ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಆತಂಕದ ಹಿನ್ನೆಲೆಯಲ್ಲಿ ದಿಢೀರನೆ ಗುರುವಾರ ತಡರಾತ್ರಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ದೇಶದ ಉಳಿದ ಭಾಗಗಳು ಪ್ರವಾಸೋದ್ಯಮಕ್ಕೆ ಮುಕ್ತವಾಗಿದ್ದರೂ ಸಹ ಅಬುಧಾಬಿ ಮಾತ್ರ ಈ ನಿರ್ಧಾರಕ್ಕೆ ಬಂದಿದೆ.

ಸೋಮವಾರದಿಂದ ಲಾಕ್ಡೌನ್ ಪ್ರಾರಂಭವಾಗಲಿದ್ದು, ಪ್ರತಿದಿನ ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 5 ಗಂಟೆವರೆಗೆ ಇರುತ್ತದೆ ಎಂದು ಸರ್ಕಾರಿ ಸ್ವಾಮ್ಯದ ಡಬ್ಲ್ಯುಎಎಂ ಸುದ್ದಿ ಸಂಸ್ಥೆ ಹೇಳಿದೆ. ಸೋಮವಾರದಿಂದ ಯುಎಇಯಲ್ಲಿ ಯುಎಇ ಸುದೀರ್ಘ ಈದ್ ಅಲ್-ಅಧಾ ರಜಾದಿನಗಳು ಆರಂಭವಾಗುತ್ತಿವೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಬುಧಾಬಿ ಪ್ರವೇಶಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಲಾಕ್ಡೌನ್ ಘೋಷಿಸಲಾಗಿದೆ ಎನ್ನಲಾಗಿದೆ.

ಅಬುಧಾಬಿಯ ತುರ್ತು, ಬಿಕ್ಕಟ್ಟು ಮತ್ತು ವಿಪತ್ತುಗಳ ಸಮಿತಿಯು ಲಾಕ್ಡೌನ್ ಅನ್ನು ‘ರಾಷ್ಟ್ರೀಯ ಶುದ್ಧೀಕರಣ ಕಾರ್ಯಕ್ರಮ’ದ ಭಾಗವೆಂದು ವಿವರಿಸಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದ 2020 ರ ಲಾಕ್ಡೌನ್ ಸಮಯದಲ್ಲೂ ಇದೇ ಪದವನ್ನು ಬಳಸಿತ್ತು.

ವರ್ಷದ ಹಿಂದೆ ದುಬೈ ಪ್ರವಾಸೋದ್ಯಮಕ್ಕೆ ಅನುಮತಿ ನೀಡಿದ ನಂತರ ಅಬುಧಾಬಿ ಕಠಿಣ ನಿಲುವು ತಳೆದಿತ್ತು. ಅಬುಧಾಬಿ ಪ್ರವೇಶಿಸುವವರಿಗೆ ಆರ್ಟಿ–ಪಿಸಿಆರ್ ಪರೀಕ್ಷಾ ವರದಿ ಕಡ್ಡಾಯಗೊಳಿಸಲಾಗಿತ್ತು. ಸಾಮೂಹಿಕ ಲಸಿಕಾ ಕಾರ್ಯಕ್ರಮದ ಹೊರತಾಗಿಯೂ ದುಬೈನಲ್ಲಿ ನಿತ್ಯ 1,500 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಡುತ್ತಿವೆ. ಆದರೂ, ಪ್ರವಾಸೋದ್ಯಮ ಮತ್ತು ವ್ಯವಹಾರಕ್ಕೆ ಮುಕ್ತಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.