ಬೆಂಗಳೂರು: ಉಚಿತವಾಗಿ ಹತ್ತು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ರಾಯಚೂರಿನ ಮಲ್ಲಮ್ಮ ಸೂಲಗಿತ್ತಿ, ಇತ್ತೀಚೆಗೆ ಕೊಚ್ಚಿ ಹೋಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮರಳಿ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಕನ್ನಯ್ಯ ನಾಯ್ಡು, ಸಾಹಿತ್ಯ ಕ್ಷೇತ್ರದಿಂದ ಎಂ. ವೀರಪ್ಪ ಮೊಯಿಲಿ, ಬಿ.ಟಿ. ಲಲಿತಾ ನಾಯಕ್, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಸೇರಿದಂತೆ 69 ಸಾಧಕರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲನ ಮೂರ್ತಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್, ಮಾಜಿ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಅಂತರರಾಷ್ಟ್ರೀಯ ಹಾಕಿ ಆಟಗಾರ ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್, ಚಲನಚಿತ್ರ ನಟಿ ಹೇಮಾ ಚೌದರಿ, ಸಂಕೀರ್ಣ ಕ್ಷೇತ್ರದಲ್ಲಿ ಹುಲಿಕಲ್ ನಟರಾಜ, ವಿಜ್ಞಾನ– ತಂತ್ರಜ್ಞಾನ ಕ್ಷೇತ್ರದಿಂದ ಟಿ.ವಿ ರಾಮಚಂದ್ರ, ಬಯಲಾಟ ಕ್ಷೇತ್ರದಲ್ಲಿ ವಿಜಯನಗರದ 92 ವರ್ಷದ ನಾರಾಯಣಪ್ಪ ಶಿಳ್ಳೇಕ್ಯಾತ, ಜಾನಪದ ಕ್ಷೇತ್ರದಲ್ಲಿ ಅಂಧ ಕಲಾವಿದ, ಬೀದರ್ನ ನರಸಿಂಹಲು ಸೇರಿದಂತೆ ಕಲೆ, ಸಾಹಿತ್ಯ, ಸಮಾಜ ಸೇವೆ, ಸಂಗೀತ, ಜಾನಪದ, ಕೃಷಿ, ಪರಿಸರ, ಶಿಕ್ಷಣ, ಕ್ರೀಡೆ, ಮಾಧ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. 13 ಮಹಿಳೆಯರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಅಲ್ಲದೆ, ‘ಕರ್ನಾಟಕ ಸಂಭ್ರಮ–50’ ಅಭಿಯಾನದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ ತಲಾ 50 ಮಹಿಳೆಯರು ಮತ್ತು ಪುರುಷ ಸಾಧಕರಿಗೆ ‘ಸುವರ್ಣ ಮಹೋತ್ಸವ’ ಪ್ರಶಸ್ತಿ ಘೋಷಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ, ‘69ನೇ ರಾಜ್ಯೋತ್ಸವ ಅಂಗವಾಗಿ 69 ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ₹ 5 ಲಕ್ಷ ನಗದು, 25 ಗ್ರಾಂ ಚಿನ್ನದ ಪದಕ ಹಾಗೂ ಫಲನ ಪ್ರದಾನ ಮಾಡಲಾಗುವುದು. ‘ಸುವರ್ಣ ಮಹೋತ್ಸವ’ ಪ್ರಶಸ್ತಿ ಪುರಸ್ಕೃತರಿಗೆ ಫಲಕದ ಜೊತೆ ₹ 50 ಸಾವಿರ ನಗದು ನೀಡಲಾಗುವುದು’ ಎಂದರು.

‘ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ 1,575 ಭೌತಿಕ ಅರ್ಜಿಗಳು ಬಂದಿದ್ದವು. ಅಲ್ಲದೆ, ಸೇವಾ ಸಿಂಧು ಪೋರ್ಟಲ್ ಮೂಲಕ 1,309 ಜನರಿಗಾಗಿ 7,438 ನಾಮ ನಿರ್ದೇಶನಗಳು ಸಲ್ಲಿಕೆ ಆಗಿದ್ದವು. ಆಯ್ಕೆ ಸಮಿತಿಯು ಅವುಗಳನ್ನೆಲ್ಲ ಕೂಲಂಕಷವಾಗಿ ಪರಿಶೀಲಿಸಿ ಮತ್ತು ಅರ್ಜಿ ಹಾಕದ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸಿರುವ 20ಕ್ಕೂ ಹೆಚ್ಚು ಸಾಧಕರನ್ನೂ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರತಿ ಜಿಲ್ಲೆಗೂ ಪ್ರಾತಿನಿಧ್ಯ ನೀಡಲಾಗಿದೆ. ಸಾಮಾಜಿಕ ನ್ಯಾಯವನ್ನೂ ಕಾಪಾಡಿಕೊಳ್ಳಲಾಗಿದೆ’ ಎಂದರು.

