ಬೆಂಗಳೂರು: ‘ಗೇಮ್ ಚೇಂಜರ್ಸ್’ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇವಲ ‘ನೇಮ್ ಚೇಂಜರ್ಸ್’ ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

60 ವರ್ಷಗಳ ಜಡ್ಡುಗಟ್ಟಿದ ಕಾಂಗ್ರೆಸ್ ಆಡಳಿತದಲ್ಲಿ ಗೇಮ್ಗಳೆಲ್ಲವೂ ಗಾಂಧಿ ಕುಟುಂಬದವರದ್ದಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಆಡಳಿತದಲ್ಲಿ ಎಲ್ಲವೂ ಭಾರತದ ಪರವಾಗಿವೆ ಎಂದು ಬಿಜೆಪಿ ಕುಟುಕಿದೆ.

‘ಅಯೋಧ್ಯೆಯಲ್ಲಿ ರಾಮ ಮಂದಿರ, ಸಂವಿಧಾನದ ವಿಧಿ 370ರ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದು, 60 ಕೋಟಿಗೂ ಹೆಚ್ಚು ಭಾರತೀಯರ ಬಳಿ ಆಯುಷ್ಮಾನ್ ಕಾರ್ಡ್, ಜನಧನ ಯೋಜನೆ ಮೂಲಕ 50 ಕೋಟಿಗೂ ಹೆಚ್ಚು ಜನರಿಗ ಬ್ಯಾಂಕ್ ಖಾತೆ, ಉಜ್ವಲ ಯೋಜನೆಯಿಂದ 20 ಕೋಟಿಗೂ ಹೆಚ್ಚು ಹೊಗೆ ರಹಿತ ಅಡುಗೆ ಮನೆ, ಜಲಜೀವನ್ ಮಿಷನ್ನಿಂದ 10 ಕೋಟಿಗೂ ಹೆಚ್ಚು ಮನೆ ಬಾಗಿಲಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ ವಿದೇಶಗಳಿಗೂ ಪ್ರಧಾನಿ ಮೋದಿ ಅವರ ನಾಯಕತ್ವ ಮಾದರಿಯಾಗಿದೆ’ ಎಂದು ಬಿಜೆಪಿ ಕೊಂಡಾಡಿದೆ.

ಪ್ರಿಯಾಂಕ್ ಖರ್ಗೆ ಅವರೇ, ಉಡಾನ್ ಯೋಜನೆಯಿಂದ ನಿಮ್ಮ ಕಲಬುರಗಿ ಜೊತೆ ದೇಶದ 200ಕ್ಕೂ ಅಧಿಕ ಕಡೆ ಹೊಸ ವಿಮಾನ ನಿಲ್ದಾಣ ನಿರ್ಮಾಣ, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ದೇಶದ ಪ್ರತಿಯೊಬ್ಬ ರೈತರಲ್ಲಿಯೂ ಮೂಡಿದೆ ಹೊಸ ಉತ್ಸಾಹ, ವಿಶ್ವದಲ್ಲಿಯೇ ಅತಿ ಹೆಚ್ಚು ಸ್ಟಾರ್ಟ್ಅಪ್ಗಳು ಮತ್ತು ಯೂನಿಕಾರ್ನ್ಗಳು ಭಾರತದಲ್ಲಿವೆ. ಇಂತಹ ಇನ್ನೂ ನೂರಾರು ಗೇಮ್ ಚೇಂಜರ್ಗಳಿವೆ, ಜೊತೆಗೆ ಕೆಲ ನೇಮ್ ಚೆಂಜ್ಗಳು ಸಹ ಆಗಿವೆ. ಅವು ಇಂತಿವೆ ಯುಪಿಎ – I.N.D.I.Alliance, ರೌಲ್ ವಿನ್ಸಿ - ರಾಹುಲ್ ಗಾಂಧಿ, ಆಂಟೋನಿಯೊ ಮೈನೊ –ಸೋನಿಯಾ ಗಾಂಧಿ ಎಂದು ಬಿಜೆಪಿ ಲೇವಡಿ ಮಾಡಿದೆ.

