ಬೆಂಗಳೂರು: 'ಬಸನಗೌಡ ಪಾಟೀಲ ಯತ್ನಾಳ ಅವರು ಸ್ವಪ್ರತಿಷ್ಠೆಯಿಂದ ಹೋರಾಟ ಮಾಡ್ತಾ ಇರೋದು ಅವರಿಗೆ ಶೋಭೆ ತರುವುದಿಲ್ಲ' ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಯತ್ನಾಳ ಅವರು ಪ್ರತ್ಯೇಕ ಹೋರಾಟ ಕೈಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಪಕ್ಷ ಬಲಗೊಳ್ಳುತ್ತದೆ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

'ಹೋರಾಟ ಕೈಬಿಟ್ಟು ನಮ್ಮ ಜತೆ ಸೇರಿ ಒಟ್ಟಿಗೆ ಕೆಲಸ ಮಾಡೋಣ ಎಂದು ವಿಜಯೇಂದ್ರ ಹೇಳಿದ್ದಾರೆ. ಆದರೆ, ಯತ್ನಾಳ ಅವರು ಸ್ವಪ್ರತಿಷ್ಠೆಗೆ ಇವೆಲ್ಲ ಮಾಡ್ತಾ ಇದ್ದಾರೆ. ಈಗಲಾದರೂ ಜಾಗ್ರತರಾಗಬೇಕು. ಅವರಿಗೆ ಹೇಳುವ ನಮ್ಮ ಡ್ಯೂಟಿಯನ್ನು ಮಾಡಿದ್ದೇವೆ. ಉಳಿದದ್ದು ಅವರಿಗೆ ಮತ್ತು ವರಿಷ್ಠರಿಗೆ ಬಿಟ್ಟಿದ್ದು. ವರಿಷ್ಠರ ಗಮನಕ್ಕೆ ಇವೆಲ್ಲ ಬಂದಿರಬಹುದು' ಎಂದು ಯಡಿಯೂರಪ್ಪ ಹೇಳಿದರು.
.ಮಾಣಿಪ್ಪಾಡಿ ವರದಿ; ಧರ್ಮಸಿಂಗ್, ಖರ್ಗೆಯಿಂದ ವಕ್ಫ್ ಆಸ್ತಿ ಒತ್ತುವರಿ: ಯತ್ನಾಳ .ಚುನಾವಣಾ ಫಲಿತಾಂಶ ಸಂಘಟನೆಯ ಮೇಲೆ ಪ್ರಭಾವ ಬೀರದು: ವಿಜಯೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.