ಬೆಂಗಳೂರು: ಜಾತಿ ನಿಂದನೆ ಹಾಗೂ ಲಂಚಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದ ಆರೋಪದ ಅಡಿ ಬಂಧಿತರಾಗಿರುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಧ್ವನಿ ಮಾದರಿಯನ್ನು ವಿಧಿ ವಿಜ್ಞಾನದ ಪ್ರಯೋಗಾಲಯದ (ಎಫ್ಎಸ್ಎಲ್) ತಜ್ಞರು ಸೋಮವಾರ ಸಂಗ್ರಹಿಸಿದರು.

ಪೊಲೀಸ್ ವಶದಲ್ಲಿರುವ ಮುನಿರತ್ನ ಅವರನ್ನು ಅಶೋಕನಗರ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರ ಮನವಿ ಮೇರೆಗೆ ಸೋಮವಾರ ಠಾಣೆಗೆ ಬಂದ ಇಬ್ಬರು ತಜ್ಞರು, ಶಾಸಕರ ಧ್ವನಿ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕೊಂಡೊಯ್ದರು.

‘ಶಾಸಕರ ವಿರುದ್ಧ ಜಾತಿ ನಿಂದನೆ ಆರೋಪದ ಅಡಿ ದೂರು ನೀಡಿರುವ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರ ಧ್ವನಿ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುವುದು. ಅಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಆಡಿಯೊದ ಮೂಲ ತುಣುಕು ಹಾಗೂ ಆಡಿಯೊ ರೆಕಾರ್ಡ್ ಮಾಡಿದ ಸಾಧನವನ್ನು ವಶಕ್ಕೆ ಪಡೆಯಲಾಗಿದೆ. ಆ ಸಾಧನವನ್ನೂ ತಜ್ಞರಿಗೆ ರವಾನೆ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಇಂದು ನ್ಯಾಯಾಲಯಕ್ಕೆ ಹಾಜರು: ‘ಶಾಸಕರು–ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯಕ್ಕೆ ಮುನಿರತ್ನ ಅವರನ್ನು ಭಾನುವಾರ ಮುಂಜಾನೆ ಹಾಜರು ಪಡಿಸಿದ್ದ ಪೊಲೀಸರು, ಎರಡು ದಿನ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸ್ ವಶದಲ್ಲಿರುವ ಅವರನ್ನು ಸೋಮವಾರವೂ ತೀವ್ರ ವಿಚಾರಣೆಗೆ ಒಳಪಡಿಸಿದರು.

‘ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲಾಗಿದೆ. ಯಾರದ್ದೋ ಮಾತು ಕೇಳಿ ನನ್ನ ವಿರುದ್ಧ ಗುತ್ತಿಗೆದಾರ ದೂರು ನೀಡಿದ್ದಾರೆಂದು ವಿಚಾರಣೆ ವೇಳೆ ಮುನಿರತ್ನ ಅವರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಆಡಿಯೊ ರೆಕಾರ್ಡ್ ಮಾಡಿದ್ದಾರೆ ಎನ್ನಲಾದ ಕಚೇರಿಯಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಆರೋಪಿಯನ್ನು ಮಂಗಳವಾರ ಬೆಳಿಗ್ಗೆ ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಮುನಿರತ್ನ ಅವರು ಕೆಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಟ್ಟಿಲ್ಲ. ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ ಎಂದಷ್ಟೇ ಹೇಳುತ್ತಿದ್ದಾರೆ. ಹೀಗಾಗಿ, ಹೆಚ್ಚಿನ ವಿಚಾರಣೆಗಾಗಿ ಮತ್ತೆ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುನಿರತ್ನ ಸೆರೆಗೆ ನೆರವಾದ ಫೋಟೊ ವಿಡಿಯೊ

ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ಪರಾರಿಯಾಗುತ್ತಿದ್ದ ಶಾಸಕ ಮುನಿರತ್ನ ಅವರು ನಂಗಲಿಯಲ್ಲಿದ್ದ ವೇಳೆ ಸ್ಥಳೀಯರೊಬ್ಬರು ಫೋಟೊ ಸೆರೆಹಿಡಿದು ರವಾನಿಸಿದ್ದರಿಂದಲೇ ಅವರನ್ನು ತ್ವರಿತವಾಗಿ ಬಂಧಿಸುವುದಕ್ಕೆ ನೆರವಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

