ಬೆಂಗಳೂರು: ಭಾನುವಾರ ನಿಧನರಾದ ಕವಿ ಕೆ.ಎಸ್.ನಿಸ್ಸಾರ್ ಅಹಮದ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಆರ್.ಅಶೋಕ್ ನುಡಿ ನಮನ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಅವರಿಂದ ಅಂತಿಮ ನಮನ

ಕವಿ ನಿಸಾರ್ ಅಹಮದ್ ಅವರ ನಿವಾಸಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿದರು. ಶಾಸಕರಾದ ಜಮೀರ್ ಅಹಮದ್ ಖಾನ್, ಯು.ಟಿ. ಖಾದರ್ ಜೊತೆಗೆ ಇದ್ದರು.ಈ ಸಮಯದಲ್ಲಿ ನಿಸಾರ್ ಅಹಮದ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಸಾಹಿತಿ ನಿಸಾರ್ ಅಹಮದ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ

ಕಂದಾಯ ಸಚಿವ ಅರ್.ಅಶೋಕ್ ಅವರು ಕವಿಯದ್ದೇಸಾಲುಗಳಲ್ಲಿ ನುಡಿನಮನ ಸಲ್ಲಿಸಿದ್ದಾರೆ.

ಸಚಿವ ಆರ್.ಅಶೋಕ್

"ಮತ್ತದೇ ಬೇಸರ,
ಅದೇ ಸಂಜೆ, ಅದೇ ಏಕಾಂತ.
ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ."

ನೀವು ಬರೆದ ಸಾಲುಗಳು ನಿಮ್ಮನ್ನೇ ನೆನಪಿಸುತ್ತಿದೆ. ಅದೇ ಸಂಜೆಯಲಿ, ನೀವು ನಮ್ಮಿಂದ ಬಾಹ್ಯವಾಗಿ ದೂರಾದಿರಿ. ಅಂದು ನೀವು ಗೀಚಿದ ಸಾಲುಗಳನ್ನು ಓದುತ್ತಾ ಇದ್ದರೆ ನಿಮ್ಮ ನೆನಪು ಉಮ್ಮಳಿಸಿ ಬರುವಂತೆ ಮಾಡುತ್ತಿದೆ. ಎಷ್ಟು ಸತ್ಯ ನಿಮ್ಮ ಮಾತುಗಳು. ಎಷ್ಟು ನೈಜ ನೀವು ಜೀವನವನ್ನು ವರ್ಣಿಸಿದ ಪದಗಳು. ನಾಲ್ಕು ಅಕ್ಷಗಳಲ್ಲಿ ಇಡೀ ಜೀವನವನ್ನು ನೀವು ವಿವರಿಸಿದ ಬಗೆ ಅಮೋಘ.
"ನಮಗೀಗ ಅದೇ ಬೇಸರ ..
ಅದೇ ಸಂಜೆಯಲಿ ನೀವು ದೂರಾದಿರಿ.
ನೀವಿಲ್ಲದ ಸಂಜೆಯಲಿ ಏಕಾಂತ ಭಾವ...
ನಿಮ್ಮ ಜೊತೆ ಮಾತಿಲ್ಲದೆ ನಮ್ಮ ಮನಸ್ಸೆಲ್ಲಾ ವಿಭ್ರಾಂತ"
ನೀವು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ,ಅನನ್ಯ. ನಿಮ್ಮ ಅಕ್ಷರ ಸೇವೆಯನ್ನು ಈ ಸಮಾಜ ಸದಾ ನೆನಯುತ್ತದೆ. ನಮ್ಮ ಸರ್ಕಾರ ನಿಮ್ಮ ಮೇಲಿನ ಅಭಿಮಾನ ಗೌರವದಿಂದ "
"ಶ್ರೀ ನಿಸ್ಸಾರ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಟ್ರಸ್ಟ್'ಗೆ 2-20 ಎಕರೆ ಭೂಮಿಯನ್ನು ಮಂಜೂರು ಮಾಡುವ ಮೂಲಕ ನಿಮ್ಮ ಸಮಾಜ ಸೇವೆ, ಅಕ್ಷರ ಸೇವೆಗೆ ನಮ್ಮ ಕಂದಾಯ ಇಲಾಖೆ ಕೈಜೋಡಿಸಿದೆ ಎನ್ನುವ ತೃಪ್ತಿ,ಸಮಾಧಾನ ನಮಗಿದೆ...
ಮತ್ತೆ ಹುಟ್ಟಿ ಬನ್ನಿ ಕವಿಗಳೇ...
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ...

ಕಂದಾಯ ಸಚಿವ ಆರ್ ಅಶೋಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.