ಪಾವಗಡ: ತಾಲ್ಲೂಕಿನ ಕ್ಯಾತಗಾನ ಚೆರ್ಲು ಗ್ರಾಮದ ಬಳಿಯ ಸೋಲಾರ್ ಪಾರ್ಕ್ನ 4ನೇ ಬ್ಲಾಕ್ ಮಳೆ ನೀರಿನಿಂದ ಮುಳುಗಡೆಯಾಗಿದೆ. ಈ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಮಂಗಳವಾರ ನಿಷೇಧಿಸಲಾಗಿತ್ತು.

ಯುವಕನೊಬ್ಬ ಸೋಲಾರ್ ಪ್ಯಾನಲ್ಗಳ ಮೇಲಿನಿಂದ ಜಿಗಿದು ಈಜಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೋಲಾರ್ ಪಾರ್ಕ್ನ 4ನೇ ಬ್ಲಾಕ್ಅನ್ನು ಅವಾಧ ಕಂಪನಿ ನಿರ್ವಹಿಸುತ್ತಿದೆ. ಸತತವಾಗಿ ಮಳೆ ಬೀಳುತ್ತಿದ್ದು, ಕ್ಯಾತಗಾನಚೆರ್ಲು ಕೆರೆ ತುಂಬಿದೆ. ಕೆರೆಗೆ ಹೊಂದಿಕೊಂಡಿರುವ ಬ್ಲಾಕ್ 4ಕ್ಕೆ ಸೇರಿದ ಸುಮಾರು 30 ಎಕರೆ ಪ್ರದೇಶ ಮುಳುಗಡೆಯಾಗಿದೆ. ಇಲ್ಲಿರುವ ಸೋಲಾರ್ ಪ್ಯಾನಲ್ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ.

ಕೆರೆ ಹಿನ್ನೀರಿನಿಂದ ಸೋಲಾರ್ ಪ್ರದೇಶ ಮುಳುಗಡೆಯಾಗಿದ್ದು, ಇನ್ನು ಒಂದು ಅಡಿ ನೀರು ಹೆಚ್ಚಾದರೂ ತೀವ್ರ ತೊಂದರೆಯಾಗುತ್ತದೆ. ತಕ್ಷಣ ಸಮಸ್ಯೆ ಬಗೆಹರಿಸುವಂತೆ ಅವಾಧ ಕಂಪನಿಯವರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ. ಬುಧವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ.

ಮತ್ತೊಂದೆಡೆ ಸೋಲಾರ್ ಪಾರ್ಕ್ಗಾಗಿ ಜಮೀನು ನೀಡಿದ ರೈತರ ಹಿತ ಕಾಯದ ಅಧಿಕಾರಿಗಳು, ಖಾಸಗಿ ಕಂಪನಿಗೆ ಸಮಸ್ಯೆಯಾದಾಗ ತುರ್ತಾಗಿ ಸಭೆ ಕರೆದಿದ್ದಾರೆ. ಕೆರೆ ಕೋಡಿ ಎತ್ತರ ತಗ್ಗಿಸಿ ಕೆರೆಯ ನೀರು ಹೊರ ಬಿಡುವ ಹುನ್ನಾರ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಕೆರೆ ನೀರು ಹೊರ ಬಿಡಲು ಅವಕಾಶ ನೀಡುವುದಿಲ್ಲ ಎಂದು ಈ ಭಾಗದ ರೈತರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.