‘ಶನಿವಾರ ಬೆಳಿಗ್ಗೆಯಿಂದಲೂ ಮುನಿರತ್ನ ಅವರಿಗಾಗಿ ಪೊಲೀಸರಿಗೆ ಹುಡುಕಾಟ ನಡೆಸಿದ್ದರು. ಆದರೂ ಅವರು ಸಿಕ್ಕಿರಲಿಲ್ಲ. ಕೋಲಾರದ ಅಂಗಡಿಯ ಬಳಿ ಮುನಿರತ್ನ ತಮ್ಮ ಬೆಂಬಲಿಗರ ಜತೆಗೆ ಟೀ ಕುಡಿಯುತ್ತಿದ್ದರು. ಅಲ್ಲಿದ್ದ ವ್ಯಕ್ತಿಯೊಬ್ಬರು ಫೋಟೊ ತೆಗೆದು ಬೆಂಗಳೂರು ಪೊಲೀಸರಿಗೆ ಕಳುಹಿಸಿದ್ದರು. ಅವರು ಆ ಫೋಟೊವನ್ನು ಕೋಲಾರ ಜಿಲ್ಲಾ ಪೊಲೀಸರಿಗೆ ಕಳುಹಿಸಿ ಬೆನ್ನುಹತ್ತುವಂತೆ ಸೂಚಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಇದಕ್ಕೂ ಮೊದಲು ಮುನಿರತ್ನ ವಿಡಿಯೊವೊಂದನ್ನು ರೆಕಾರ್ಡ್ ಮಾಡಿ ಟಿ.ವಿ. ಮಾಧ್ಯಮವೊಂದಕ್ಕೆ ಕಳುಹಿಸಿದ್ದರು. ವಿಡಿಯೊ ರೆಕಾರ್ಡ್ ಆಗಿದ್ದ ಸ್ಥಳ ಹಾಗೂ ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ ನಂಗಲಿಯಲ್ಲಿ ಮುನಿರತ್ನ ಇರುವುದು ಪತ್ತೆ ಆಗಿತ್ತು. ಅದನ್ನು ಆಧರಿಸಿ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಫೋಟೋ ಮತ್ತು ವಿಡಿಯೊ ಸಿಗದೇ ಇದ್ದರೆ ಮುನಿರತ್ನ ಚಿತ್ತೂರು ತಲುಪಿಬಿಡುತ್ತಿದ್ದರು. ಆನಂತರ ಅವರನ್ನು ಬಂಧಿಸುವುದು ಅಷ್ಟು ಸುಲಭವಿರುತ್ತಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಸರ್ಕಾರ ನಮ್ಮದೇ ಇದೆ...’

ಮುನಿರತ್ನ ವಿರುದ್ಧ ಪೊಲೀಸರಿಗೆ ದೂರು ನೀಡುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಹಾಗೂ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರ ಮಧ್ಯೆ ಮಾತುಕತೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೊವನ್ನು ಮುನಿರತ್ನ ಆಪ್ತರು ಬಿಡುಗಡೆ ಮಾಡಿದ್ದಾರೆ. ‘ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ಮುನಿರತ್ನ ವಿರುದ್ಧ ದೂರು ನೀಡಲಾಗಿದೆ’ ಎಂದೂ ಅವರು ಆರೋಪಿಸಿದ್ದಾರೆ.

ಆಡಿಯೊದಲ್ಲಿ ಏನಿದೆ?: ‘ಹೇ ಚೆಲುವರಾಜು ನಿನ್ನೆ ಕರೆ ಮಾಡಿದ್ದರೂ ತೆಗೆದುಕೊಂಡಿಲ್ಲ. ಯಾವುದೋ ಸಣ್ಣ ವಿಷಯಕ್ಕೆ ಹೋಗಿ ದೂರು ನೀಡಿದ್ದೀಯಾ. ವೇಲು ಹುಡುಗರಿಗೆ ಹೇಳಿ ಸರಿ ಪಡಿಸುತ್ತೀನಿ. ಬಾ ಇಲ್ಲಿ. ಡಿಸಿಪಿ ಹಾಗೂ ಪೊಲೀಸ್ ಕಮಿಷನರ್ ಬಳಿಗೆ ಹೋಗುವುದು ಬೇಡ. ಸರ್ಕಾರ ನಮ್ಮದಿದೆ. ನೀನು ನಮ್ಮ ಹುಡುಗ ನಮ್ಮ ತಾಲ್ಲೂಕಿನವನು’ ಎಂದು ಹನುಮಂತರಾಯಪ್ಪ ಹೇಳಿರುವುದು ಆಡಿಯೊದಲ್ಲಿದೆ.

ಇನ್ನೊಂದು ಆಡಿಯೊದಲ್ಲಿ ‘ಚೆಲುವರಾಜು ಕಥೆ ಹೇಳಿಕೊಂಡು ನಾಟಕ ಮಾಡಿಕೊಂಡು ಓಡಾಟ ನಡೆಸುತ್ತೀಯಾ. ನಾನೇ ಬಿಬಿಎಂಪಿ ಕಚೇರಿಗೆ ಹೋಗಿದ್ದೆ. ನಿನಗೆ ತೊಂದರೆ ಕೊಡದಂತೆ ಹೇಳಿದ್ದೀನಿ. ಸೋಮವಾರದ ಒಳಕ್ಕೆ ಸರಿ ಪಡಿಸಿಕೋ... ಇಲ್ಲದಿದ್ದರೆ ಗುತ್ತಿಗೆಯನ್ನು ರದ್ದು ಪಡಿಸಲು ನಾನೇ ಹೇಳ್ತೀನಿ. ಕೊಬ್ಬು ಮಾಡಿಕೊಂಡು ಓಡಾಟ ನಡೆಸಬೇಡ’ ಎಂದು ಮತ್ತೊಮ್ಮೆ ಕರೆ ಮಾಡಿದಾಗ ಹೇಳಿದ್ದಾರೆ.

‘ಆಡಿಯೊದಲ್ಲಿ ಇರುವುದು ನನ್ನದೇ ಧ್ವನಿ. ನನ್ನ ಧ್ವನಿ ಅಲ್ಲ ಎಂದು ಈಗ ಹೇಳುವುದಿಲ್ಲ. ಚೆಲುವರಾಜು ನಮ್ಮ ಸಮಾಜಕ್ಕೆ ಸೇರಿದ ವ್ಯಕ್ತಿ. ನನ್ನ ತಾಲ್ಲೂಕಿನವರು. ಈಗ ಅವರು ಕಷ್ಟದಲ್ಲಿ ಇದ್ದಾರೆ. ಸಣ್ಣ ವಿಷಯಕ್ಕೆ ದೂರು ನೀಡಬೇಡ ಎಂದು ಹೇಳಿದ್ದೆ. ಯಾರನ್ನೂ ಎತ್ತಿಕಟ್ಟಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ಸೋಮವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.