ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ಶಾಲಾ ಮಕ್ಕಳು ಆನ್ಲೈನ್ ಪಾಠಕ್ಕಿಂತಲೂ ಕೆಲಸ, ಆಟ, ಮೊಬೈಲ್ ಬಳಕೆ ಸೇರಿದಂತೆ ಇತರೆ ಚಟುವಟಿಕೆಗಳಲ್ಲೇ ಹೆಚ್ಚಾಗಿ ತೊಡಗಿಕೊಂಡಿದ್ದರು ಎಂಬುದು ಅಧ್ಯಯನದಿಂದ ಗೊತ್ತಾಗಿದೆ.

ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ (ಕೆಸಿಆರ್ಒ) ಹೊರ ತಂದಿರುವ ‘ಕೋವಿಡ್ 19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ರಾಜ್ಯದ ಮಕ್ಕಳ ಪರಿಸ್ಥಿತಿ–ತೌಲನಿಕ ಅಧ್ಯಯನ’ ಹೆಸರಿನ ವರದಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.

ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ ವರದಿ ಬಿಡುಗಡೆ ಮಾಡಿದರು. ಯುನಿಸೆಫ್ನ ಪ್ರೊಸೂನ್ ಸೇನ್ ಮತ್ತು ಮೀಟಲ್ ರಸ್ಡಿಯಾ, ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಪಲ್ಲವಿ ಅಕುರಾತಿ ಇದ್ದರು.

ಗ್ರಾಮೀಣ ಭಾಗದ ಮಕ್ಕಳು ಆನ್ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಬಾಲ್ಯ ವಿವಾಹಗಳು ಹೆಚ್ಚಾಗಿರುವುದನ್ನು ಅಧ್ಯಯನಕ್ಕೊಳಪಟ್ಟ ಹಿರಿಯರು ಅಲ್ಲಗಳೆದಿದ್ದಾರೆ. ಹದಿಹರೆಯದವರು ಬಾಲ್ಯ ವಿವಾಹದಲ್ಲಿ ಏರಿಕೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

*ಲಾಕ್ಡೌನ್ ಅವಧಿಯಲ್ಲಿ ಅಂಗನವಾಡಿ ಮಕ್ಕಳ ಮನೆಗಳಿಗೆ ಪೌಷ್ಠಿಕ ಆಹಾರ ಪೂರೈಸಲಾಗಿತ್ತೇ?

* ಹೌದು: ಶೇ 81; ಇಲ್ಲ: ಶೇ 19

*ಮೊಟ್ಟೆ ಮತ್ತು ಬಾಲಾಮೃತ ವಿತರಿಸಲಾಗಿತ್ತೇ?

ಹೌದು ಶೇ 81; ಇಲ್ಲ: ಶೇ 19

*ಲಾಕ್ಡೌನ್ ನಂತರವೂ ಮಕ್ಕಳ ಮನೆಗೆ ಪೌಷ್ಟಿಕ ಆಹಾರ ಪೂರೈಸಲಾಗಿತ್ತೆ?

ಹೌದು: ಶೇ 77; ಇಲ್ಲ: ಶೇ 23

*ಲಾಕ್ಡೌನ್ ಅವಧಿಯಲ್ಲಿ ಮಕ್ಕಳಿಗೆ ರೋಗ ನಿರೋಧಕಗಳನ್ನು ನೀಡಲಾಗಿತ್ತೇ?

ಹೌದು: ಶೇ 83; ಇಲ್ಲ: ಶೇ 17

*ಲಾಕ್ಡೌನ್ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿದ್ದರೇ?

ಹೌದು: ಶೇ 69; ಇಲ್ಲ: ಶೇ 31

*ಅಂಗನವಾಡಿ ಮುಚ್ಚಿದ್ದ ಸಮಯದಲ್ಲಿ ಪೋಷಕರು ಮಕ್ಕಳನ್ನು ಎಲ್ಲಿ ಬಿಟ್ಟು ಹೋಗುತ್ತಿದ್ದರು?

ಮನೆಯಲ್ಲಿ ಶೇ 91 ನೆರೆಮನೆಯಲ್ಲಿ ಶೇ 9

*ಮಕ್ಕಳು ಲಾಕ್ಡೌನ್ ಸಮಯದಲ್ಲಿ ಯಾವ ಚಟುವಟಿಕೆಗಳಲ್ಲಿ ತೊಡಗಿದ್ದರು?

ಆನ್ಲೈನ್ ತರಗತಿ ಶೇ 30; ಕೆಲಸ, ಆಟ ಹಾಗೂ ಮೊಬೈಲ್ ಬಳಕೆ ಶೇ 70

*ಶಾಲಾ ಬಿಸಿಯೂಟದ ಪಡಿತರವನ್ನು ಮಕ್ಕಳ ಮನೆಗಳಿಗೆ ತಲುಪಿಸಲಾಗಿತ್ತೇ?

ಹೌದು: ಶೇ 85; ಇಲ್ಲ: ಶೇ 15

* ಕಳೆದ ಒಂದೂವರೆ ವರ್ಷದಲ್ಲಿ ಮಕ್ಕಳ ದುಡಿಮೆ ಪ್ರಮಾಣ ಹೆಚ್ಚಾಗಿದೆಯೇ?

ಹೌದು: ಶೇ 48, ಇಲ್ಲ: ಶೇ 49, ಗೊತ್ತಿಲ್ಲ: ಶೇ 3

*ಒಂದೂವರೆ ವರ್ಷದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಏರಿಕೆಯಾಗಿವೆಯೇ?

ಹೆಚ್ಚಾಗಿದೆ: ಶೇ 43; ಹೆಚ್ಚಾಗಿಲ್ಲ ಶೇ 57

*ಒಂದೂವರೆ ವರ್ಷದಲ್ಲಿ ಮಕ್ಕಳ ಮೇಲಿನ ದೈಹಿಕ ಮತ್ತು ಲೈಂಗಿಕ ಶೋಷಣೆ ಹೆಚ್ಚಿದೆಯೇ?

ಇಲ್ಲ: ಶೇ 82, ಹೌದು: ಶೇ 11, ಗೊತ್ತಿಲ್ಲ: ಶೇ 7

ಅಂಕಿ ಅಂಶಗಳು

ಅಧ್ಯಯನದ ಅವಧಿಯಲ್ಲಿ ನಡೆದ ಕೇಂದ್ರೀಕೃತ ಗುಂಪು ಚರ್ಚೆಗಳು:40

ಚರ್ಚೆಯಲ್ಲಿ ಭಾಗವಹಿಸಿದ 12–18 ವರ್ಷದ ಬಾಲಕ, ಬಾಲಕಿಯರು:513

ಚರ್ಚೆಯಲ್ಲಿ ಪಾಲ್ಗೊಂಡಿದ್ದ 19–56 ವರ್ಷದೊಳಗಿನ ಪುರುಷರು-501

ಚರ್ಚೆಯಲ್ಲಿ ಭಾಗಿಯಾಗಿದ್ದ 20–49 ವರ್ಷದೊಳಗಿನ ಮಹಿಳೆಯರು -510

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.