ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯರು ಸೇರಿ 16 ಸಿಬ್ಬಂದಿ ನಾಪತ್ತೆ

Published 17 ಜುಲೈ 2024, 15:24 IST
Last Updated 17 ಜುಲೈ 2024, 15:24 IST
ಅಕ್ಷರ ಗಾತ್ರ

ದುಬೈ/ ಮಸ್ಕತ್: ಒಮಾನ್‌ನ ಕರಾವಳಿ ಪ್ರದೇಶದಲ್ಲಿ ಮಗುಚಿಬಿದ್ದ ತೈಲ ಟ್ಯಾಂಕರ್‌ನಲ್ಲಿದ್ದ 13 ಭಾರತೀಯರು ಸೇರಿದಂತೆ ಒಟ್ಟಾರೆ 16 ಮಂದಿ ನಾಪತ್ತೆಯಾಗಿದ್ದಾರೆ.‌  

ಮುಳುಗಿರುವ ಟ್ಯಾಂಕರ್ ಪತ್ತೆ ಮತ್ತು ಅದರಲ್ಲಿದ್ದ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಒಮನ್ ಕಡಲ ಭದ್ರತಾ ಕೇಂದ್ರ ತಿಳಿಸಿದೆ. 

‘ಪ್ರೆಸ್ಟಿಜ್ ಫಾಲ್ಕೊನ್’ ತೈಲ ಟ್ಯಾಂಕರ್‌ನಲ್ಲಿ 13 ಭಾರತೀಯರು, ಮೂವರು ಶ್ರೀಲಂಕಾ ಮೂಲದ ಸಿಬ್ಬಂದಿ ಇದ್ದರು ಸರ್ಕಾರ ತಿಳಿಸಿದೆ. 

ಈ ತೈಲ ತುಂಬಿದ ಟ್ಯಾಂಕರ್ ಹಡಗು ದುಬೈನ ಹಮ್ರಿಯಾ ಬಂದರು ಪ್ರದೇಶದಿಂದ ಏಡನ್‌ನ ಯೆಮೆನಿ ಬಂದರು ನಗರಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT