ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಪೊಲೀಸರು ಕೈಗೊಂಡ ಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಲ್ಲಿ ಶನಿವಾರ ಸಮರ್ಥಿಸಿಕೊಂಡರು.

ಶಾಸಕ ಪೂಂಜ ಬಂಧನಕ್ಕೆ ಕಾಂಗ್ರೆಸ್ ಒತ್ತಡ ಹೆರುತ್ತಿದೆ ಎಂಬ ಬಿಜೆಪಿ ಮುಖಂಡರ ಆರೋಪದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ''ಒತ್ತಡ ಎಂದರೆ ಏನು. ಶಾಸಕನಾದವನು ಪೊಲೀಸರ ವಿರುದ್ಧ ಗಲಾಟೆ ಮಾಡಬಹುದಾ. ಅವರು ಗಲಾಟೆ ಮಾಡಿದ್ದು ಯಾರ ಪರವಾಗಿ. ಕಾನೂನು ಎಲ್ಲ ರಿಗೂ ಒಂದೇ ಅಲ್ಲವೇ' ಎಂದರು.
.ಹರೀಶ್ ಪೂಂಜ ಶಾಸಕರ ಸ್ಥಾನಮಾನಕ್ಕೆ ಕಪ್ಪುಚುಕ್ಕೆ ತಂದಿದ್ದಾರೆ: ರಕ್ಷಿತ್ ಶಿವರಾಮ್.
'ಶಾಸಕ ಹರೀಶ್ ಪೂಂಜ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353ರ ಅಡಿ ಎಫ್ಐಆರ್ ದಾಖಲಾಗಿದೆ. ಅದು ಜಾಮೀನುರಹಿತ ಪ್ರಕರಣವಾಗಿದ್ದು, ಅದರಡಿ ಆರೋಪಿಗೆ ಏಳು ವರ್ಷ ಶಿಕ್ಷೆ ನೀಡಲು ಅವಕಾಶ ಇದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಕ್ರಮಕೈಗೊಳ್ಳದೇ ಮತ್ತೇನು ಮಾಡಬೇಕು.ಶಾಸಕ ಎಂಬ ಕಾರಣಕ್ಕೆ ಬಿಟ್ಟು ಬಿಡಬೇಕಾ' ಎಂದು ಅವರು ಪ್ರಶ್ನೆ ಮಾಡಿದರು.
.ಪೊಲೀಸರ ಕಾಲರ್ ಹಿಡಿಯಲೂ ಸಿದ್ಧ: ಬಿಜೆಪಿ ಶಾಸಕ ಹರೀಶ್ ಪೂಂಜ.
ಪೂಂಜಗೆ ಪೊಲೀಸ್ ಠಾಣೆಯಲ್ಲಿ ಜಾಮೀನು ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು,, 'ಅವರ ವಿರುದ್ದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಎಫ್ಐಆರ್ ಗಳು ದಾಖಲಾಗಿದೆ. ಅವರಿಗೆ ಪೊಲೀಸ್ ಠಾಣೆಯಲ್ಲಿ ಜಾಮೀನು ನೀಡಿರುವುದು ಇನ್ನೊಂದು ಪ್ರಕರಣದಲ್ಲಿ' ಎಂದರು.
.ಠಾಣಾಧಿಕಾರಿಗೆ ಬೆದರಿಕೆ: BJP ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ ದಾಖಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.