ಕಾಂಗ್ರೆಸ್ ಪಕ್ಷ ದ್ವೇಷಿಸುವ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಭಾರತದ ಸಂವಿಧಾನವನ್ನೊಮ್ಮೆ ಅಧ್ಯಯನ ಮಾಡಿ... India that is Bharat ಎಂಬುದನ್ನು ದಪ್ಪ ಅಕ್ಷರಗಳಲ್ಲಿಯೇ ಉಲ್ಲೇಖಿಸಲಾಗಿದೆ ಎಂದು ಬಿಜೆಪಿ ಕುಟುಕಿದೆ.

ಹೆಸರುಗಳ ಬದಲಾವಣೆ ವಿಚಾರ ಪ್ರಸ್ತಾಪಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಪ್ರಿಯಾಂಕ್ ಖರ್ಗೆ, ‘2014ರ ಮೊದಲು ಅಮೆರಿಕ, ಬ್ರಿಟನ್, ರಷ್ಯಾಗಳಂತಹ ಮುಂದುವರೆದ ದೇಶಗಳೊಂದಿಗೆ ಭಾರತದ ಸ್ಪರ್ಧೆ ಇತ್ತು. ಈಗ ಗುಜರಾತ್ ಮಾಡೆಲ್, ಯುಪಿ ಮಾಡೆಲ್ ಹೆಸರಲ್ಲಿ ಜಾತಿ ಜನಾಂಗಗಳ ನಡುವೆ ದ್ವೇಷ ಬಿತ್ತಿ ‘ಮಣಿಪುರ ಮಾಡೆಲ್’ ಸೃಷ್ಟಿಸಿದ್ದಾರೆ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳೊಂದಿಗೆ ಭಾರತವನ್ನು ತುಲನೆ ಮಾಡಿಕೊಂಡು ಬೆನ್ನುತಟ್ಟಿಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿರುವ ಬಿಜೆಪಿಯಿಂದ ಹೆಸರುಗಳ ಬದಲಾವಣೆಗಳನ್ನಲ್ಲದೆ ಬೇರೆ ಇನ್ನೇನು ನಿರೀಕ್ಷಿಸಲು ಸಾಧ್ಯ?, ಸಮರ್ಥ ಆಡಳಿತಗಾರರು ಭಾರತದಲ್ಲಿ ಬದಲಾವಣೆ ತರುತ್ತಾರೆಯೇ ಹೊರತು ಭಾರತದ ಹೆಸರಿನ ಬದಲಾವಣೆಯನ್ನಲ್ಲ ಎಂದು ಪ್ರಿಯಾಂಕ್ ಕಿಡಿಕಾರಿದ್ದರು.

ದೆಹಲಿಯಲ್ಲಿ ನಡೆಯಲಿರುವ ಜಿ–20 ಶೃಂಗಸಭೆಯಲ್ಲಿ ಭಾಗವಹಿಸುವ ನಾಯಕರಿಗೆ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ’ಪ್ರೆಸಿಡೆಂಟ್ ಆಫ್ ಭಾರತ್’ ಎನ್ನುವ ಹೆಸರಿನಲ್ಲಿ ರಾಷ್ಟ್ರಪತಿಗಳು ನೀಡಿರುವ ಔತಣಕೂಟದ ಆಹ್ವಾನ ಪತ್ರಿಕೆ ಈಗ ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರದ ಈ ನಡೆಗೆ ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಓದಿ... ‘ಗೇಮ್ ಚೇಂಜರ್ಸ್’ ಎಂದಿದ್ದ ಮೋದಿ ಕೇವಲ ‘ನೇಮ್ ಚೇಂಜರ್ಸ್’ ಆಗಿದ್ದಾರೆ: ಪ್ರಿಯಾಂಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.