‘ಮೈತ್ರಿಕೂಟಕ್ಕೆ ಹೆಸರಿಡುವ ಕುರಿತು ವಿರೋಧ ಪಕ್ಷಗಳ ನಾಯಕರು ಸುದೀರ್ಘವಾಗಿ ಚರ್ಚೆ ನಡೆಸಿದರು. ಒಬ್ಬೊಬ್ಬರು ಒಂದೊಂದು ಹೆಸರು ಮುಂದಿಟ್ಟರು. ಸೀತಾರಾಂ ಯಚೂರಿ ‘ವೀ ಫಾರ್ ಡೆಮಾಕ್ರಸಿ’, ವೈಕೋ ಅವರು ‘ಇಂಡಿಯನ್ ಪೀಪಲ್ಸ್ ಅಲಯನ್ಸ್’ ಹೆಸರು ಸೂಚಿಸಿದರು. ಮಮತಾ ಬ್ಯಾನರ್ಜಿ ‘ಇಂಡಿಯಾ‘ ಹೆಸರು ಸೂಚಿಸಿದರು. ಎಂ.ಕೆ. ಸ್ಟಾಲಿನ್ ಮತ್ತು ರಾಹುಲ್ ಗಾಂಧಿ ಈ ಹೆಸರನ್ನು ಅನುಮೋದಿಸಿದರು‘ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇಂಡಿಯಾದಲ್ಲಿರುವ ‘ಡಿ’ ಪದದ ಅರ್ಥ ಏನಿರಬೇಕು? ಎಂಬ ಬಗ್ಗೆಯೂ ಚರ್ಚೆ ನಡೆಯಿತು. ‘ಡಿ’ ಎಂದರೆ ಡೆಮಾಕ್ರಸಿ ಎಂದು ಮೊದಲು ನಿರ್ಧರಿಸಲಾಗಿತ್ತು. ಚರ್ಚೆಯ ಬಳಿಕ ಡೆಮಾಕ್ರಟಿಕ್ ಬದಲು ಡೆವಲಪ್‌ಮೆಂಟಲ್ ಎಂದು ಅಂತಿಮಗೊಳಿಸಲಾಯಿತು ಎಂದೂ ಗೊತ್ತಾಗಿದೆ.
ಬಿಜೆಪಿ ನೇತೃತ್ವದ ಎನ್‌ಡಿಎಗೆ ‘ಇಂಡಿಯಾ’ದ ಸವಾಲು ಎದುರಿಸಲು ಸಾಧ್ಯವೇ‘? ಈ ಯುದ್ಧದಲ್ಲಿ ‘ಇಂಡಿಯಾ’ ಗೆಲ್ಲಲಿದೆ. ಬಿಜೆಪಿ ಸೋಲಲಿದೆ