‘ರಾಜ್ಯೋತ್ಸವ ಪ್ರಶಸ್ತಿ ಮತ್ತು ಸುವರ್ಣ ಮಹೋತ್ಸವ ವಿಶೇಷ ಪ್ರಶಸ್ತಿ ಸೇರಿ ಒಟ್ಟು 169 ಪ್ರಶಸ್ತಿಗಳನ್ನು ರಾಜ್ಯೋತ್ಸವ ದಿನವಾದ ನ. 1ರಂದು ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ನಲ್ಲಿ ಪ್ರದಾನ ಮಾಡಲಾಗುವುದು’ ಎಂದೂ ಸಚಿವರು ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿ– 2024 ಪುರಸ್ಕೃತರು

ಜಾನಪದ ಕ್ಷೇತ್ರ: ಇಮಾಮಸಾಬ ಎಂ. ವಲ್ಲೆಪನವರ (ಧಾರವಾಡ) ಅಶ್ವ ರಾಮಣ್ಣ (ಬಳ್ಳಾರಿ) ಕುಮಾರಯ್ಯ (ಹಾಸನ) ವೀರಭದ್ರಯ್ಯ (ಚಿಕ್ಕಬಳ್ಳಾಪುರ) ನರಸಿಂಹಲು–ಅಂಧ ಕಲಾವಿದ (ಬೀದರ್) ಬಸವರಾಜ ಸಂಗಪ್ಪ ಹಾರಿವಾಳ (ವಿಜಯಪುರ) ಎಸ್.ಜಿ. ಲಕ್ಷ್ಮೀದೇವಮ್ಮ (ಚಿಕ್ಕಮಗಳೂರು) ಪಿಚ್ಚಳ್ಳಿ ಶ್ರೀನಿವಾಸ (ಕೋಲಾರ) ಲೋಕಯ್ಯ ಶೇರ–ಭೂತಾರಾಧನೆ (ದಕ್ಷಿಣಕನ್ನಡ)

ಚಲನಚಿತ್ರ–ಕಿರುತೆರೆ: ಹೇಮಾ ಚೌದರಿ (ಬೆಂಗಳೂರು ನಗರ) ಎಂ.ಎಸ್. ನರಸಿಂಹಮೂರ್ತಿ (ಬೆಂಗಳೂರು ನಗರ) ಸಂಗೀತ: ಪಿ. ರಾಜಗೋಪಾಲ (ಮಂಡ್ಯ) ಎ.ಎನ್. ಸದಾಶಿವಪ್ಪ (ರಾಯಚೂರು)

ನೃತ್ಯ: ವಿದುಷಿ ಲಲಿತಾ ರಾವ್ (ಮೈಸೂರು) ಆಡಳಿತ: ಎಸ್.ವಿ. ರಂಗನಾಥ್ ನಿವೃತ್ತ ಐಎಎಸ್ ಅಧಿಕಾರಿ (ಬೆಂಗಳೂರು ನಗರ) ವೈದ್ಯಕೀಯ: ಡಾ. ಜಿ.ಬಿ. ಬಿಡಿನಹಾಳ (ಗದಗ) ಡಾ. ಮೈಸೂರು ಸತ್ಯನಾರಾಯಣ (ಮೈಸೂರು) ಡಾ. ಲಕ್ಷ್ಮಣ್ ಹನುಮಪ್ಪ ಬಿದರಿ (ವಿಜಯಪುರ)

