ಶಿರಸಿ: ಕೆಪಿಸಿಸಿ ಸದಸ್ಯ ಹಾಗೂ ಶಿರಸಿಯ ಉದ್ಯಮಿ ದೀಪಕ್ ದೊಡ್ಡೂರು ಹಾಗೂ ಇವರ ಉದ್ಯಮದ ಇಬ್ಬರು ಜತೆಗಾರರ ನಿವಾಸದ ಮೇಲೆ ಶುಕ್ರವಾರ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಮೂರು ಕಾರುಗಳಲ್ಲಿ ಬಂದ ಆದಾಯ ತೆರಿಗೆ ಅಧಿಕಾರಿಗಳ ತಂಡ ದೀಪಕ್ ಅವರ ನಗರದ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದು, ಸುಮಾರು 10 ಜನ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ದೀಪಕ ಹೆಗಡೆ ಮನೆಯಲ್ಲಿ ಅವರ ಜತೆಗೆ ಅಡಿಕೆ, ರಿಯಲ್ ಎಸ್ಟೇಟ್ ಉದ್ಯಮದ ಪಾರ್ಟನರ್ ಶಿವರಾಮ ಹೆಗಡೆ ಅವರನ್ನೂ ಸಹ ಕರೆ ತಂದು ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ ಇವರ ಉದ್ಯಮದ ಇನ್ನೊಂದು ಪಾರ್ಟನರ್ ಉದ್ಯಮಿ ಅನೀಲ್ ಮುಷ್ಠಗಿ ನಿವಾಸದ ಮೇಲೂ ದಾಳಿ ನಡೆದಿದೆ. ಚುನಾವಣೆ ಹಿನ್ನೆಲೆಯ ಕಾರಣಕ್ಕೆ ದಾಳಿಯೇ? ಅಥವಾ ಉದ್ಯಮದ ವಿಷಯವಾಗಿ ದಾಳಿ ಆಗಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ದಾಳಿಯ ಹಿನ್ನೆಲೆಯಲ್ಲಿ ನಿವಾಸದ ಬಳಿ ಪೊಲೀಸರನ್ನು ನೇಮಕ ಮಾಡಲಾಗಿದೆ. ಕಾರವಾರ, ಮಂಗಳೂರು, ಹುಬ್ಬಳ್ಳಿಯ ಬಾಡಿಗೆ ಕಾರಿನಲ್ಲಿ ಅಧಿಕಾರಿಗಳು ಬಂದಿದ್ದು, ನಿವಾಸದ ಸಮೀಪಕ್ಕೆ ತೆರಳಲು ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.