ಮೈಸೂರು: ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಇಲ್ಲಿನ ಜೆ.ಕೆ. ಮೈದಾನದಲ್ಲಿ ಭಾನುವಾರ ನಡೆದ ‘ಮುದ್ದುಪ್ರಾಣಿಗಳ ಪ್ರದರ್ಶನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾವು ಸಾಕು ನಾಯಿ ‘ಗೋಪಿ’ಯೊಂದಿಗೆ ಪಾಲ್ಗೊಂಡು ಗಮನಸೆಳೆದರು.

‘ಗೋಪಿ’ಯ ದಿನಚರಿಯನ್ನು ಪರಿಚಯಿಸಿ ಅದನ್ನು ಮುದ್ದಾಡಿದರು. ಅದು ಕೂಡ ಸುಧಾ ಅವರಿಗೆ ಮುತ್ತು ನೀಡಿತು.

‘ಮುದ್ದು ಪ್ರಾಣಿಗಳು ಮಕ್ಕಳಿದ್ದಂತೆ. ಅವುಗಳನ್ನು ನಾವು ಪ್ರೀತಿಯಿಂದ ನೋಡಿಕೊಳ್ಳಬೇಕು. ಇಂತಹ ಪ್ರದರ್ಶನಗಳಿಂದ ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ಪ್ರೀತಿ ಹೆಚ್ಚಾಗುತ್ತದೆ; ಬೀದಿ ನಾಯಿಗಳಿಗೆ ಆಹಾರ ಕೊಡಬೇಕು ಎಂಬ ಮನೋಭಾವ ಬೆಳೆಯುತ್ತದೆ’ ಎಂದರು.

ಈ ವೇಳೆ, ರೈತ ದಸರಾ ಉಪಸಮಿತಿಯಿಂದ ‘ಗೋಪಿ’ಗೂ ಗೌರವ ಸಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.