ಹೆಬ್ಬನಹಳ್ಳಿ (ಸಕಲೇಶಪುರ): ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಕಲೇಶಪುರದ ದೊಡ್ಡನಗರದ ಪಂಪ್ ಹೌಸ್ ನಲ್ಲಿ ನೀರೆತ್ತುವ ಪಂಪ್ ಗಳಿಗೆಶುಕ್ರವಾರ ಚಾಲನೆ ನೀಡಿದ ಕೆಲವೇ ಹೊತ್ತಿನಲ್ಲಿ ಸುಮಾರು 6 ಕಿ. ಮೀ ದೂರದ ಹೆಬ್ಬನಹಳ್ಳಿಯಲ್ಲಿ ನಾಲ್ಕು ನೀರು ವಿತರಣಾ ತೊಟ್ಟಿಯಲ್ಲಿ ನೀರು ಉಕ್ಕೇರಿತು. ದಶಕದ ಕನಸು ನನಸಾದ ಸಂಭ್ರಮ ಜನರಲ್ಲಿ ಉಕ್ಕಿ ಹರಿಯಿತು.
.ಬಯಲುಸೀಮೆಯತ್ತ ಎತ್ತಿನಹೊಳೆ.. ದಶಕದ ಬಳಿಕ ಸಾಕಾರಗೊಳ್ಳುತ್ತಿರುವ ಯೋಜನೆ!.
ಪಶ್ಚಿಮಕ್ಕೆ ಹರಿದು ನೇತ್ರಾವತಿ ನದಿಯಾಗಿ ಕರಾವಳಿಯಲ್ಲಿ ಹರಿಯುತಿದ್ದ ಎತ್ತಿನ ಹೊಳೆ, ಕಾಡುಮನೆ ಹೊಳೆ, ಹೊಂಗಡಹಳ್ಳ, ಕೇರಿ ಹೊಳೆಗಳು ಪೂರ್ವಭಿಮುಖವಾಗಿಯೂ ಹರಿಯ ತೊಡಗಿದವು. ಪಶ್ಚಿಮಕ್ಕೆ ಹರಿಯುತ್ತಿದ್ದ ನೀರಿನಲ್ಲಿ ಒಂದಂಶ ನೀರು ಪೂರ್ವದ ಜಿಲ್ಲೆಗಳಿಗೆ ಹರಿಯಲು ಆರಂಭಿಸಿತು.

ಜಲ ಸಂಪನ್ಮೂಲ ಇಲಾಖೆ, ವಿಶ್ವೇಶ್ವರಯ್ಯ ಜಲ ನಿಗಮ ರೂಪಿಸಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ಇದಾಗಿದ್ದು, 2027ರ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ.
.ಎತ್ತಿನಹೊಳೆ ಉದ್ಘಾಟನೆ: ಸಿಎಂ ಬಾಗಿನ ಅರ್ಪಿಸಲು ನಿರ್ಮಿಸಿದ್ದ ಮಂಟಪ ಕುಸಿತ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ಹರಿಯಲಿದೆ.

ಮೊದಲ ಹಂತದಲ್ಲಿ ಗುರುತ್ವ ಕಾಲುವೆಯಿಂದ 32.5 ಕಿ. ಮೀ ನಾಲಾ ಎಸ್ಕೇಪ್ ಮೂಲಕ ವೇದ ವ್ಯಾಲಿಯನ್ನು ನೀರು ಪ್ರವೇಶಿಸಲಿದೆ. ಹಳೇಬೀಡು ಕೆರೆ, ಬೆಳವಾಡಿ ಕೆರೆ ಪ್ರವೇಶಿಸಿ, ವಾಣಿವಿಲಾಸ ಸಾಗರಕ್ಕೆ ಹರಿಯಲಿದೆ.

ಎಲ್ಲ ಲಿಫ್ಟ್ ಗಳ (ಏತ)ಮೂಲಕ ದಿನಕ್ಕೆ 85 ಕ್ಯುಮೆಕ್ಸ್ ನೀರು ನಿತ್ಯ ಹರಿಯಲಿದೆ.
.ಎತ್ತಿನಹೊಳೆ ಯೋಜನೆ | ಬಯಲು ಸೀಮೆಯ ‘ಬರಡುʼ ನೆಲಕ್ಕೆ ಜೀವಜಲ: ಡಿಕೆಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.