ಬೆಂಗಳೂರು: ‘ಮೈಸೂರು ಜಿಲ್ಲೆಯಲ್ಲಿಯೇ ಚಿತ್ರ ನಗರಿ ಸ್ಥಾಪಿಸಲು ತೀರ್ಮಾನಿಸಲಾಗಿದೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

ವಿಧಾನ ಪರಿಷತ್‍ನಲ್ಲಿ ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಸಂದೇಶ್ ನಾಗರಾಜು ಅವರು ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸುವ ಕುರಿತು ಬಜೆಟ್ ಮೇಲಿನ ಚರ್ಚೆಗೆ ನೀಡುವ ಉತ್ತರದಲ್ಲಿಯೇ ಘೋಷಿಸಬೇಕೆಂದು ಆಗ್ರಹಿಸಿದಾಗ, ಸಚಿವರು ಈ ಉತ್ತರ ನೀಡಿದರು.

‘ಬೆಂಗಳೂರಿನ ಸುತ್ತಮುತ್ತ ಚಲನಚಿತ್ರ ನಗರಿ ಮತ್ತು ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪಿಸಲು ಸೂಕ್ತ ಹಾಗೂ ಸುಮಾರು 50ರಿಂದ 70 ಎಕರೆ ಜಮೀನು ಲಭ್ಯ ಇಲ್ಲ. ಹೀಗಾಗಿ, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದಲ್ಲಿ 110.8 ಎಕರೆ ಜಮೀನನಲ್ಲಿ ಚಿತ್ರ ನಗರಿ ಸ್ಥಾಪಿಸುವ ಉದ್ದೇಶಿಸಲಾಗಿದೆ’ ಎಂದು ಸಚಿವರು ತಿಳಿಸಿದರು.

ಕನ್ನಡ ಚಿತ್ರೋದ್ಯಮ ಪ್ರೋತ್ಸಾಹಿಸಿ, ಉತ್ತೇಜಿಸಲು ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣ, ಚಿತ್ರೀಕರಣದ ಪೋಸ್ಟ್ ಪ್ರೊಡಕ್ಷನ್ ಕೆಲಸ, ಥೀಮ್ ಪಾರ್ಕ್ ಮತ್ತಿತರ ಚಟುವಟಿಕೆಯನ್ನು ಒಂದೇ ಸೂರಿನಡಿಯಲ್ಲಿ ತರುವ ಉದ್ದೇಶದಿಂದ ಚಿತ್ರ ನಗರಿ ನಿರ್ಮಾಣ ಮಾಡುವುದಾಗಿ 2020-21ನೇ ಸಾಲಿನ ಬಜೆಟ್ ಭಾಷಣದಲ್ಲಿಮುಖ್ಯಮಂತ್ರಿ ಘೋಷಿಸಿದ್ದರು.

‘ನಟನಾ ಕೌಶಲ್ಯಕ್ಕೆ ಪ್ರಸಿದ್ಧಿಯಾಗಿರುವ ಕರ್ನಾಟಕದಲ್ಲಿ ಜಾಗತಿಕ ಗುಣಮಟ್ಟದ ಫಿಲಂ ಸಿಟಿಯನ್ನು ಬೆಂಗಳೂರಿನಲ್ಲಿ ಒಟ್ಟು ₹ 500 ಕೋಟಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.