ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆ ನಿಟ್ಟಿನಲ್ಲಿ ಮಾಧವ ಗಾಡ್ಗೀಳ್ ಸಮಿತಿ ನೀಡಿರುವ ವರದಿಯು ಜಾರಿಯಾಗದೇ ನನಗೆಗುದಿಗೆ ಬಿದ್ದಿರುವ ಬಗ್ಗೆ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿ ತೀವ್ರ ಮಳೆಯಿಂದಾಗಿ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಮೇಶ್ ಟ್ವೀಟ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಕೇರಳದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗಲೆಲ್ಲ, ಪಶ್ಚಿಮ ಘಟ್ಟಗಳ ಸಂರಕ್ಷಣೆ ಉದ್ದೇಶದ 2011ರ ಮಾಧವ ಗಾಡ್ಗೀಳ್ ನೇತೃತ್ವದ ಪರಿಸರ ತಜ್ಞರ ಸಮಿತಿಯ ವರದಿ ನೆನಪಾಗುತ್ತದೆ. ಒಂದು ದಶಕದ ನಂತರವೂ, 2018 ಮತ್ತು 2020ರ ವಿನಾಶಕಾರಿ ಪ್ರವಾಹಗಳ ಹೊರತಾಗಿಯೂ ವರದಿ ಜಾರಿಯಾಗಿಲ್ಲ,’ ಎಂದು ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಯುಪಿಎ ಸರ್ಕಾರದಲ್ಲಿ ಜೈರಾಂ ರಮೇಶ್ ಪರಿಸರ ಸಚಿವರಾಗಿದ್ದಾಗ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಸಮಗ್ರ ನೀತಿ ರೂಪಿಸಲು ಪ್ರೊ.ಮಾಧವ ಗಾಡ್ಗೀಳ್ ನೇತೃತ್ವದ ಪಶ್ಚಿಮಘಟ್ಟದ ಪರಿಸರ ತಜ್ಞರ ತಂಡ (ಡಬ್ಲ್ಯುಜಿಇಇಪಿ) ರಚಿಸಲಾಗಿತ್ತು. ಸಮಿತಿ ನೀಡಿದ ವರದಿಗಳನ್ನು ಅನುಷ್ಠಾನಗೊಳಿಸಲು ಯುಪಿಎ ಸರ್ಕಾರಕ್ಕೆ ಆಗಿರಲಿಲ್ಲ. ನಂತರದ ಸರ್ಕಾರಗಳೂ ಅದನ್ನು ಕಾರ್ಯಗತ ಮಾಡುವಲ್ಲಿ ವಿಫಲವಾಗಿವೆ.

ಮಾಧವ ಗಾಡ್ಗೀಳ್ ಸಮಿತಿ ವರದಿಯ ಮುಖ್ಯಭಾಗಗಳ ಕನ್ನಡಾನುವಾದ ಇಲ್ಲಿದೆ

Prof. Madhav Gadgil's Report Kannada  from Mohan GS

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.