ಲಾಸ್ ಏಂಜಲೀಸ್: ಸಿನಿಮಾ ಚಿತ್ರೀಕರಣದ ವೇಳೆ ಅಮೆರಿಕದ ನಟ ಆಲೆಕ್ ಬಾಲ್ಡ್‌ವಿನ್ ಬಳಸುತ್ತಿದ್ದ ಬಂದೂಕಿನಿಂದ ಹಾರಿದ ಗುಂಡು ಛಾಯಾಗ್ರಾಹಕಿಯನ್ನು ಬಲಿ ಪಡೆದಿದೆ. ನ್ಯೂ ಮೆಕ್ಸಿಕೊದಲ್ಲಿ ಚಿತ್ರೀಕರಣದ ಸೆಟ್‌ನಲ್ಲಿ ಈ ದುರ್ಘಟನೆ ನಡೆದಿರುವುದಾಗಿ ಅಮೆರಿಕದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

'ರಸ್ಟ್' (Rust) ಹೆಸರಿನ ಸಿನಿಮಾ ಚಿತ್ರೀಕರಣದಲ್ಲಿ ಪಾರ್ಪಟಿ ಗನ್‌ನಿಂದ ನಟ ಬಾಲ್ಡ್‌ವಿನ್ ಸಿಡಿಸಿದ ಗುಂಡು ಒಬ್ಬರ ಸಾವಿಗೆ ಕಾರಣವಾಗಿದೆ. ಈ ಘಟನೆಯಲ್ಲಿ ಛಾಯಾಗ್ರಾಹಕಿ ಹಲಿನಾ ಹಚಿನ್ಸ್ (42) ಸಾವಿಗೀಡಾದರೆ, ನಿರ್ದೇಶಕ ಜೋಲ್ ಸೌಜಾ (48) ಗಾಯಗೊಂಡಿದ್ದಾರೆ.

19ನೇ ಶತಮಾನದ ಕಥೆಯಾಧಾರಿತ ಸಿನಿಮಾದಲ್ಲಿ ಬಾಲ್ಡ್‌ವಿನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಘಟನೆ ಸಂಬಂಧ ತನಿಖೆ ಮುಂದುವರಿದಿದ್ದು, ಯಾವುದೇ ದೂರುದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.