ಸಮಾಜಸೇವೆ: ಜೆ.ಎಂ. ವೀರಸಂಗಯ್ಯ (ವಿಜಯನಗರ) ಹೀರಾಚಂದ್ ವಾಗ್ಮಾರೆ (ಬೀದರ್) ಮಲ್ಲಮ್ಮ ಸೂಲಗಿತ್ತಿ (ರಾಯಚೂರು) ದಿಲೀಪ್ ಕುಮಾರ್ (ಚಿತ್ರದುರ್ಗ)

ಸಂಕೀರ್ಣ: ಹುಲಿಕಲ್ ನಟರಾಜ (ತುಮಕೂರು) ಡಾ.ಎಚ್.ಆರ್. ಸ್ವಾಮಿ (ಚಿತ್ರದುರ್ಗ) ಅ.ನ. ಪ್ರಹ್ಲಾದ ರಾವ್ (ಕೋಲಾರ) ಕೆ. ಅಜಿತ್ ಕುಮಾರ್ ರೈ (ಬೆಂಗಳೂರು ನಗರ) ಇರ್ಫಾನ್ ರಜಾಕ್ –ವಾಸ್ತುಶಿಲ್ಪ (ಬೆಂಗಳೂರು ನಗರ) ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ (ಹಾವೇರಿ) ಹೊರದೇಶ-ಹೊರನಾಡು: ಕನ್ಹಯ್ಯ ನಾಯ್ಡು ಡಾ. ತುಂಬೆ ಮೊಹಿಯುದ್ದೀನ್ (ತುಂಬೆ ಗ್ರೂಪ್ಸ್ ಯುಎಇ) ಚಂದ್ರಶೇಖರ ನಾಯಕ್ (ಅಮೆರಿಕ)

ಪರಿಸರ: ಆಲ್ಮಿತ್ರಾ ಪಟೇಲ್ (ಬೆಂಗಳೂರು ನಗರ) ಕೃಷಿ: ಶಿವನಾಪುರ ರಮೇಶ್ (ಬೆಂಗಳೂರು ಗ್ರಾಮಾಂತರ) ಪುಟ್ಟೀರಮ್ಮ;ಚಾಮರಾಜನಗರ

ಮಾಧ್ಯಮ: ಎನ್.ಎಸ್. ಶಂಕರ್ (ದಾವಣಗೆರೆ) ಸನತ್ಕುಮಾರ್ ಬೆಳಗಲಿ (ಬಾಗಲಕೋಟೆ) ಎ.ಜಿ. ಕಾರಟಗಿ (ಅಮರ ಗುಂಡಪ್ಪ ಕಾರಟಗಿ) (ಕೊಪ್ಪಳ) ರಾಮಕೃಷ್ಣ ಬಡಕೇಶಿ (ಕಲಬುರಗಿ)

ವಿಜ್ಞಾನ–ತಂತ್ರಜ್ಞಾನ: ಟಿ.ವಿ. ರಾಮಚಂದ್ರ (ಬೆಂಗಳೂರು ನಗರ) ಸುಬ್ಬಯ್ಯ ಅರುಣನ್ (ಬೆಂಗಳೂರು ನಗರ) ಸಹಕಾರ: ವಿರೂಪಾಕ್ಷಪ್ಪ ನೇಕಾರ (ಬಳ್ಳಾರಿ)

ಯಕ್ಷಗಾನ: ಕೇಶವ್ ಹೆಗಡೆ (ಉತ್ತರಕನ್ನಡ) ಸೀತಾರಾಮ ತೋಳ್ಪಾಡಿ (ದಕ್ಷಿಣ ಕನ್ನಡ) ಬಯಲಾಟ: ಸಿದ್ದಪ್ಪ ಕರಿಯಪ್ಪ ಕುರಿ– ಅಂಧ ಕಲಾವಿದ (ಬಾಗಲಕೋಟೆ) ನಾರಾಯಣಪ್ಪ ಶಿಳ್ಳೇಕ್ಯಾತ (ವಿಜಯಪುರ)

ರಂಗಭೂಮಿ: ಸರಸ್ವತಿ ಜುಲೈಕ ಬೇಗಂ (ಯಾದಗಿರಿ) ಓಬಳೇಶ್ ಎಚ್.ಬಿ (ಚಿತ್ರದುರ್ಗ) ಭಾಗ್ಯಶ್ರೀ ರವಿ (ಕೋಲಾರ) ಡಿ.ರಾಮು (ಮೈಸೂರು) ಜನಾರ್ದನ್ ಎಚ್. –ಜನ್ನಿ (ಮೈಸೂರು) ಹನುಮಾನದಾಸ ವ. ಪವಾರ–ಢಗಳ ಚಂದ (ಬಾಗಲಕೋಟೆ)

