ನಿಖರ ದತ್ತಾಂಶ– ವೈಜ್ಞಾನಿಕ ಜಾರಿ: ಡಿ. ಚಂದ್ರಶೇಖರಯ್ಯ
‘ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯ ವಾಸ್ತಾವಿಕ ಅಂಶಗಳ ನಿಖರವಾದ ದತ್ತಾಂಶ ಸಂಗ್ರಹಿಸಿ ಉಪ ಜಾತಿಗಳ ವರ್ಗೀಕರಣವನ್ನು ಖಚಿತಪಡಿಸಿಕೊಂಡ ಬಳಿಕ ಮಾತ್ರ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬಲಗೈ ಸಮುದಾಯಗಳು ಸಂಘಟಿತಗೊಳ್ಳಬೇಕು’ ಎಂದು ರಾಜ್ಯ ಸರ್ಕಾರಿ ಎಸ್‌ಸಿ ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಹೇಳಿದರು. 2011ರ ಜನಗಣತಿಯ ಆಧಾರದಲ್ಲಿ ಒಳ ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಿ ಅಂಕಿಅಂಶಗಳ ಸಹಿತ ವಿವರಿಸಿದ ಅವರು ‘ಪ್ರತಿ ಜಿಲ್ಲೆಯಲ್ಲಿ ಸಮುದಾಯಗಳ ಐವರು ಮುಖಂಡರು ಚರ್ಚಿಸಿ ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಬರುವ ಜಾತಿಗಳ ವಿವರ ಪಡೆದು ಎಡ ಮತ್ತು ಬಲ ಜಾತಿಗಳೆಂದು ವರ್ಗೀಕರಿಸಬೇಕು. ನಂತರ ವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.