ಬೆಳಗಾವಿ: ‘ಒಮ್ಮೊಮ್ಮೆ ಗಾಡಿಗಳು ಹೆಚ್ಚು ವೇಗವಾಗಿ ಓಡುತ್ತವೆ. ಆಗ ಅಪಘಾತವಾಗುತ್ತದೆ. ಎಲ್ಲ ಪಕ್ಷಗಳಲ್ಲೂ ಇದು ಸಾಮಾನ್ಯ. ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಏನೋ ಹೇಳಲು ಹೋಗಿ ಯಡವಟ್ಟು ಮಾಡಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಬರಗಾಲ ಬರಲಿ ಎಂದು ಯಾರೂ ಬಯಸುವುದಿಲ್ಲ. ಬರಗಾಲದಿಂದ ರೈತರು ಮಾತ್ರವಲ್ಲ; ಗ್ರಾಹಕರು, ವ್ಯಾಪಾರಿಗಳೂ ಸಂಕಷ್ಟ ಎದುರಿಸುತ್ತಾರೆ. ದೇಶದ ಜಿಡಿಪಿ ಮೇಲೂ ದೊಡ್ಡ ಪರಿಣಾಮ ಬೀರುತ್ತದೆ. ಶಿವಾನಂದ ಪಾಟೀಲ ಹಿರಿಯರು. ಅವರಿಗೆ ನಾನೇನೂ ಹೇಳುವುದಿಲ್ಲ’ ಎಂದರು
.ಬರ ಬೀಳಲಿ ಎಂಬುದೇ ರೈತರ ಬಯಕೆ: ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ರೈತರ ಕಿಡಿ.ರೈತರ ಬಗ್ಗೆ ಹೇಳಿಕೆ: ಸಚಿವ ಶಿವಾನಂದ ಪಾಟೀಲ ವಜಾಕ್ಕೆ ಆರ್.ಅಶೋಕ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.