್ದಾರೆ. ದಾವಣಗೆರೆಯ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ನ ಎಂ.ಸುಚಿತಾ, ಸಿಂಧನೂರಿನ ಸತ್ಕೃತಿ ತಿಮ್ಮನದೊಡ್ಡಿ ಕರಣಂ 500ಕ್ಕೆ 494 ಅಂಕ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.