ಸಾಹಿತ್ಯ: ಬಿ.ಟಿ. ಲಲಿತಾ ನಾಯಕ್ (ಚಿಕ್ಕಮಗಳೂರು) ಅಲ್ಲಮಪ್ರಭು ಬೆಟ್ಟದೂರು (ಕೊಪ್ಪಳ) ಎಂ. ವೀರಪ್ಪ ಮೊಯಿಲಿ (ಉಡುಪಿ) ಹನುಮಂತರಾವ್ ದೊಡ್ಡಮನಿ (ಕಲಬುರಗಿ)ಬಾಳಾಸಾಹೇಬ್ ಲೋಕಾಪುರ (ಬೆಳಗಾವಿ) ಬೈರಮಂಗಲ ರಾಮೇಗೌಡ (ರಾಮನಗರ) ಪ್ರಶಾಂತ್ ಮಾಡ್ತಾ (ದಕ್ಷಿಣಕನ್ನಡ)

ಶಿಕ್ಷಣ: ವಿ. ಕಮಲಮ್ಮ (ಬೆಂಗಳೂರು ನಗರ) ಪ್ರೊ. ರಾಜೇಂದ್ರ ಶೆಟ್ಟಿ (ದಕ್ಷಿಣಕನ್ನಡ) ಪದ್ಮಾಶೇಖರ್ (ಕೊಡಗು)

ಕ್ರೀಡೆ: ಜೂಡ್ ಫೆಲಿಕ್ಸ್ ಸೆಬಾಸ್ಟೀಯನ್(ಹಾಕಿ) (ಬೆಂಗಳೂರು ನಗರ) ಗೌತಮ್ ವರ್ಮ (ರಾಮನಗರ) ಆರ್. ಉಮಾದೇವಿ (ಬಿಲಿಯಡ್ಸ್) (ಬೆಂಗಳೂರು ನಗರ)

ನ್ಯಾಯಾಂಗ: ಬಾಲನ್ (ಕೋಲಾರ) ಶಿಲ್ಪಕಲೆ: ಬಸವರಾಜ್ ಬಡಿಗೇರ (ರಥ ಶಿಲ್ಪಿ) (ಬೆಂಗಳೂರು ನಗರ) ಅರುಣ್ ಯೋಗಿರಾಜ್ (ಮೈಸೂರು)

ಚಿತ್ರಕಲೆ: ಪ್ರಭು ಹರಸೂರು (ತುಮಕೂರು) ಕರಕುಶಲ: ಚಂದ್ರಶೇಖರ ಸಿರಿವಂತೆ (ಹಸೆಚಿತ್ತಾರ) (ಶಿವಮೊಗ್ಗ)

ಕರ್ನಾಟಕ ಸಂಭ್ರಮ 2024: ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರು

ಪುರುಷರು

ಜಾನಪದ: ಸಿ.ವಿ.ವೀರಣ್ಣ, ತುಮಕೂರು, ಪ್ರೊ.ಹಿ.ಚಿ.ಬೋರಲಿಂಗಯ್ಯ–ಬೆಂಗಳೂರು ನಗರ, ತಂಬೂರಿ ಉಮಾನಾಯ್ಕ–ದಾವಣಗೆರೆ, ಕೆಂಚಯ್ಯ–ಮೈಸೂರು, ಗೋಂದಳಿ ರಾಮಪ್ಪ–ವಿಜಯನಗರ, ಸುರೇಶ್ ಕಾತರಪ್ಪ ಲಮಾಣಿ–ಗದಗ

ವೈದ್ಯಕೀಯ: ಡಾ. ಚಂದ್ರಪ್ಪ–ಕೊಪ್ಪಳ, ಡಾ. ಅಲೆಕ್ಸ್ ಥಾಮಸ್–ಬೆಂಗಳೂರು ನಗರ, ಡಾ.ಎಚ್.ಎಸ್.ಕೃಷ್ಣಪ್ಪ–ಶಿವಮೊಗ್ಗ, ಡಾ. ಶಿವಲಿಂಗಯ್ಯ–ರಾಮನಗರ, ಡಾ. ಎಸ್.ಎಸ್.ಗುಬ್ಬಿ–ಯಾದಗಿರಿ.

