ಬೆಂಗಳೂರು: ‘ಸಾಮಾನ್ಯ ಶಿಕ್ಷಕರು ಮಾಡುವ ಕೆಲಸವನ್ನು ಸಂಪೂರ್ಣ ಅಂಧತ್ವ ಹೊಂದಿರುವ ವ್ಯಕ್ತಿಗಳು ನಿರ್ವಹಣೆ ಮಾಡಲು ಸಾಧ್ಯವಿಲ್ಲ’ ಎಂಬ ರಾಜ್ಯ ಸರ್ಕಾರದ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಪ್ರಕರಣವೊಂದರಲ್ಲಿ, ‘ಆಯ್ಕೆಪಟ್ಟಿಯ ಅನುಸಾರ ಅರ್ಜಿದಾರರಾದ ಪರಿಶಿಷ್ಟ ಜಾತಿಯ ಅಂಧ ಮಹಿಳೆಯನ್ನು ಶಿಕ್ಷಕರ ಹುದ್ದೆಗೆ ಪರಿಗಣಿಸಿ’ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿದೆ.

ಸಂಪೂರ್ಣ (ಶೇ 100ರಷ್ಟು) ಅಂಧತ್ವ ಹೊಂದಿರುವ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಹಂಡಿತವಳ್ಳಿಯ ಎಚ್.ಎನ್.ಲತಾ ಅವರಿಗೆ, ಶಿಕ್ಷಕರ ಹುದ್ದೆಗೆ ಅರ್ಜಿ (ಡಬ್ಲ್ಯು.ಪಿ 19994/2024) ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಇಲಾಖೆಯು, ಶಿಕ್ಷಕರ ಹುದ್ದೆ ಪಡೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕಡಿಮೆ ದೃಷ್ಟಿ ಹೊಂದಿದವರ ಜೊತೆಗೆ ಸಂಪೂರ್ಣ ಅಂಧತ್ವಕ್ಕೆ ಗುರಿಯಾದವರಿಗೂ ಅವಕಾಶ ನೀಡಬೇಕಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ; ಅಂಗವಿಕಲರ ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪಾಲುದಾರಿಕೆಯ ಸಂಪೂರ್ಣ ಅವಕಾಶ ಕಾಯ್ದೆ–1995 ಹಾಗೂ ಅಂಗವಿಕಲರ ಕಾಯ್ದೆ–2016 ಅನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಹುದ್ದೆಗಳನ್ನು ಕಡಿಮೆ ದೃಷ್ಟಿದೋಷ ಉಳ್ಳವರಿಗೆ ಮಾತ್ರವೇ ಮೀಸಲಿಟ್ಟಿದ್ದು, ಸಂಪೂರ್ಣ ಅಂಧತ್ವ ಹೊಂದಿರುವವರಿಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂಬ ಸರ್ಕಾರದ ವಾದವನ್ನು ಒಪ್ಪಲಾಗುವುದಿಲ್ಲ. ಜೀವನದಲ್ಲಿ ಮಹತ್ತರ ಸಾಧನೆ ಮಾಡಿದ ಅಂಧರ ಉದಾಹರಣೆಗಳು ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿವೆ. ಗ್ರೀಕ್ ಕವಿ ಹೋಮರ್, ಇಂಗ್ಲಿಷ್ ಕವಿ ಜಾನ್ ಮಿಲ್ಟನ್, ವಕೀಲೆ ಮತ್ತು ಲೇಖಕಿಯಾದ ಅಮೆರಿಕದ ಹೆಲೆನ್ ಕೆಲ್ಲರ್ ಮತ್ತು ಫ್ರೆಂಚ್ ಶಿಕ್ಷಕ ಲೂಯಿ ಬ್ರೈಲ್... ಇದಕ್ಕೆಲ್ಲಾ ಉದಾಹರಣೆ’ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.