ಮೈಸೂರು: ‘ಬಿಪಿಎಲ್ ಪಡಿತರ ಚೀಟಿಗೆ ಯಾರು ಅರ್ಹರಲ್ಲವೋ ಅಂಥವರನ್ನು ಎಪಿಎಲ್ಗೆ ಬದಲಾಯಿಸಲಾಗುತ್ತಿದೆಯೇ ಹೊರತು ಯಾವುದೇ ಕಾರಣಕ್ಕೂ ರದ್ದುಪಡಿಸುವುದಿಲ್ಲ. ಈ ವಿಷಯದಲ್ಲಿ ಬಿಜೆಪಿಯವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿರುಗೇಟು ನೀಡಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ನಾವು ಕೆಲಸ ಮಾಡಿದ್ದರೆ 12 ಲಕ್ಷ ಮಂದಿ ಬಿಪಿಎಲ್ ಪಡಿತರ ಚೀಟಿಗಳನ್ನು ಕಳೆದುಕೊಳ್ಳುತ್ತಿದ್ದರು. ಆದರೆ, ನಾವು ಕೇಂದ್ರದ ಆದೇಶ ಧಿಕ್ಕರಿಸಿ ಲಕ್ಷಾಂತರ ಮಂದಿಯ ಹಿತ ಕಾಪಾಡಿದ್ದೇವೆ’ ಎಂದು ಹೇಳಿದರು.

‘ನಮ್ಮ ಸರ್ಕಾರ ಬಂದ ಮೇಲೆ, ರಾಜ್ಯದಲ್ಲಿ 70ಸಾವಿರ ಬಿಪಿಎಲ್ ಕಾರ್ಡ್ಗಳನ್ನು ಮಾತ್ರವೇ ಎಪಿಎಲ್ಗೆ ಬದಲಾಯಿಸಲಾಗಿದೆ. ಕೇಂದ್ರದ ಮಾನದಂಡಗಳ ಪ್ರಕಾರ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

ಕೇಂದ್ರವೇ ನೋಟಿಸ್ ನೀಡಿದೆ:

‘ಕೇಂದ್ರದ ಮಾನದಂಡದ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಶೇ 76 ಹಾಗೂ ನಗರದಲ್ಲಾದರೆ ಶೇ 49ರಷ್ಟು ಮಂದಿಗೆ ಮಾತ್ರವೇ ಬಿಪಿಎಲ್ ಚೀಟಿ ನೀಡಲು ಅವಕಾಶವಿದೆ. ಅದರಂತೆ, ರಾಜ್ಯದಲ್ಲಿ 3.58 ಕೋಟಿ ಫಲಾನುಭವಿಗಳನ್ನು ಗುರುತಿಸಿ 1.03 ಕೋಟಿ ಬಿಪಿಎಲ್ ಕಾರ್ಡ್ಗಳನ್ನು (ಮಾನದಂಡದ ಪ್ರಕಾರ) ಕೊಡಬೇಕಾಗಿದೆ. ನಾವು 1.16 ಕೋಟಿ ಬಿಪಿಎಲ್ ಕಾರ್ಡ್ ಕೊಟ್ಟಿದ್ದೇವೆ. ಹೆಚ್ಚುವರಿಯಾಗಿ ಏಕೆ ಕೊಟ್ಟಿದ್ದೀರಿ, ಅವರನ್ನು ಪಟ್ಟಿಯಿಂದ ತೆಗೆಯಿರಿ ಎಂದು ಕೇಂದ್ರ ಆಹಾರ ಇಲಾಖೆಯಿಂದ ಜುಲೈನಲ್ಲಿ ನೋಟಿಸ್ ಜಾರಿಯಾಗಿದೆ. ಕ್ರಮ ಕೈಗೊಳ್ಳದಿದ್ದರೆ ಸವಲತ್ತು ನಿಲ್ಲಿಸುವುದಾಗಿ ಬೆದರಿಕೆಯನ್ನೂ ಕೇಂದ್ರ ಹಾಕಿದೆ’ ಎಂದು ಮಾಹಿತಿ ನೀಡಿದರು.