ಮಾಧ್ಯಮ: ವಿಶ್ವನಾಥ ಸುವರ್ಣ–ದಕ್ಷಿಣ ಕನ್ನಡ, ಲಕ್ಷ್ಮಿ ನರಸಪ್ಪ–ತುಮಕೂರು, ರುದ್ರಪ್ಪ ಅಸಂಗಿ–ವಿಜಯಪುರ, ಎಂ.ಸಿದ್ದರಾಜು–ಬೆಂಗಳೂರು, ಮದನಗೌಡ–ಹಾಸನ, ಮಲ್ಲಿಕಾರ್ಜುನ ಹೆಗ್ಗಳಗಿ–ಬಾಗಲಕೋಟೆ, ಮಂಜುನಾಥ ಅದ್ದೆ– ಬೆಂಗಳೂರು ಗ್ರಾಮಾಂತರ

ಪರಿಸರ: ಎಸ್.ಎಂ.ಚಲವಾದಿ– ಬೆಳಗಾವಿ, ಎಚ್.ಆರ್. ಜಯರಾಮ್– ರಾಮನಗರ

ಯಕ್ಷಗಾನ: ಪೇತ್ರಿ ಮಂಜುನಾಥ ಪ್ರಭು, ಉಡುಪಿ

ರಂಗಭೂಮಿ: ಲಕ್ಷ್ಮಯ್ಯ–ಮಂಡ್ಯ, ರಾಜು ಮಳವಳ್ಳಿ–ಮಂಡ್ಯ, ಎಂ.ಪಿ.ರಾಜಣ್ಣ–ಚಾಮರಾಜನಗರ

ಶಿಲ್ಪಕಲೆ: ಟಿ. ಸೋಮೇಶ್– ಚಿತ್ರದುರ್ಗ

ಚಿತ್ರಕಲೆ: ಫಜ್ಲು ರೆಹಮಾನ್ ಖಾನ್– ಮೈಸೂರು, ಶ್ರೀಕಾಂತ ಬಿರಾದಾರ–ಬೀದರ್

ಛಾಯಾಚಿತ್ರ: ಶ್ರೀವತ್ಸ ಶಾಂಡಿಲ್ಯ– ಉತ್ತರ ಕನ್ನಡ,

ಸಂಗೀತ: ಆಮಯ್ಯ ಲಿಂಗಯ್ಯ ಮಠ–ಯಾದಗಿರಿ, ನಿರ್ಮಲಪ್ಪ ಭಜಂತ್ರಿ –ವಿಜಯಪುರ

ಸಂಕೀರ್ಣ: ಆರ್.ಜಿ.ಹಳ್ಳಿ ನಾಗರಾಜ್–ಬೆಂಗಳೂರು, ಆರ್. ವೆಂಕಟರಮಣಪ್ಪ–ಕೋಲಾರ, ಬಾಬು ಕಿಲಾರ್– , ದ್ವಾರಕನಾಥ್, ವಿದ್ಯಾವರ್ಧಕ ಸಂಘ ಧಾರವಾಡ

ಸಮಾಜ ಸೇವೆ: ಮಡ್ಡಿಕೆರೆ ಗೋಪಾಲ–ಚಿಕ್ಕಮಗಳೂರು, ದಾಸೋಹ ರತ್ನ ಚಕ್ರವರ್ತಿ ಅನ್ನದಾನೇಶ್ವರ ಅಪ್ಪಾಜಿ, ಬಸವಗೋಪಾಲ ನೀಲಮಾಣಿಕ ಮಠ, ಬಂಡಿಗಣಿಮಠ–ಬಾಗಲಕೋಟೆ, ಎಸ್.ಆರ್. ಜೋಳದ್–ಹಾವೇರಿ

ಸಾಹಿತ್ಯ: ಎಸ್. ನೀಲಕಂಠ ಮ. ಕಾಳಗಿ–ಬಾಗಲಕೋಟೆ, ಸಿದ್ದಪ್ಪ ತಿಮ್ಮಪ್ಪ ಮಾದರ–ಬಾಗಲಕೋಟೆ, ಜಿ.ಶರಣಪ್ಪ–ಚಿತ್ರದುರ್ಗ, ಅಮರೇಶ ನುಗಡೋಣಿ–ರಾಯಚೂರು, ಬಿ.ವಿ. ಶಿರೂರು–ಕೊಪ್ಪಳ

