ಹುಬ್ಬಳ್ಳಿ: ಮಧ್ಯಪ್ರದೇಶ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ತಾನ್ಸೇನ್ ಸನ್ಮಾನ್ ಪುರಸ್ಕಾರಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಉತ್ತ ಕನ್ನಡ ಜಿಲ್ಲೆಯ ಪಂಡಿತ ಗಣಪತಿ ಭಟ್ ಹಾಸಣಗಿ ಆಯ್ಕೆಯಾಗಿದ್ದಾರೆ. ಇದೇ ತಿಂಗಳ 24ರಂದು ಗ್ವಾಲಿಯನಲ್ಲಿ ನಡೆಯಲಿರುವ ತಾನ್ಸೇನ್ ಕಾರ್ಯಕ್ರಮದಲ್ಲಿ ಪುರಸ್ಕಾರ ಸ್ವೀಕರಿಸಲಿದ್ದಾರೆ.

ಸಂತೋಷ ತಂದಿದೆ: ‘ನನಗೀಗ 72 ವರ್ಷ ವಯಸ್ಸಾಗಿದೆ. ಇಷ್ಟು ವರ್ಷ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿದ್ದಕ್ಕೆ ಹಾಗೂ ಗೌರವಿಸುತ್ತಿರುವುದಕ್ಕೆ ಸಂತೋಷವಾಗಿದೆ’ ಎಂದು ಪಂಡಿತ ಗಣಪತಿ ಭಟ್ ಹಾಸಣಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ತ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಸಮೀಪದ ಹಾಸಣಗಿ ಗ್ರಾಮದವರಾದ ಅವರು, ಪಂ.ಬಸವರಾಜ ರಾಜಗುರು ಅವರ ಶಿಷ್ಯರಾಗಿದ್ದಾರೆ. ಕಿರಾಣಾ– ಗ್ವಾಲಿಯರ್ ಘರಾನಾ ಪರಂಪರೆಗೆ ಸೇರಿದವರಾಗಿದ್ದಾರೆ. ಹಲವು ವರ್ಷಗಳಿಂದ ಗಾಯಕರಾಗಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1993), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (2007), ವತ್ಸಲಭಾಯಿ ಭೀಮ್ಸೇನ್ ಜೋಶಿ ಪ್ರಶಸ್ತಿ (2006) ಸೇರಿದಂತೆ ರಾಷ್ಟ್ರಮಟ್ಟದ ಹಾಗೂ ರಾಜ್ಯ ಮಟ್ಟದ ಹಲವು ಪ್ರಶಸ್ತಿ– ಪುರಸ್ಕಾರಗಳು ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.