‘ದೇಶದಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯ (ಪಿಡಿಎಸ್) ಡಿಜಿಟಲೀಕರಣಕ್ಕೆ ಚಾಲನೆ ನೀಡಲಾಗಿದ್ದು, 5.8 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯವೇ ತಿಳಿಸಿದೆ. ಹೀಗಿರುವಾಗ, ಕೇಂದ್ರ ಸರ್ಕಾರ ಹಾಗೂ ಬಿಜೆಪಿಯವರು ದ್ವಂದ್ವ ನೀತಿ ಅನುಸರಿಸುತ್ತಾ, ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗೆ ಮಾಡುವುದಕ್ಕೆ ನಾಚಿಕೆ ಆಗುವುದಿಲ್ಲವೇ?’ ಎಂದು ಕೇಳಿದರು.

‘ಜಿಲ್ಲೆಯಲ್ಲಿ ನಮ್ಮ ಸರ್ಕಾರ ಬಂದ ಮೇಲೆ 4,221 ಬಿಪಿಎಲ್ ಕಾರ್ಡ್ಗಳನ್ನು ಆಹಾರ ಭದ್ರತಾ ಕಾಯ್ದೆಯ ಮಾನದಂಡ ಆಧರಿಸಿ ಎಪಿಎಲ್ಗೆ ಬದಲಾಯಿಸಿದ್ದೇವೆ. ಅದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ 9,881 ಕಾರ್ಡ್ಗಳನ್ನು ಎಪಿಎಲ್ಗೆ ಬದಲಾಯಿಸಿದ್ದರು’ ಎಂದರು.

ಪ್ರತಾಪ ಹೇಳಿಕೆಗೆ ತಿರುಗೇಟು:

‘ಮಂತ್ರಾಲಯಕ್ಕೆ ಮುಸ್ಲಿಂ ಸಮುದಾಯವೇ ಭೂಮಿ ದಾನ ಮಾಡಿದೆಯೆಂಬ ಮುಖಂಡ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ ಸಿಂಹ ಅವರು ‘ಹಿಂದೂಗಳಿಗೆ ಭೂಮಿ ದಾನ ಮಾಡಲು ಭಾರತದಲ್ಲಿ ಭೂಮಿ ಎಲ್ಲಿಂದ ಬಂತು? ಮಹಮ್ಮದ್ ಘಜ್ನಿ, ಬಾಬರ್ ಎಲ್ಲರೂ ಇಲ್ಲಿಗೆ ಬಂದು ಭೂಮಿ ವಶಪಡಿಸಿಕೊಂಡಿದ್ದರು. ನಮ್ಮ ಭೂಮಿಯನ್ನು ಹೋರಾಟ ಮಾಡಿ ಉಳಿಸಿಕೊಂಡಿದ್ದೇವೆ’ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಟ್ಟಿದ ಮೂಲ ವಂಶಸ್ಥರು ಯಾರು ಎಂಬುದನ್ನು ಪ್ರತಾಪ ಹೇಳಲಿ’ ಎಂದು ಸವಾಲು ಹಾಕಿದರು.

‘ಭಾರತದ ಮುಸ್ಲಿಮರು ದೇಶದ ಮಣ್ಣಿನ ಮಕ್ಕಳು. ಅವರಿಗೂ ಎಲ್ಲರಷ್ಟೇ ಹಕ್ಕಿದೆ. ವಕ್ಫ್ ಆಸ್ತಿ ವಿಚಾರದಲ್ಲಿ ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಬಹಿರಂಗ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

‘ವಕ್ಫ್ ಆಸ್ತಿ ಕಾಪಾಡಲು ಕ್ರಮ ಕೈಗೊಳ್ಳುವಂತೆ ಬಿಜೆಪಿ ಸರ್ಕಾರ ಇದ್ದಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಜಿಲ್ಲೆಯಲ್ಲಿ 869 ಎಕರೆ ವಕ್ಫ್ ಆಸ್ತಿ ಇದೆ. ನಮ್ಮ ಜಮೀನು ಹೋಗಿದೆ ಎಂದು ಯಾರಾದರೂ ಹೇಳಿದ್ದಾರೆಯೇ? ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಪ್ರತಾಪ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್, ನಗರ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಹಾಗೂ ಮುಖಂಡ ಬಿ.ಎಂ. ರಾಮು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.