ಬೆಂಗಳೂರು: ‘ವಕ್ಪ್ ಮಸೂದೆಯ ಪರಿಶೀಲನೆಗೆ ರಚಿಸಿರುವ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರ ಹುಬ್ಬಳ್ಳಿ ಭೇಟಿ ನಿಯಮಾವಳಿಗಳ ಉಲ್ಲಂಘನೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ವಕ್ಫ್ ತಿದ್ದುಪಡಿ ವಿಚಾರವಾಗಿ ಸಮಿತಿ ಸದಸ್ಯರು ಅಕ್ಷೇಪ ಎತ್ತಿದ್ದಾರೆ. ಹೀಗಿರುವಾಗ ಅವರೊಬ್ಬರೇ ಭೇಟಿ ನೀಡಿರುವುದು ಸರಿಯಲ್ಲ’ ಎಂದರು.

‘ಸಮಿತಿಯ ನಿಯಮಗಳನ್ನು ಜಗದಾಂಬಿಕಾ ಪಾಲ್ ಅವರು ಗಾಳಿಗೆ ತೂರಿದ್ದಾರೆ. ಅವರ ಭೇಟಿ ರಾಜಕೀಯ ಪ್ರೇರಿತ’ ಎಂದೂ ಹೇಳಿದರು.

ದೂರು ನೀಡಿದರೆ ತನಿಖೆ: ‘ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪದ ವಿಚಾರವಾಗಿ ದೂರು ನೀಡಿದರೆ ತನಿಖೆ ನಡೆಯಲಿದೆ’ ಎಂದು ಪರಮೇಶ್ವರ ಹೇಳಿದರು.

‘ಸುಮ್ಮನೇ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಆಗಬಾರದು. ಅವರು ಭ್ರಷ್ಟಾಚಾರ ಮಾಡಿದ್ದಾರೆ, ಇವರು ಭ್ರಷ್ಟಾಚಾರ ಮಾಡಿದ್ದಾರೆ ಅಂದರೆ ಹೇಗೆ? ಯಾವ ರೀತಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂಬುವುದನ್ನು ಹೇಳಬೇಕು. ಹೀಗಾಗಿ, ಈ ಬಗ್ಗೆ ದೂರು ನೀಡಿದರೆ ಅಥವಾ ಸಂಬಂಧಪಟ್ಟವರಿಗೆ ತಿಳಿಸಿದರೆ ತನಿಖೆ ನಡೆಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.