ಬೆಂಗಳೂರು: ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (ಕೆಜಿಎ) ಅನ್ನು ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆ-2005ರ ಅಡಿ ಸಾರ್ವಜನಿಕ ಪ್ರಾಧಿಕಾರವೆಂದು ಘೋಷಿಸಿ ಕರ್ನಾಟಕ ಮಾಹಿತಿ ಆಯೋಗ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಆಯೋಗದ ಆದೇಶ ಪ್ರಶ್ನಿಸಿ ಕೆಜಿಎ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎನ್.ಎಸ್. ಸಂಜಯ ಗೌಡ ಅವರಿದ್ದ ಏಕಸದಸ್ಯ ಪೀಠ, ’ಸರ್ಕಾರಿ ಜಮೀನು ಗುತ್ತಿಗೆ ಪಡೆದ ಮತ್ತು ಸಬ್ಸಿಡಿ ದರದಲ್ಲಿ ಬಾಡಿಗೆ ಪಾವತಿಸುತ್ತಿರುವ ಕಾರಣ ಕೆಜಿಎ ಸಾರ್ವಜನಿಕ ಪ್ರಾಧಿಕಾರ. ಆದ್ದರಿಂದ, ಕೆಜಿಎ ಆರ್ಟಿಐ ಕಾಯ್ದೆಯ ವ್ಯಾಪ್ತಿಗೆ ಒಳಪಡಲಿದೆ. ಈ ಕುರಿತು ಮಾಹಿತಿ ಆಯೋಗ ನೀಡಿರುವ ಆದೇಶ ಸೂಕ್ತವಾಗಿದೆ‘ ಎಂದು ಸ್ಪಷ್ಟಪಡಿಸಿದೆ.

‘ಮೈಸೂರು ಟರ್ಫ್ ಕ್ಲಬ್ ಹಾಗೂ ಇತರೆ ಕ್ಲಬ್ಗಳ ಪ್ರಕರಣದಲ್ಲಿ ಹೇಳಿರುವಂತೆ ಕೆಜಿಎ ಕೂಡಾ 124 ಎಕರೆ ಸರ್ಕಾರಿ ಜಮೀನನ್ನು 2010ರಿಂದ 30 ವರ್ಷ ಕಾಲ ಗುತ್ತಿಗೆ ಪಡೆದಿದೆ. ತನ್ನ ವಾರ್ಷಿಕ ನಿವ್ವಳ ಆದಾಯದಲ್ಲಿ ಅತ್ಯಂತ ಕಡಿಮೆ ಪ್ರಮಾಣ ಅಂದರೆ ಕೇವಲ ಶೇ 2ರಷ್ಟು ಪ್ರಮಾಣವನ್ನು (ಸಬ್ಸಿಡಿ ದರ) ಬಾಡಿಗೆ ಪಾವತಿಸುತ್ತಿದ’ ಎಂಬ ಅಂಶವನ್ನು ನ್ಯಾಯಪೀಠ ಆದೇಶದಲ್ಲಿ ಕಾಣಿಸಿದೆ.

ಪ್ರಕರಣವೇನು?

ಮಾಹಿತಿ ಹಕ್ಕು ಕಾಯ್ದೆಯಡಿ ಕೆಲವೊಂದು ಮಾಹಿತಿ ಕೋರಿ ವಕೀಲ ಎಸ್. ಉಮಾಪತಿ ಕೆಜಿಎಗೆ 2012ರ ಆಗಸ್ಟ್ 30ರಂದು ಅರ್ಜಿ ಸಲ್ಲಿಸಿದ್ದರು. ಆದರೆ, ‘ತಾನು ಮಾಹಿತಿ ಹಕ್ಕು ಕಾಯ್ದೆಗೆ ಒಳಪಡುವುದಿಲ್ಲ’ ಎಂದು ಉತ್ತರಿಸಿದ್ದ ಕೆಜಿಎ, ಮಾಹಿತಿ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಉಮಾಪತಿ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಆಯೋಗವು, ಕೆಜಿಎ ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿ 2014ರ ಅಕ್ಟೋಬರ್ 14ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸುವಂತೆ ಕೋರಿ ಕೆಜಿಎ ಹೈಕೋರ್ಟ್ ಮೆಟ್ಟಿಲೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.