ಶಿಕ್ಷಣ: ಟಿ.ಎಂ. ಚಂದ್ರಶೇಖರಯ್ಯ – ಬಳ್ಳಾರಿ,

ಕ್ರೀಡೆ: ಜಿಮ್ಮಿ ಅಣ್ಣಯ್ಯ–ಕೊಡಗು, ಎಂ.ಗಿರೀಶ್ ಕುಮಾರ್– ಬೆಂಗಳೂರು ನಗರ

ಕೃಷಿ: ನಾರಾಯಣಸ್ವಾಮಿ ಜಿ.ಎನ್– ಚಿಕ್ಕಬಳ್ಳಾಪುರ, ಕೇದಾರಲಿಂಗಯ್ಯ ಹಿರೇಮಠ್– ಕಲಬುರಗಿ

ಕಿರುತೆರೆ: ಸಿಹಿಕಹಿ ಚಂದ್ರು– ಬೆಂಗಳೂರು ನಗರ, ದಯಾಶಂಕರ್ ಅಡಪ – ಹೊರನಾಡು, ಸದಾಶಿವ ಶೆಟ್ಟಿ ಕನ್ಯಾನ– ಹೊರನಾಡು

ಮಹಿಳೆಯರು

ಜ್ಞಾನಪದ: ಜಯಲಕ್ಷ್ಮಮ್ಮ– ರಾಮನಗರ, ಲಕ್ಷ್ಮಮ್ಮ– ತುಮಕೂರು, ಬುರ್ರಕಥಾ ಅಯ್ಯಮ್ಮ ಎಡವಲ್– ರಾಯಚೂರು, ಲಕ್ಷ್ಮೀಬಾಯಿ ಹರಿಜನ– ಧಾರವಾಡ, ಭಾಗ್ಯಮ್ಮ– ಚಿಕ್ಕಮಗಳೂರು, ಚಂದ್ರಕಲಾ ಹರಕುಡೆ– ಬೀದರ್.

ವೈದ್ಯಕೀಯ: ಡಾ. ಅಕ್ಕಮಹಾದೇವಿ– ಧಾರವಾಡ.

ಮಾಧ್ಯಮ: ಭಾರತಿ ಹೆಗಡೆ– ಉತ್ತರ ಕನ್ನಡ, ಕೆ. ಶಾಂತಕುಮಾರಿ– ವಿಜಯನಗರ.

ರಂಗಭೂಮಿ: ಮಾಲತಿಶ್ರೀ– ಮೈಸೂರು, ಸುನಂದಾ ಎಸ್. ಕಂದಗಲ್ಲ– ಬಾಗಲಕೋಟೆ, ಶಾಂತಬಾಯಿ ಜೋಷಿ– ಧಾರವಾಡ, ಕಲಾವತಿ– ಬೆಂಗಳೂರು, ರಾಧಿಕ ಬೇವಿನಕಟ್ಟೆ– ಹಾವೇರಿ, ಸಾವಿತ್ರಿ ರಿತ್ತಿ– ದಾವಣಗೆರೆ.

ಚಿತ್ರಕಲೆ: ರೇಣುಕಾ ಮಾರ್ಕಂಡೆ– ಧಾರವಾಡ, ಸುರೇಖಾ– ಬೆಂಗಳೂರು, ರುಕ್ಮಿಣಿ ಬಾಯಿ– ಕೊಪ್ಪಳ.

ಸಂಗೀತ: ಲತಾ ಜಹಂಗೀರದಾರ್– ಧಾರವಾಡ.

