ಶಿವಮೊಗ್ಗ: ‘ಮತ ಬ್ಯಾಂಕ್ ರಾಜಕಾರಣ ಕ್ಕಾಗಿ ಅಲ್ಪಸಂಖ್ಯಾತರ ಓಲೈಕೆ ಮಾಡುವು ದನ್ನು ಹೀಗೆಯೇ ಮುಂದುವರಿಸಿದರೆ ಕಾಂಗ್ರೆಸ್ನವರನ್ನು ಹುಡುಕಿ ಕೊಲ್ಲುವ ದಿನಗಳು ಬಂದರೂ ಆಶ್ಚರ್ಯವಿಲ್ಲ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

‘ಕಾಂಗ್ರೆಸ್ ಮಿತ್ರರೇ, ಮುಸ್ಲಿಮರ ತುಷ್ಟೀಕರಣ ನೀತಿಯನ್ನು ಇನ್ನಾದರೂ ಬಿಡಿ. ಇಲ್ಲದಿದ್ದರೆ ಹಿಂದೂಗಳು ದಂಗೆ ಏಳಲಿದ್ದಾರೆ. ಓಟಿನ ಆಸೆಗಾಗಿ ರಾಜ್ಯವನ್ನು ಇಸ್ಲಾಮೀಕರಣ ಮಾಡಬೇಡಿ’ ಎಂದು ಬುಧವಾರ ಇಲ್ಲಿ
ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ರಾಜ್ಯದಲ್ಲಿ ದಿನೇದಿನೇ ವಕ್ಫ್ ಆಸ್ತಿ ನಮೂದು ಪ್ರಕರಣ ಹೆಚ್ಚಾಗುತ್ತಲೇ ಇವೆ. ಈ ಅಚಾತುರ್ಯಗಳನ್ನು ಕಂಡರೂ ರಾಜ್ಯ ಸರ್ಕಾರ ಸುಮ್ಮನಿದೆ. ರೈತರ ಭೂಮಿ, ದೇವಸ್ಥಾನ, ಮಠಗಳು ಅಷ್ಟೇ ಏಕೆ ಶಾಲೆ– ಕಾಲೇಜುಗಳು, ಪುರಾತತ್ವ ಇಲಾಖೆಯ ಆಸ್ತಿಗಳನ್ನೂ ವಕ್ಫ್ ಆಸ್ತಿ ಎಂದು ಬದಲಾಯಿಸಲಾಗಿದೆ. ವಿಶ್ವೇಶ್ವರಯ್ಯನವರು ಹುಟ್ಟಿದ ಗ್ರಾಮವನ್ನೂ ಇವರು ಬಿಟ್ಟಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಡಾ.ಬಿ.ಆರ್. ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸೇರಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಹೇಳುವ ಮೂಲಕ ಅವರಿಗೂ ಅಪಮಾನ ಮಾಡಲಾಗುತ್ತಿದೆ. ಕಾಂಗ್ರೆಸ್ನ ಒಬ್ಬ ನಾಯಕನೂ ಇದರ ವಿರುದ್ಧ ತುಟಿ ಬಿಚ್ಚುತ್ತಿಲ್ಲ ಏಕೆ? ಎಂದು ಅವರು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಘೋಷಣೆ ಮಾಡಲು ಹೊರಟಿದ್ದಾರೆ. ಕೇಳಿದರೆ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಇವರೇನು ಹಿಂದೂಸ್ತಾನವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಶೇ 4ರಷ್ಟು ಮೀಸಲಾತಿ ನೀಡಬೇಕೇ? ಇದು ಓಲೈಕೆ ರಾಜಕಾರಣವಲ್ಲವೇ?’ ಎಂದು ಪ್ರಶ್ನಿಸಿದರು.

‘ಧರ್ಮರಕ್ಷಣೆಗೆ ಮಠ ಬಿಟ್ಟು ಬನ್ನಿ’

ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ): ‘ಸಾವಿರಾರು ವರ್ಷಗಳ ಇತಿಹಾಸವಿರುವ ಮಠ ಮಂದಿರಗಳನ್ನು ವಕ್ಫ್ ಕಬಳಿಸಲು ನಿಂತಿದೆ. 33 ಲಕ್ಷ ಎಕರೆ ತನ್ನದೆಂದು ವಕ್ಫ್ ಬೇಡಿಕೆ ಇಟ್ಟಿದೆ. ಹೀಗಾದರೆ ದೇಶದಲ್ಲಿ ಹಿಂದೂಗಳು ಉಳಿಯಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದರು.

ಸೈದಾಪುರ ಗ್ರಾಮದಲ್ಲಿ ಬುಧವಾರ ಶಿವಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಬಳಿಕ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು,‘ದೇಶದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಧರ್ಮ ಮತ್ತು ದೇಶ ರಕ್ಷಣೆಗಾಗಿ ಎಲ್ಲ ಮಠಾಧೀಶರು ಮಠ ಬಿಟ್ಟು ಹೊರಬಂದು ಮಾತನಾಡ ಬೇಕು. ಈಗ ಮಠಾಧೀಶ ರನ್ನು ಹೆದರಿಸಲಾಗುತ್ತಿದೆ. ಈಗಲೂ ಮಾತನಾಡದಿದ್ದರೆ ಮುಂದೆಂದೂ ಮಾತನಾಡದ ಸ್ಥಿತಿ ಬರುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.