ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಾಹಸವನ್ನು ರಾಜ್ಯಪಾಲರು ಮಾಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಹಿರಿಯ ರಾಜಕಾರಣಿ. ಅವರು ಅಭಿಯೋಜನೆಗೆ ಅನುಮತಿ ನೀಡಿ ಜನರ ಟೀಕೆಗೆ ಗುರಿಯಾಗಲು ಬಯಸುವುದಿಲ್ಲ ಎಂದರು.

'ಬಿಜೆಪಿ ಹೈಕಮಾಂಡ್ ಒತ್ತಡಕ್ಕೂ ಅವರು ಮಣೆ ಹಾಕುವುದಿಲ್ಲ’ ಎಂದು ಹೇಳಿದ ಅವರು, ‘ಪಾದಯಾತ್ರೆ ಮಾಡುತ್ತಿರುವ ಬಿಜೆಪಿ–ಜೆಡಿಎಸ್ ನಾಯಕರು ಕಾಂಗ್ರೆಸ್‌ನವರಿಗಿಂತ 100 ಪಟ್ಟು ಹೆಚ್ಚು ಭ್ರಷ್ಟರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಗೆ ಬಿಜೆಪಿಯವರೇ ಉತ್ತರ ನೀಡಬೇಕು’ ಎಂದರು.

‘ಬಿಜೆಪಿ– ಜೆಡಿಎಸ್ ನಾಯಕರ ಕೂಗಾಟ ಆರ್ಭಟ ನೋಡಿದರೆ ನಗು ಬರುತ್ತದೆ. ಈ ಹಿಂದೆ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಭ್ರಷ್ಟಾಚಾರಗಳು ಕಣ್ಣೆದುರಿಗೆ ಬರುತ್ತದೆ’ ಎಂದು ಸವದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.