ಬೆಂಗಳೂರು: ಸಾಮಾಜಿಕ ಜಾಲತಾಣಗಳ ಕಾರ್ಯವೈಖರಿ ಬಗ್ಗೆ ಪ್ರಗತಿಪರರು, ರಾಜಕೀಯ ವಿಶ್ಲೇಷಕರು ಹಾಗೂ ಪತ್ರಕರ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ಆಡಳಿತ ಪಕ್ಷವನ್ನು ಅಥವಾ ಆಡಳಿತದ ಮೂಗುದಾರವನ್ನು ಹಿಡಿದಿರುವವರನ್ನು ಟೀಕಿಸಲು ಬಳಕೆಯಾಗುತ್ತಿರುವ ಕೆಲವು ನಿರ್ದಿಷ್ಟ ಪದಗಳಿರುವ ಪೋಸ್ಟ್‌ಗಳನ್ನು ಫೇಸ್‌ಬುಕ್ ಜಾಲತಾಣ ನಿರ್ಬಂಧಿಸುತ್ತಿದೆ ಎಂದು ದೂರಿದ್ದಾರೆ.

ಫೇಸ್‌ಬುಕ್ ತನ್ನ ಸಮುದಾಯ ಮಾನದಂಡಕ್ಕೆ ಧಕ್ಕೆ ತರುತ್ತಿದೆ ಎಂಬ ಕಾರಣ ನೀಡಿ ಪೋಸ್ಟ್‌ಗಳನ್ನೆಲ್ಲಾ ತೆಗೆದು ಹಾಕುವ ಸಂದೇಶ ನೀಡುತ್ತಿದೆ ಎಂದು ಲೇಖಕ ಸುರೇಶ ಕಂಜರ್ಪಣೆ ಲೇಖನದ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ಬಿಜೆಪಿ ಮತ್ತು ಅದರ ಆಡಳಿತದ ಕುರಿತು ಬರೆದಿದ್ದ ಲೇಖನಗಳುಳ್ಳ ಪೋಸ್ಟ್‌ಗಳನ್ನೆಲ್ಲ ಹುಡುಕಿ ತೆಗೆದುಹಾಕಲಾಗಿದೆ. ಫೇಸ್‌ಬುಕ್ ಬಿಜೆಪಿಯ ಮತ್ತೊಂದು ಮೋರ್ಚಾ ಎಂಬ ಅನುಮಾನ ಈಗ ನಿಜವಾಗಿದೆ ಅಲ್ಲವೇ? ಎಂದು ಲೇಖಕ ಶಶಿ ಸಂಪಳ್ಳಿ ಪ್ರಶ್ನಿಸಿದ್ದಾರೆ.

ಇದೇ ಮೊದಲ ಬಾರಿಗೆ ಖಾತೆಯನ್ನು ನಿರ್ಬಂಧಿಸುವುದಾಗಿ ಸಂದೇಶಗಳು ಬರುತ್ತಿವೆ ಎಂದು ಸಂಜ್ಯೋತ ವಿಕೆ ಸ್ಕ್ರೀನ್‌ಶಾಟ್‌ಗಳನ್ನು ಶೇರ್ ಮಾಡಿದ್ದಾರೆ.

ದೇವನೂರು ಮಹದೇವ ಅವರ 'ಆರ್‌ಎಸ್ಎಸ್ ಆಳ ಮತ್ತು ಅಗಲ' ಪುಸ್ತಕವನ್ನು ಫೇಸ್‌ಬುಕ್ ಮೂಲಕ ಹೆಚ್ಚಿನ ಜನರಿಗೆ ತಲುಪಿಸಲು ಪ್ರಯತ್ನಿಸಿದ ಹಲವರಿಗೆ ಖಾತೆಯನ್ನು ನಿರ್ಬಂಧಿಸುವ ಸಂದೇಶಗಳು ಬಂದಿವೆ ಎನ್ನಲಾಗಿದೆ.

ಫೇಸ್‌ಬುಕ್ ಸಮುದಾಯ ಮಾನದಂಡ ಎನ್ನುವುದರ ನೈಜ ಹೆಸರು ಬಿಜೆಪಿ ಅಥವಾ ಆರೆಸ್ಸೆಸ್ ಸಮುದಾಯ ಮಾನದಂಡ ಆಗಿದೆ ಎಂದು ಪತ್ರಕರ್ತ ಶಶಿಧರ ಹೆಮ್ಮಾಡಿ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.