ಸಮಾಜಸೇವೆ: ದು. ಸರಸ್ವತಿ– ಬೆಂಗಳೂರು ನಗರ, ರುಕ್ಮಿಣಿ ಕೃಷ್ಣಸ್ವಾಮಿ (ಸ್ಪಾಸ್ಟಿಕ್ ಸೊಸೈಟಿ)– ಬೆಂಗಳೂರು ನಗರ, ಲೂಸಿ ಸಲ್ದಾನ– ಧಾರವಾಡ, ಚನ್ನಬಸಮ್ಮ ಸೂಲಗಿತ್ತಿ– ಯಾದಗಿರಿ, ರಾವಣಮ್ಮ– ಬೆಂಗಳೂರು ನಗರ, ರೀಟಾ ನರ್ಹೋನಾ– ದಕ್ಷಿಣ ಕನ್ನಡ, ಶಂಕ್ರಮ್ಮ – ರಾಯಚೂರು, ಪ್ರೇಮಲತಾ ಕೃಷ್ಣಸ್ವಾಮಿ– ಚಾಮರಾಜನಗರ, ಎಂ. ಪದ್ಮಾ– ಕೋಲಾರ.

ಸಾಹಿತ್ಯ: ರಾಧಾ ಕುಲಕರ್ಣಿ– ಗದಗ, ಡಾ. ಎನ್. ಗಾಯತ್ರಿ– ಬೆಂಗಳೂರು, ಲಲಿತಾ ಹೊಸಪ್ಯಾಟಿ ಹುನಗುಂದ– ಬಾಗಲಕೋಟೆ, ಸಂಕಮ್ಮ ಸಂಕಣ್ಣನವರ– ಹಾವೇರಿ, ಡಾ. ಬಾನು ಮುಷ್ತಾಕ್– ಹಾಸನ.

ಶಿಕ್ಷಣ: ಮುಕ್ತ– ಬೆಂಗಳೂರು ನಗರ, ಭಾಗ್ಯಲಕ್ಷ್ಮಿ– ವಿಜಯನಗರ.

ಕ್ರೀಡೆ: ನಂದಿನಿ ಬಸಪ್ಪ (ಬಾಸ್ಕೆಟ್ಬಾಲ್)– ಕೊಡಗು, ಸುಶ್ಮಿತ ಪವಾರ್ ಒ (ಕಬ್ಬಡಿ)– ಬೆಂಗಳೂರು ನಗರ, ನೊಮಿಟೋ ಕಾಮದಾರ್– ಶಿವಮೊಗ್ಗ, ನಂದಿನಿ ಎನ್.ಎಸ್ (ಈಜು)– ಬೆಂಗಳೂರು ನಗರ.

ಕೃಷಿ: ನಾಗಮ್ಮಜ್ಜಿ– ವಿಜಯನಗರ, ಶಾಂಭವಿ– ಚಿತ್ರದುರ್ಗ.

ಬಯಲಾಟ/ ಯಕ್ಷಗಾನ: ಯಮುನಾಬಾಯಿ ಕಲಾಚಂದ್ರ– ಬೆಳಗಾವಿ, ಹುಲೆಗೆಮ್ಮ– ಬಳ್ಳಾರಿ.

ವಿಜ್ಞಾನ– ತಂತ್ರಜ್ಞಾನ: ಡಾ. ರತಿರಾವ್– ಮೈಸೂರು.

ಆಡಳಿತ: ಜೀಜಾ ಹರಿಸಿಂಗ್– ತುಮಕೂರು.

ನೃತ್ಯ: ಮಿನಲ್ ಪ್ರಭು– ಉಡುಪಿ.

ಹೊರನಾಡು: ಎಸ್.ಎ. ಲಲಿತಾ– ದೆಹಲಿ.

ಸಂಕೀರ್ಣ: ಮೀರಾ ಶಿವಲಿಂಗಯ್ಯ– ಮಂಡ್ಯ.

ಶಿಲ್ಪಕಲೆ: ಶಕುಂತಲ ಎಂ. ಬಡಿಗೇರಾ– ಕಲಬುರಗಿ.

ಸ್ವಾತಂತ್ರ್ಯ ಹೋರಾಟಗಾರರು: ಮಲ್ಲಮ್ಮ ಯಳವಾರ– ವಿಜಯಪುರ.
.ಕೊಪ್ಪಳ: ನೀರು ಉಳಿಸಿದ ಕನ್ನಯ್ಯ ನಾಯ್ಡುಗೆ ರಾಜ್ಯೋತ್ಸವ ಪ್ರಶಸ್ತಿ.
ಸುವರ್ಣ ಮಹೋತ್ಸವ ಪ್ರಶಸ್ತಿಗಳ ಪಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.