ಬೆಂಗಳೂರು: ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಾಳೆದಿಂಡಿನ ತಟ್ಟೆ ಮತ್ತು ಕಾಗದವನ್ನುಕೊಪ್ಪಳದ ಆನೆಗುಂದಿಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಶಿವಕುಮಾರ್ ಆವಿಷ್ಕರಿಸಿದ್ದಾರೆ.

1 ಕೆಜಿ ಬಾಳೆ ದಿಂಡನ್ನು ತುಂಡು ಮಾಡಿ ನೀರಿನಲ್ಲಿ ನೆನೆಸಿ ಇಡಬೇಕು. ಪ್ರತ್ಯೇಕವಾಗಿ ನೀರನ್ನು ಕುದಿಸಿ, 20 ಗ್ರಾಂನಷ್ಟು ಕಾಸ್ಟಿಕ್ ಸೋಡದೊಂದಿಗೆ ತುಂಡುಗಳನ್ನು ಹಾಕಿ ಗಟ್ಟಿ ದ್ರಾವಣವಾಗಿಸಬೇಕು. ಇದನ್ನು ರುಬ್ಬಿದರೆ ಮತ್ತಷ್ಟು ಗಟ್ಟಿ ದ್ರಾವಣ ದೊರೆಯುತ್ತದೆ. ಇದನ್ನು ಲೋಟ, ತಟ್ಟೆಯ ಮೇಲೆ ಅಂಟಿಸಿ ಅಚ್ಚು ತೆಗೆದು ಒಣಗಿಸಿದರೆ ಬಾಳೆ ದಿಂಡಿನ ಲೋಟ, ತಟ್ಟೆ ಸಿದ್ಧವಾಗುತ್ತದೆ.

‘ಮದುವೆ ಮತ್ತಿತರ ಸಮಾರಂಭಗಳು ನಡೆದಾಗ ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಬಳಸುವುದರಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುತ್ತದೆ. ಇದನ್ನು ತಪ್ಪಿಸಲು ಬಾಳೆದಿಂಡಿನ ಉತ್ಪನ್ನಗಳು ಸಹಕಾರಿಯಾಗಿವೆ. ಇಂತಹ 10 ಲೋಟಗಳನ್ನು ₹30 ರಿಂದ ₹40ಕ್ಕೆ ಮಾರಾಟ ಮಾಡಬಹುದು. ಇದರ ಉತ್ಪಾದನಾ ವೆಚ್ಚವೂ ಅತಿ ಕಡಿಮೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.