ಆರು ಸದಸ್ಯರ ಪತ್ರದಲ್ಲಿ ಏನಿದೆ?
‘ಕಾರ್ಯದರ್ಶಿ ಅನಾವಶ್ಯಕವಾಗಿ ಆಕ್ಷೇಪವನ್ನು ಸೃಷ್ಟಿ ಮಾಡಿಕೊಂಡು ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನೆ ಮಾಡಿ ಆಯೋಗದ ನಿರ್ಣಯವನ್ನು ಅಗೌರವಿಸುತ್ತಾರೆ. ಕಾರ್ಯದರ್ಶಿಯವರೇ ಆಯೋಗಕ್ಕಿಂತ ಮೇಲಿನವರು ಎಂಬಂತೆ ವರ್ತಿಸುತ್ತಾರೆ. ಕಾರ್ಯದರ್ಶಿಯವರ ಈ ರೀತಿಯ ವರ್ತನೆ ನಿಯಮದ ಪ್ರಕಾರ ಸರಿಯಾದುದಲ್ಲ. ಆದ್ದರಿಂದ, ಕಾರ್ಯದರ್ಶಿಯು ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಸಮಿತಿ ಶಿಫಾರಸು ಮಾಡಿರುವ ಅಭ್ಯರ್ಥಿಗೆ ನೇಮಕಾತಿ ಆದೇಶ ಜಾರಿ ಮಾಡುವವರೆಗೂ ಈ ಪತ್ರಕ್ಕೆ ಸಹಿ ಹಾಕಿರುವ ನಾವು ಆಯೋಗದ ಸಭೆಗಳಿಗೆ ಹಾಜರಾಗುವುದಿಲ್ಲವೆಂದೂ ಮತ್ತು ಆಯೋಗಕ್ಕೆ ಸಲ್ಲಿಕೆಯಾಗುವ ಯಾವುದೇ ಆಯ್ಕೆ ಪಟ್ಟಿಗಳಿಗೆ ಅನುಮೋದನೆ ನೀಡುವುದಿಲ್ಲವೆಂದು ಅಧ್ಯಕ್ಷರಿಗೆ ಪತ್ರ ನೀಡಿದ್ದೇವೆ’ ಎಂದು ಸಹಿ ಹಾಕಿದ ಸದಸ್ಯರೊಬ್ಬರು ಹೇಳಿದರು.
ಪತ್ರಕ್ಕೆ ವಿಜಯಕುಮಾರ್ ಡಿ. ಕುಚನೂರೆ, ಎಂ.ಬಿ. ಹೆಗ್ಗಣ್ಣವರ, ಡಾ. ಶಾಂತಾ ಹೊಸಮನಿ, ಡಾ.ಎಚ್.ಎಸ್. ನರೇಂದ್ರ, ಬಿ.ವಿ. ಗೀತಾ, ಮುಸ್ತಫಾ ಹುಸೇನ್ ಸಯ್ಯದ್ ಅಜೀಜ್ ಸಹಿ ಹಾಕಿದ್ದಾರೆ. ಸದಸ್ಯರಾದ ರೊನಾಲ್ಡ್ ಅನಿಲ್ ಫರ್ನಾಂಡಿಸ್, ಆರ್. ಗಿರೀಶ್, ಬಿ. ಪ್ರಭುದೇವ, ಶಕುಂತಲಾ ಎಸ್. ದುಂಡಿಗೌಡರ್ ಸಹಿ ಹಾಕಿಲ್ಲ.