ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೋಭಾ ಕರಂದ್ಲಾಜೆ ಬಗ್ಗೆ ಭಯ ಆಗುತ್ತದೆ: ಎಸ್‌.ಟಿ.ಸೋಮಶೇಖರ್

Published : 22 ಮಾರ್ಚ್ 2024, 0:01 IST
Last Updated : 22 ಮಾರ್ಚ್ 2024, 0:01 IST
ಫಾಲೋ ಮಾಡಿ
Comments
ನೋಟಿಸ್‌ಗೆ 170 ಪುಟಗಳ ಉತ್ತರ
ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ಗೆ ಮತ ಚಲಾಯಿಸಿದ ಎಸ್‌.ಟಿ.ಸೋಮಶೇಖರ್ ಮತ್ತು ಮತ ಚಲಾಯಿಸದ ಶಿವರಾಮ್‌ ಹೆಬ್ಬಾರ್ ಅವರು ಬಿಜೆಪಿ ವರಿಷ್ಠರು ನೀಡಿದ ನೋಟಿಸ್‌ಗೆ ತಲಾ 170 ಪುಟಗಳ ಉತ್ತರ ನೀಡಿರುವುದಾಗಿ ಹೇಳಿದರು. ‘ದೇಶದ ವಿವಿಧ ನ್ಯಾಯಾಲಯಗಳು ಅಡ್ಡ ಮತದಾನದ ಕುರಿತು ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿ ಉತ್ತರ ನೀಡಲಾಗಿದೆ. ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಇತರ ರಾಜ್ಯಗಳಲ್ಲಿ ಬಿಜೆಪಿ ಪರ ಕಾಂಗ್ರೆಸ್‌ ಮತ್ತು ಇತರ ಪಕ್ಷಗಳ ಶಾಸಕರು ಮತ ಚಲಾಯಿಸಿರುವುದನ್ನೂ ಉಲ್ಲೇಖಿಸಿದ್ದೇವೆ. ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾಯುತ್ತಿದ್ದೇವೆ’ ಎಂದು ಸೋಮಶೇಖರ್ ಮತ್ತು ಹೆಬ್ಬಾರ್‌ ವಿವರಿಸಿದರು. ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇವರಿಬ್ಬರನ್ನು ಕರೆಸಿಕೊಂಡು ಶಿವಕುಮಾರ್‌ ಮಾತುಕತೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್‌ ಅವರ ಪರವಾಗಿ ಸಹಾಯ ಮಾಡಲು ಕೇಳಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಶೋಭಾ ಕರಂದ್ಲಾಜೆ ಅವರು ಅಭ್ಯರ್ಥಿ ಘೋಷಣೆಯಾದ ಬಳಿಕ ಯಶವಂತಪುರ ಶಾಸಕ ಸೋಮಶೇಖರ್ ಅವರನ್ನು ಭೇಟಿ ಮಾಡಿಲ್ಲ. ಆದರೆ, ಅವರ ಕಟ್ಟಾ ಎದುರಾಳಿ ಜೆಡಿಎಸ್‌ನ ಜವರಾಯಿಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT