ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಮೂಲಕ ಹಂಚಿಕೆ ಮಾಡಿದ್ದ ಎಂಜಿನಿಯರಿಂಗ್ ಸೀಟುಗಳಲ್ಲಿ ಉಳಿಕೆಯಾಗಿರುವುದು 11 ಮಾತ್ರ ಎಂದು ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಹೇಳಿದೆ.

‘ಎಂಜಿನಿಯರಿಂಗ್ ಕೋರ್ಸ್ಗಳ ಸೀಟ್ ಬ್ಲಾಕಿಂಗ್ ಪ್ರಕರಣ ಕುರಿತು ಈಚೆಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ನೀಡಿದ್ದ ಹೇಳಿಕೆಯಲ್ಲಿ, 2024ನೇ ಸಾಲಿನ ಸೀಟು ಹಂಚಿಕೆಯ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಸೀಟು ಉಳಿಕೆಯಾದ ಕಾಲೇಜುಗಳ ಪಟ್ಟಿಯಲ್ಲಿ ದಯಾನಂದ ಸಾಗರ್ ಕಾಲೇಜು ಹೆಸರಿದೆ. ಆದರೆ, ಪತ್ರಿಕೆಗಳಲ್ಲಿ ಪ್ರಕಟವಾದಂತೆ ಕಾಲೇಜಿನಲ್ಲಿ ಉಳಿಕೆಯಾದ ಸೀಟುಗಳು 34 ಅಲ್ಲ, 11 ಅಷ್ಟೆ. ಕಂಪ್ಯೂಟರ್ ಹಾಗೂ ಆ ಸಂಬಂಧಿತ ಕೋರ್ಸ್ಗಳಲ್ಲಿ ಉಳಿಕೆಯಾಗಿರುವುದು 9 ಮಾತ್ರ. ಅವುಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಬೇರೆ ಕೋರ್ಸ್ಗಳಿಗೆ ಪ್ರವೇಶ ಪಡೆದಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲರಾದ ಬಿ.ಜಿ. ಪ್ರಸಾದ್ ಸ್ಷಪ್ಟನೆ ನೀಡಿದ್ದಾರೆ.

‘ಬೇಡಿಕೆ ಇರುವ ಕೋರ್ಸ್ಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದೇ ಇರುವುದು, ಪ್ರವೇಶವನ್ನು ರದ್ದು ಮಾಡಿಕೊಂಡಿರುವುದಕ್ಕೂ, ಕಾಲೇಜಿಗೂ ಯಾವುದೇ ಸಂಬಂಧ ಇಲ್ಲ. ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಯಾವ ಪಾತ್ರವೂ ಇರುವುದಿಲ್ಲ. ಅಂತಹ ನಡೆಯನ್ನು ಪ್ರೋತ್ಸಾಹಿಸುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.